For Quick Alerts
  ALLOW NOTIFICATIONS  
  For Daily Alerts

  1000 ಚಿತ್ರಮಂದಿರದಲ್ಲಿ ಧ್ರುವ ಸರ್ಜಾ ಪೊಗರು ರಿಲೀಸ್

  |

  ಫೆಬ್ರವರಿ 19 ರಂದು ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆಕಾಣುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಪೊಗರು ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ ಪೊಗರು ಸಿನಿಮಾ 1000ಕ್ಕಿಂತ ಹೆಚ್ಚು ಥಿಯೇಟರ್‌ನಲ್ಲಿ ಪ್ರದರ್ಶನವಾಗಲಿದೆ.

  Dhruva Sarjaಗೆ ನಿಜಕ್ಕೂ ಮೈಲೇಜ್ ಕೊಡುತ್ತಾ ಪೊಗರು | Filmibeat Kannada

  ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದ ಪೊಗರು ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಬಾಡಿ ಟ್ರಾನ್ಸ್‌ಫರ್‌ಮೇಶನ್‌ಗೆ ಹೆಚ್ಚು ಒತ್ತು ನೀಡಿದ್ದು, ಹಾಗಾಗಿ, ಸಿನಿಮಾ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

  'ಪೊಗರು' ಸಿನಿಮಾಗಾಗಿ ಧ್ರುವ ಸರ್ಜಾ ಮೂರು ತಿಂಗಳು ಊಟ ಬಿಟ್ಟಿದ್ರಂತೆ'ಪೊಗರು' ಸಿನಿಮಾಗಾಗಿ ಧ್ರುವ ಸರ್ಜಾ ಮೂರು ತಿಂಗಳು ಊಟ ಬಿಟ್ಟಿದ್ರಂತೆ

  ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಡೆ 10ನೇ ತರಗತಿಯ ವಿದ್ಯಾರ್ಥಿಯಾಗಿ ನಟಿಸಿದ್ದು, ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರು. ಆಮೇಲೆ ಮತ್ತೆ 60 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಅದಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಊಟ, ನಿದ್ದೆ ಎಲ್ಲ ಬಿಟ್ಟು ಕೆಲಸ ಮಾಡಿದ್ದಾರೆ.

  ನಂದ ಕಿಶೋರ್ ನಿರ್ದೇಶಿಸಿರುವ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ನಾಯಕರಾಗಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ಜಗಪತಿ ಬಾಬು, ಧನಂಜಯ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ಈಗಾಗಲೇ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್ ಹಾಗೂ ಖರಾಬು ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಚಂದನ್ ಶೆಟ್ಟಿಯ ಮ್ಯೂಸಿಕ್ ಸೂಪರ್ ಎನಿಸಿಕೊಂಡಿದೆ.

  English summary
  Action Prince Dhruva Sarja's Pogaru Movie to Release in 1000 Theaters in Three Languages. movie will hit screen on february 19th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X