'ಪೊಗರು' ಬಿಡುಗಡೆ ದಿನಾಂಕದ ಬಗ್ಗೆ ಧ್ರುವ ಸರ್ಜಾ ಮಾತು
Recommended Video
Old monk movie Muhurtha : ನೈಟ್ ಟೈಮ್ ನೆನಪಾಗೋದು ಟೈಟಲ್ ನಲ್ಲಿದೆ ಅಂದ್ರು ಧೃವಾ | Dhruva Sarja | Srini
'ಪೊಗರು' ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ನಿರೀಕ್ಷೆ ಚಿತ್ರಭಿಮಾನಿಗಳಲ್ಲಿ ಇದೆ. ಇದೀಗ ಸಿನಿಮಾ ಬಿಡುಗಡೆಯ ಬಗ್ಗೆ ಸ್ವತಃ ನಟ ಧ್ರುವ ಸರ್ಜಾ ಮಾತನಾಡಿದ್ದಾರೆ.
'ಒಲ್ಡ್ ಮಾಂಕ್' ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಆಗಮಿಸಿದ್ದರು. ಈ ವೇಳೆ 'ಪೊಗರು' ಸಿನಿಮಾದ ಬಿಡುಗಡೆ ದಿನಾಂಕದ ಪ್ರಶ್ನೆಗೆ ಧ್ರುವ ಸರ್ಜಾ ಉತ್ತರ ನೀಡಿದ್ದಾರೆ.
ಏಪ್ರಿಲ್ ನಲ್ಲಿ 'ಪೊಗರು' ಸಿನಿಮಾ ಬಿಡುಗಡೆ ಆಗಲಿದೆಯಂತೆ. ಸೆನ್ಸಾರ್ ಆದ ಬಳಿಕ ಸರಿಯಾದ ದಿನಾಂಕವನ್ನು ಘೋಷಣೆ ಮಾಡಲಾಗುವುದು ಎಂದು ಧ್ರುವ ತಿಳಿಸಿದ್ದಾರೆ. ಏಪ್ರಿಲ್ ನಲ್ಲಿ ಬೇರೆ ನಟರ ದೊಡ್ಡ ಸಿನಿಮಾಗಳು ಬಂದರೆ, ಅವುಗಳ ನಂತರ 'ಪೊಗರು' ರಿಲೀಸ್ ಆಗಲಿದೆಯಂತೆ.

ಮಾರ್ಚ್ ತಿಂಗಳಲ್ಲಿ ಆಡಿಯೋ ಹಾಗೂ ಎರಡನೇ ಟ್ರೇಲರ್ ರಿಲೀಸ್ ಮಾಡಿವ ತಯಾರಿ ನಡೆಯುತ್ತಿದೆಯಂತೆ. ಟ್ರೇಲರ್ ಬಂದು ಒಂದು ತಿಂಗಳ ಬಳಿಕ ಸಿನಿಮಾ ತೆರೆಗೆ ಬರುತ್ತದೆ.
ಅಂದಹಾಗೆ, 'ಪೊಗರು' ನಂದ ಕಿಶೋರ್ ನಿರ್ದೇಶನ ಸಿನಿಮಾ. ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
More from Filmibeat
English summary
Actor Dhruva Sarja's 'Pogaru' kannada movie will be releasing on April.


Click it and Unblock the Notifications











