ಅನೌನ್ಸ್ ಆಯ್ತು 'ಪೊಗರು' ಸಿನಿಮಾದ ಬಿಡುಗಡೆಯ ದಿನಾಂಕ
ನಟ ಧ್ರುವ ಸರ್ಜಾ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ. 'ಭರ್ಜರಿ' ಸಿನಿಮಾದ ನಂತರ 'ಪೊಗರು' ತೋರಿಸುವುದಕ್ಕೆ ಧ್ರುವ ಸರ್ಜಾ ಸಜ್ಜಾಗುತ್ತಿದ್ದರು. ಇದೀಗ ಈ ಸಿನಿಮಾದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.
ವರ್ಷಗಳಿಂದ 'ಪೊಗರು' ಸಿನಿಮಾದ ಕೆಲಸಗಳು ನಡೆಯುತ್ತಿದೆ. ಹಾಗೆ ನೋಡಿದರೆ ಸಿನಿಮಾ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಸಿನಿಮಾದ ರಿಲೀಸ್ ತಡ ಆಗುತ್ತಲೇ ಬಂತು. ಆದರೆ, ಕೊನೆಗೂ ಈಗ ಸಿನಿಮಾ ರಿಲೀಸ್ ಡೇಟ್ ಅನ್ನು ಚಿತ್ರತಂಡ ತಿಳಿಸಿದೆ.
ತಾವು ಅಂದು ಕೊಂಡ ಸಮಯಕ್ಕೆ ಸರಿಯಾಗಿ ಸಿನಿಮಾ ಮುಗಿಸುವ ಕೆಲಸದಲ್ಲಿ ಚಿತ್ರತಂಡ ಬುಸ್ಸಿಯಾಗಿದೆ. ಹೈದರಾಬಾದ್ ನಿಂದ ಶೂಟಿಂಗ್ ಮುಗಿಸಿ ಬಂದ 'ಪೊಗರು' ಟೀಮ್ ಬಿಡುಗಡೆಯ ಸುದ್ದಿ ನೀಡಿದೆ. ಮುಂದೆ ಓದಿ...

ಸ್ವಾತಂತ್ರ್ಯ ದಿನಾಚರಣೆಗೆ 'ಪೊಗರು' ರಿಲೀಸ್
ಧ್ರುವ ಸರ್ಜಾ ಅಭಿಮಾನಿಗಳ 'ಪೊಗರು' ಸಿನಿಮಾ ನೋಡಬೇಕು ಅಂದರೆ ಇನ್ನೂ ಐದು ತಿಂಗಳು ಕಾಯಬೇಕಿದೆ. ಸಿನಿಮಾವನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಸಿನಿಮಾ ರಿಲೀಸ್ ಆಗುತ್ತಿದೆ.

ಚಿತ್ರತಂಡ ಹೈದರಾಬಾದ್ ನಿಂದ ವಾಪಸ್
'ಪೊಗರು' ಸಿನಿಮಾದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಅಲ್ಲಿಯೇ 35 ದಿನಗಳ ಸತತವಾಗಿ ಚಿತ್ರತಂಡ ಶೂಟಿಂಗ್ ಮಾಡಿತ್ತು. ಅದರ ಬಳಿಕ ಈ ತಿಂಗಳ ಕೊನೆಯಲ್ಲಿ ಮತ್ತೆ ಚಿತ್ರದ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ. ಹೈದರಾಬಾದ್ ನ ಚಿತ್ರದ ಶೂಟಿಂಗ್ ವೇಳೆ ರಾಘವೇಂದ್ರ ರಾಜ್ ಕುಮಾರ್ ಸಹ ಭಾಗಿಯಾಗಿದ್ದರು.

ದೊಡ್ಡ ತಾರ ಬಳಗ
'ಪೊಗರು' ಸಿನಿಮಾದಲ್ಲಿ ದೊಡ್ಡ ತಾರಬಳಗವಿದೆ. ಟಾಲಿವುಡ್ ನ ಜಗಪತಿ ಬಾಬು, ಡಾಲಿ ಧನಂಜಯ್, ರವಿಶಂಕರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದ ಕಿಶೋರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ವಿಚಾರದಲ್ಲಿ ಅರ್ಜುನ್ ಸರ್ಜಾ ಸಹ ಸಲಹೆ ನೀಡಿದ್ದಾರೆ.

ಧ್ರುವ ಹಾಗೂ ರಶ್ಮಿಕಾ ಜೋಡಿ
ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ಹಾಗೂ ಶಾನ್ವಿ ಶ್ರೀವತ್ಸವ್ ನಾಯಕಿಯಾಗಿದ್ದಾರೆ. ಇದು ರಶ್ಮಿಕಾ ನಟನೆಯ ಐದನೇ ಕನ್ನಡ ಸಿನಿಮಾವಾಗಿದೆ. ಮೊದಲ ಬಾರಿಗೆ ಧ್ರುವ ಹಾಗೂ ರಶ್ಮಿಕಾ ಜೋಡಿ ತೆರೆ ಮೇಲೆ ಒಟ್ಟಿಗೆ ಬರುತ್ತಿದೆ. ಸಿನಿಮಾದ ಮೊದಲ ಶೆಡ್ಯೂಲ್ ಗಾಗಿ ಬರೋಬ್ಬರಿ 30 ಕೆಜಿ ತೂಕವನ್ನು ಧ್ರುವ ಸರ್ಜಾ ಕಡಿಮೆ ಮಾಡಿಕೊಂಡಿದ್ದರು.


Click it and Unblock the Notifications











