'ಪೊಗರು' ಏರಿಸಿಕೊಂಡು ಬಂದ ಧ್ರುವ: ವಿಡಿಯೋ ಹಾಡು ಬಿಡುಗಡೆ

'ಪೊಗರು' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇಂದು ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಆದರೆ ಕಾರ್ಯಕ್ರಮಕ್ಕೂ ಮುನ್ನಾ, ಪೊಗರು ಸಿನಿಮಾದ ವಿಡಿಯೋ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

Recommended Video

ಇದೇ ಕಾರಣಕ್ಕೆ ಪೊಗರು ಆಡಿಯೋ ಬಿಡುಗಡೆಗೆ ಬರಲಿಲ್ಲ ಡಿ ಬಾಸ್ | Filmibeat Kannada

ಈ ಹಿಂದೆ 'ಖರಾಬು ಬಾಸು ಖರಾಬು' ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ 'ಪೊಗರು' ಸಿನಿಮಾದ 'ಪೊಗರು, ಅಣ್ಣನಿಗೆ ಪೊಗರು' ಎಂಬ ಮಾಸ್ ಹಾಡಿನ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಹಾಡಿನಲ್ಲಿ ರಾಕ್ಷಸಾವತಾರದಲ್ಲಿ ಕಾಣಿಸಿಕೊಂಡಿದ್ದಾರೆ ನಟ ಧ್ರುವ ಸರ್ಜಾ. ಉದ್ದನೆಯ ಕೂದಲು ಹಾರಿಸುತ್ತಾ, ಕೆದರಿದ ಗಡ್ಡ ನೇವರಿಸುತ್ತಾ, ಕಂಬದಂತಹಾ ತೋಳು ಪ್ರದರ್ಶಿಸಿ ಅದ್ಭುತವಾಗಿ ಕುಣಿದಿದ್ದಾರೆ ಧ್ರುವ ಸರ್ಜಾ.

Pogaru Movie Video Song Released On YouTube

ಹಾಡಿನ ಮೇಕಿಂಗ್ ಅದ್ಭುತವಾಗಿದೆ, ಧ್ರುವ ಸರ್ಜಾ ಅಭಿಮಾನಿಗಳಿಗಾಗಿಯೇ ಮಾಡಿದಂತಿದೆ 'ಪೊಗರು' ಹಾಡು. ಹಾಡಿನಲ್ಲಿ ಚೆನ್ನಾಗಿ ಡಾನ್ಸ್ ಮಾಡಿದ್ದಾರೆ ಧ್ರುವ ಸರ್ಜಾ. ವಿಶೇಷವೆಂದರೆ ಹಾಡಿನಲ್ಲಿ 'ಪೊಗರು' ನಿರ್ದೇಶಕ ನಂದ ಕಿಶೋರ್ ಸಹ ಡಾನ್ಸ್ ಮಾಡಿದ್ದಾರೆ. ಜೊತೆಗೆ ಡಾನ್ಸ್ ಕೊರಿಯೋಗ್ರಾಫರ್ ಮುರಳಿ ಸಹ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಫೆಬ್ರವರಿ 14 ರಂದು ಯಾವ ವಿಡಿಯೋ ಹಾಡು ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿ ಪೋಲ್ ನೀಡಿದ್ದರು ಧ್ರುವ ಸರ್ಜಾ. ಅಂತೆಯೇ ಅಭಿಮಾಣನಿಗಳು 'ಪೊಗರು' ಹಾಡು ಬಿಡುಗಡೆ ಮಾಡುವಂತೆ ಹೆಚ್ಚು ಮತ ಹಾಕಿದ್ದ ಕಾರಣ ಇದೀಗ 'ಪೊಗರು' ಹಾಡನ್ನೇ ಬಿಡುಗಡೆ ಮಾಡಲಾಗಿದೆ.

Pogaru Movie Video Song Released On YouTube

ಈ ಹಾಡಿಗೆ ಸಂಗೀತ ಮತ್ತು ಸಾಹಿತ್ಯ ರ್ಯಾಪರ್ ಚಂದನ್ ಶೆಟ್ಟಿಯದ್ದು. ಖರಾಬು ಹಾಡಿಗೆ ಸಹ ಅವರದ್ದೇ ಸಂಗೀತ ಮತ್ತು ಸಾಹಿತ್ಯ. ಚಂದನ್ ಶೆಟ್ಟಿ, ಶಶಾಂಕ್ ಶೇಷಗಿರಿ, ಅನಿರುದ್ಧ ಶಾಸ್ತ್ರಿ ಹಾಡನ್ನು ಹಾಡಿದ್ದಾರೆ.

ಪೊಗರು ಸಿನಿಮಾವು ಫೆಬ್ರವರಿ 19 ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಇಂದು ದಾವಣಗೆರೆಯಲ್ಲಿ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಬಹು ಅದ್ಧೂರಿಯಾಗಿ ನಡೆಯುತ್ತಿದೆ.

More from Filmibeat

English summary
Pogaru movie title track released on YouTube. Movie will be released on February 14 on theaters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X