twitter
    For Quick Alerts
    ALLOW NOTIFICATIONS  
    For Daily Alerts

    'ಲಾಂಗ್' ಹಿಡಿಯುವ ಸಿನಿಮಾಗಳನ್ನು ಮಾಡುವುದು 'ರಾಂಗ್' ಎಂದ ಭಾಸ್ಕರ್ ರಾವ್

    |

    ಬಹುತೇಕ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ಕೀಳಾಗಿ ತೋರಿಸಲಾಗುತ್ತದೆ ಎನ್ನುವ ಆರೋಪ ಅನೇಕ ವರ್ಷಗಳಿಂದ ಇದೆ. ಕನ್ನಡ ಮಾತ್ರವಲ್ಲದೆ, ಎಲ್ಲ ಭಾಷೆಯ ಚಿತ್ರರಂಗದಲ್ಲಿ ಪೊಲೀಸರನ್ನು ಕೆಟ್ಟವರು ಎಂದು ಬಿಂಬಿಸಿದ್ದೇ ಹೆಚ್ಚು.

    ಇದು ಹಳೆ ಕಥೆಯಾದರೆ, ಇದೀಗ ಮತ್ತೊಂದು ವಿಷಯ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ರಿಗೆ ಬೇಸರ ಉಂಟು ಮಾಡಿದೆ. ಸಿನಿಮಾ ಪೊಲೀಸರ ಕೈಗೆ ನಿರ್ದೇಶಕರು ಮಚ್ಚು ನೀಡುವುದು ಸರಿ ಅಲ್ಲ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಲಾಂಗ್ ಹಿಡಿರುವ ಸಿನಿಮಾಗಳು ರಾಂಗ್ ಎಂದಿದ್ದಾರೆ.

    ಪಿ.ಎನ್ ಸತ್ಯ ಅವರ ಇಮೇಜ್ ಬದಲಿಸಿದ ಚಿತ್ರಗಳುಪಿ.ಎನ್ ಸತ್ಯ ಅವರ ಇಮೇಜ್ ಬದಲಿಸಿದ ಚಿತ್ರಗಳು

    ಕಳೆದ ಶನಿವಾರ 'ಕುಥಸ್ಥ' ಎಂಬ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಸ್ಕರ್ ರಾವ್ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಅವರು ಪೊಲೀಸ್ ಪಾತ್ರ ಮಾಡುವ ಸಿನಿಮಾ ನಟರು ಮಚ್ಚು ಹಿಡಿಯುತ್ತಾರೆ. ಇದು ಸಮಾಜಕ್ಕೆ ಮಾರಕ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದ್ದಾರೆ.

    ಆರೋಪಿ ಮೇಲೆ ಸಿನಿಮಾ ಪರಿಣಾಮ

    ಆರೋಪಿ ಮೇಲೆ ಸಿನಿಮಾ ಪರಿಣಾಮ

    ಕೆಲದಿನಗಳ ಹಿಂದೆ ಬೆಂಗಳೂರಿನ ಫಿನಿಕ್ಸ್ ಮಾಲ್ ಬಳಿ ರೌಡಿಯೊಬ್ಬನ ಕೊಲೆಯಾಯ್ತು. ಇದು ದೊಡ್ಡ ಸುದ್ದಿ ಮಾಡಿತು. ಈ ಕೋಲೆ ಮಾಡಿದ ಆರೋಪಿ ಹೇಳಿದ ಹೇಳಿಕೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸಿನಿಮಾಗಳಲ್ಲಿ ಮಚ್ಚಿನ ಹೊಡೆದಾಟಗಳು, ಕ್ರೌರ್ಯ ಬರಿತ ಸಿನಿಮಾಗಳನ್ನ ನೋಡುತ್ತೇನೆ. ಇದೇ ಕೊಲೆಗೆ ಪ್ರೇರಣೆ ಎಂದು ಆತ ಹೇಳಿದನಂತೆ ಇದನ್ನು ಕೇಳಿದ ಭಾಸ್ಕರ್ ರಾವ್ ಒಂದು ಕ್ಷಣ ಶಾಕ್ ಆಗಿದ್ದಾರೆ.

    ಶಿವಣ್ಣ ಲಾಂಗ್ ಹಿಡಿಯುವ ಸ್ಟೈಲ್ ಕೊಂಡಾಡಿದ ಚಾಲೆಂಜಿಂಗ್ ಸ್ಟಾರ್ಶಿವಣ್ಣ ಲಾಂಗ್ ಹಿಡಿಯುವ ಸ್ಟೈಲ್ ಕೊಂಡಾಡಿದ ಚಾಲೆಂಜಿಂಗ್ ಸ್ಟಾರ್

