For Quick Alerts
  ALLOW NOTIFICATIONS  
  For Daily Alerts

  'ಮಲ್ಲಕಂಬ' ಪ್ರದರ್ಶನ ಮಾಡಲಿದ್ದಾರೆ ಆಕ್ಷನ್ ಪ್ರಿನ್ಸ್

  By Pavithra
  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಓಡುವ ಕುದುರೆ. ಎರಡು ವರ್ಷ ತಡವಾದರೂ ಬೇಸರವಿಲ್ಲದೆ ಧ್ರುವ ಸರ್ಜಾ ಅವರ ಚಿತ್ರವನ್ನು ಖುಷಿಯಿಂದ ನೋಡುತ್ತಾರೆ ಕನ್ನಡ ಸಿನಿಮಾ ಪ್ರೇಕ್ಷಕರು.

  ಭರ್ಜರಿ ಸಿನಿಮಾದ ನಂತರ ಪೊಗರು ಸಿನಿಮಾದಲ್ಲಿ ಬ್ಯುಸಿ ಆಗಿರುವ ಧ್ರುವ ಸಾಕಷ್ಟು ದಿನಗಳಿಂದ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಕಾರಣ ಪೊಗರು ಸಿನಿಮಾದಲ್ಲಿ 14 ವರ್ಷದ ಬಾಲಕನ ಪಾತ್ರದಲ್ಲಿ ಅಭಿನಯಿಸುವುದಕ್ಕಾಗಿ ಧ್ರುವ ತಯಾರಿ ಮಾಡಿಕೊಂಡಿದ್ದರು. ಗೆಟಪ್ ರಿವಿಲ್ ಆಗಬಾರದು ಎಂದು ಯಾವುದೇ ಸಮಾರಂಭವನ್ನು ಅಟೆಂಡ್ ಮಾಡುತ್ತಿರಲಿಲ್ಲ.

  ಇತ್ತೀಚಿಗಷ್ಟೆ ಧ್ರುವ ಪೊಗರು ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಮುಗಿಸಿದ್ದು ಈಗ ಸೆಕೆಂಡ್ ಗೆಟಪ್ ಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಧ್ರುವ ಸಿನಿಮಾಗಾಗಿ ಮಲ್ಲಕಂಬ ಕಲೆಯನ್ನು ಕಲಿತಿದ್ದಾರಂತೆ. ಚಿತ್ರೀಕರಣಕ್ಕಾಗಿ ತೂಕ ಇಳಿಸಿಕೊಂಡಿದ್ದ ಧ್ರುವ ಮತ್ತದೇ ಹಳೆ ಗೆಟಪ್ ಗೆ ಮರಳಿದ್ದಾರಂತೆ. ಹೀಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಪೊಗರು ಚಿತ್ರತಂಡದಿಂದ ಬಂದಿದೆ. ಮುಂದೆ ಓದಿ

  ಮಲ್ಲಕಂಬ ಪ್ರದರ್ಶನ ಮಾಡುತ್ತಾರೆ ಧ್ರುವ

  ಮಲ್ಲಕಂಬ ಪ್ರದರ್ಶನ ಮಾಡುತ್ತಾರೆ ಧ್ರುವ

  ನಟ ಧ್ರುವ ಸರ್ಜಾ ಚಿತ್ರರಂಗದಲ್ಲಿ ಅದ್ಬುತ ನಟ ಎಂದು ಗುರುತಿಸಿಕೊಂಡವರು. ಅಭಿನಯಿಸಿರುವ ಮೂರೇ ಚಿತ್ರದಲ್ಲಿ ಜನರ ಮನಸ್ಸು ಗೆದ್ದು ಆಕ್ಷನ್ ಪ್ರಿನ್ಸ್ ಎಂದು ಬಿರುದು ಪಡೆದುಕೊಂಡವರು. ಸದ್ಯ ಪೊಗರು ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಧ್ರುವ ಸಿನಿಮಾದಲ್ಲಿ ಮಲ್ಲಕಂಬ ಪ್ರದರ್ಶನ ಮಾಡಲಿದ್ದಾರಂತೆ.

  ಸಿನಿಮಾಗಾಗಿ ಮಲ್ಲಕಂಬ ಕಲಿತ ನಟ

  ಸಿನಿಮಾಗಾಗಿ ಮಲ್ಲಕಂಬ ಕಲಿತ ನಟ

  ಪೊಗರು ಸಿನಿಮಾಗಾಗಿ ಧ್ರುವ ಮಲ್ಲಕಂಬ ಕಲೆಯನ್ನು ಕಲಿತುಕೊಂಡಿದ್ದಾರೆ. ಅದಕ್ಕಾಗಿ ಮಲ್ಲಕಂಬ ದಲ್ಲಿ ಪರಿಣತಿ ಹೊಂದಿದ್ದವರಿಂದ ಕರೆಸಿ ತರಬೇತಿ ಕೊಡಿಸಲಾಗಿದ್ಯಂತೆ.

  ಹೊಸ ಲುಕ್ ನಲ್ಲಿ ಧ್ರುವ

  ಹೊಸ ಲುಕ್ ನಲ್ಲಿ ಧ್ರುವ

  ಕಳೆದ ಎರಡು ಸಿನಿಮಾಗಳಲ್ಲಿ ಧ್ರುವ ಸರ್ಜಾ ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಪೊಗರು ಚಿತ್ರದಲ್ಲಿ ಬೇರೆಯದ್ದೇ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.

  ಕೊನೆಯ ಹಂತದ ಚಿತ್ರೀಕರಣ

  ಕೊನೆಯ ಹಂತದ ಚಿತ್ರೀಕರಣ

  ಅಣ್ಣ ಮದುವೆ ಸಮಾರಂಭ ಮುಗಿಸಿಕೊಂಡು ಬಂದಿರುವ ಧ್ರುವ ಸದ್ಯ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಮೇ 20 ರಿಂದ ಕೊನೆಯ ಹಂತದ ಚಿತ್ರೀಕರಣ ಶುರುವಾಗಲಿದ್ದು ನಂದಕಿಶೋರ್ ಹಾಗೂ ಧ್ರುವ ಕಾಂಬಿನೇಶನ್ ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಾಣುವ ಸೂಚನೆ ನೀಡುತ್ತಿದೆ.

  English summary
  In Pogaru kannada movie Dhruva Sarja performs them on a Mallakamba. Nandakishor directing Pogaru movie. final schedule of the film will begin on May 20

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X