ಸರಳವಾಗಿ ನೆರವೇರಿತು ಧ್ರುವ ಸರ್ಜಾ 'ಪೋಗರು' ಸಿನಿಮಾದ ಮುಹೂರ್ತ
ನಟ ಧ್ರುವ ಸರ್ಜಾ ಅಭಿನಯದ 'ಪೋಗರು' ಸಿನಿಮಾದ ಮುಹೂರ್ತ ಸದ್ಯ ನಡೆದಿದೆ. ಇಂದು ಚಿತ್ರದ ಮುಹೂರ್ತ ಕಾರ್ಯಕ್ರಮ ಸರಳವಾಗಿ ನೆರವೇರಿದೆ.
ಇಂದು ಬೆಳಗ್ಗೆ ರಾಜಾಜಿನಗರದ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನದಲ್ಲಿ 'ಪೊಗರು' ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ನಿರ್ದೇಶಕ ನಂದಕಿಶೋರ್ ನಿರ್ದೇಶನದ ಎಲ್ಲಾ ಚಿತ್ರಗಳ ಪೂಜೆ ಇದೇ ದೇವಸ್ಥಾನದಲ್ಲಿ ನಡೆದಿದ್ದು, 'ಪೊಗರು' ಚಿತ್ರಕ್ಕೂ ಇದೇ ದೇವಸ್ಥಾನದಲ್ಲಿ ಚಾಲನೆ ಸಿಕ್ಕಿದೆ. ಇನ್ನು ಕಾರ್ಯಕ್ರಮದಲ್ಲಿ ನಟ ಧ್ರುವಸರ್ಜಾ ನಿರ್ದೇಶಕ ನಂದಕಿಶೋರ್ ಮತ್ತು ಚಿತ್ರತಂಡ ಭಾಗಿಯಾಗಿತ್ತು.

'ಪೊಗರು' ಸಿನಿಮಾದಲ್ಲಿ ಧ್ರುವ ಸರ್ಜಾ ಶಾಲೆಯ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಕಾರಣಕ್ಕಾಗಿ 30 ಕೆ ಜಿ ತೂಕ ಇಳಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಉಳಿದಂತೆ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವಾಸ್ತವ್ ಇಬ್ಬರು 'ಪೊಗರು' ಚಿತ್ರಕ್ಕೆ ಆಯ್ಕೆ ಆಗಿದ್ದು ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡುವುದಷ್ಟೇ ಬಾಕಿ ಇದೆ.
More from Filmibeat
English summary
Actor Dhruva Sarja staring kannada movie Pogaru launched today (December14th). The movie is directed by Nanda Kishore.


Click it and Unblock the Notifications