    ಪೊಲೀಸರ ಕೈನಲ್ಲಿ ಮಚ್ಚು ನೀಡುವುದನ್ನು ನಿಲ್ಲಿಸಿ

    ಪೊಲೀಸರ ಕೈನಲ್ಲಿ ಮಚ್ಚು ನೀಡುವುದನ್ನು ನಿಲ್ಲಿಸಿ

    ಕೆಲವು ಸಿನಿಮಾಗಳಲ್ಲಿ ಉದಾಹರಣೆಗೆ, ಇತ್ತೀಚಿಗೆ ಬಂದ 'ಟಗರು' ಸಿನಿಮಾದಲ್ಲಿ ಪೊಲೀಸ್ ಆಗಿರುವ ನಾಯಕ ಮಚ್ಚು ಹಿಡಿಯುತ್ತಾನೆ. ಇಂತಹ ದೃಶ್ಯಗಳ ಬಗ್ಗೆ ಭಾಸ್ಕರ್ ರಾವ್ ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾಗಳಲ್ಲಿ ಪೊಲೀಸ್ ಕೈಗೆ ಮಚ್ಚು ನೀಡುವುದು ನಿಲ್ಲಿಸಬೇಕು. ಕನ್ನಡ ಚಿತ್ರಗಳಲ್ಲಿ ವಿಚಿತ್ರವಾಗಿ ಪೊಲೀಸರನ್ನು ತೋರಿಸುತ್ತಾರೆ, ಇದರಿಂದ ಸಮಾಜಕ್ಕೆ ನೀಡುವ ಸಂದೇಶ ಏನು ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಬಗ್ಗೆ ನಟನಿಗೆ ಪ್ರಶ್ನೆ ಮಾಡಿದ್ದ ಭಾಸ್ಕರ್ ರಾವ್

    ಈ ಬಗ್ಗೆ ನಟನಿಗೆ ಪ್ರಶ್ನೆ ಮಾಡಿದ್ದ ಭಾಸ್ಕರ್ ರಾವ್

    ಸಿನಿಮಾಗಳಲ್ಲಿ ಅತಿಯಾದ ಕ್ರೌರ್ಯದ ಬಗ್ಗೆ ಭಾಸ್ಕರ್ ರಾವ್ ಕನ್ನಡದ ನಟರೊಬ್ಬರಿಗೆ ಪ್ರಶ್ನೆ ಮಾಡಿದ್ದರಂತೆ. ವಿಮಾನದಲ್ಲಿ ದೆಹಲಿಗೆ ಪ್ರಯಾಣ ಮಾಡುವಾಗ, ಅದೇ ವಿಮಾನದಲ್ಲಿ ಇದ್ದ ನಟರೊಬ್ಬರ ಜೊತೆಗೆ ಮಾತನಾಡುವ ವೇಳೆ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದರಂತೆ. ಆಗ ಆ ನಟ ಅಂತಹ ದೃಶ್ಯಗಳೇ ಜನರಿಗೆ ಇಷ್ಟ ಸರ್ ಎಂದು ಉತ್ತರ ನೀಡಿದಂತೆ. ಇಂತಹ ಮಾತು ಹೇಳಿದ ನಟನ ಹೆಸರನ್ನು ಭಾಸ್ಕರ್ ರಾವ್ ಗುಪ್ತವಾಗಿಯೇ ಇಟ್ಟರು.

    'ಚಕ್ರವರ್ತಿ' ಆಗಲು ಲಾಂಗ್ ಹಿಡಿಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್'ಚಕ್ರವರ್ತಿ' ಆಗಲು ಲಾಂಗ್ ಹಿಡಿಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್

    ರಾಜ್ ಕುಮಾರ್ ಸಿನಿಮಾ ನೋಡಿ ಬೆಳೆದಿದ್ದೇವೆ

    ರಾಜ್ ಕುಮಾರ್ ಸಿನಿಮಾ ನೋಡಿ ಬೆಳೆದಿದ್ದೇವೆ

    ಡಾ.ರಾಜ್ ಕುಮಾರ್, ಗಿರೀಶ್ ಕಾರ್ನಾಡ್ ಸಿನಿಮಾಗಳು ಅಂದರೆ, ಭಾಸ್ಕರ್ ರಾವ್ ರೀತಿ ತುಂಬ ಇಷ್ಟವಂತೆ. ಅಂತಹ ಸಿನಿಮಾಗಳಲ್ಲಿ ಎಷ್ಟೊಂದು ಒಳ್ಳೆಯ ಸಂದೇಶ ಇರುತ್ತಿತ್ತು. ರಾಜ್ ಕುಮಾರ್ ಸಿನಿಮಾಗಳು ನಮಗೆ ಮಾದರಿ ಆಗುತ್ತಿದ್ದವು. ಈಗಲೂ ಜನರಿಗೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳನ್ನು ನಿರ್ಮಿಸಬೇಕು. ರಿಯಲಿಸ್ಟಿಕ್ ಆದ ರೋಮ್ಯಾನ್ಸ್ ಸಿನಿಮಾಗಳನ್ನು ಮಾಡಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    English summary
    Police commissioner Bhaskar Rao unhappy with the rowdyism kannada movies.
    Monday, October 28, 2019, 12:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X