ಧ್ರುವ ಸರ್ಜಾ ಪವರ್ ಪ್ರೂವ್ ಮಾಡಿದ 'ಪೊಗರು': 18 ಗಂಟೆಗಳಲ್ಲಿ ಇಷ್ಟೊಂದು ಹಿಟ್ಸ್

Recommended Video

Dhruva Sarja Pogaru Dialogue Trailer Got 5 Million views in just 18 hours | FILMIBEAT KANNADA

'ಪೊಗರು' ಸಿನಿಮಾದ ಟ್ರೇಲರ್ ನಿನ್ನೆ (ಅಕ್ಟೋಬರ್ 24) ರಂದು ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ಈ ಟ್ರೇಲರ್ ಧೂಳೆಬ್ಬಿಸುತ್ತಿದೆ. ಧ್ರುವ ಸರ್ಜಾ ಪವರ್ ಅನ್ನು ಈ ಟ್ರೇಲರ್ ಪ್ರೂ ಮಾಡಿದೆ.

ಸದ್ಯ, ಟ್ರೇಲರ್ 5 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. 1 ಲಕ್ಷದ 60 ಸಾವಿರ ಜನರು ಟ್ರೇಲರ್ ಲೈಕ್ ಮಾಡಿದ್ದಾರೆ. ಟ್ರೇಲರ್ ಬಿಡುಗಡೆಯಾದ 18 ಗಂಟೆಗಳ ಒಳಗೆ ಬರೋಬ್ಬರಿ 5 ಮಿಲಿಯನ್ ವೀಕ್ಷಣೆ ಪಡೆದುಕೊಂಡು, ಮುನ್ನುಗುತ್ತಿದೆ. ಟ್ರೇಲರ್ ಬಿಡುಗಡೆಯಾದ 42 ನಿಮಿಷಕ್ಕೆ 2 ಮಿಲಿಯನ್ ವೀಕ್ಷಣೆ ಸಿಕ್ಕಿತ್ತು. 51 ನಿಮಿಷದಲ್ಲಿ 1 ಮಿಲಿಯನ್ ಹಿಟ್ಸ್ ಗಡಿ ದಾಟಿತ್ತು.

ಸಿನಿಮಾದ ಡೈಲಾಗ್ ಟ್ರೇಲರ್ ಇದಾಗಿದ್ದು, ಸಿಕ್ಕಾಪಟ್ಟೆ ಪಂಚಿಂಗ್ ಡೈಲಾಗ್ ಗಳು ಇವೆ. ಮಾಸ್ ಡೈಲಾಗ್ ಅನ್ನು ತಮ್ಮ ಗತ್ತಿನ ಶೈಲಿಯಲ್ಲಿ ಧ್ರುವ ಸರ್ಜಾ ಹೇಳಿದ್ದಾರೆ. ಸಖತ್ ಆಕ್ಷನ್ ದೃಶ್ಯಗಳು ಕೂಡ ಟ್ರೇಲರ್ ನಲ್ಲಿ ಇವೆ. ಸಿನಿಮಾಗಾಗಿ ಧ್ರುವ ಉದ್ದ ಕೂದಲು, ಗಡ್ಡ ಬಿಟ್ಟಿದ್ದಾರೆ. ಅದ್ದೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.

Pogaru Dialogue Trailer Got 5 Million Views In Just 18 Hours

ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಿತ್ರದ "ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು" ಎಂಬ ಡೈಲಾಗ್ ರಶ್ಮಿಕಾಗೆ ಹೇಳಿದ್ದಾರೆ ಎಂದು ನೆಟ್ಟಿಗರು ಕಾಲು ಎಳೆಯುತ್ತಿದ್ದಾರೆ. ಕಿರಿಕ್ ಪಾರ್ಟಿ ಲುಕ್ ನಲ್ಲಿಯೇ, ಇಲ್ಲಿಯೂ ಕನ್ನಡಕ ಹಾಕಿಕೊಂಡು ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

ನಂದ ಕಿಶೋರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಸದ್ಯದಲ್ಲಿಯೇ ಸಿನಿಮಾದ ಮತ್ತೊಂದು ಟ್ರೇಲರ್ ಬಿಡುಗಡೆ ಆಗಲಿದೆ.

More from Filmibeat

English summary
Kannada actor Dhruva Sarja and Rashmika Mandanna starrer Pogaru dialogue trailer got 5 million views in just 18 hours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X