For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ವಿರುದ್ಧ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತರ ಟ್ವೀಟ್ ಪ್ರಕರಣಕ್ಕೆ ಟ್ವಿಸ್ಟ್

  |

  ಜೆ.ಎನ್.ಯು ವಿದ್ಯಾರ್ಥಿಗಳ ಮೇಲಿನ ಹಿಂಸೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗಿಯಾದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ವಿಚಾರವಾಗಿ ದೀಪಿಕಾ ಬಗ್ಗೆ ಸಾಕಷ್ಟು ಟ್ರೋಲ್ ಗಳು ಹರಿದಾಡುತ್ತಿವೆ. ದೀಪಿಕಾ ಬಗ್ಗೆ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದ್ಕರ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

  ಸ್ಟಾರ್ ನಟಿಯನ್ನು ಹಿಯಾಳಿಸುವಂತಹಾ ಔರಾದ್ಕರ್ ಟ್ವೀಟ್ ಸಾಕಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಟ್ವೀಟ್ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತರು, ಔರಾದ್ಕರ್ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ.

  JNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: ಶ್ಲಾಘಿಸಿ ಟ್ವೀಟ್ ಡಿಲಿಟ್ ಮಾಡಿದ ಪಾಕ್ ಆರ್ಮಿ ವಕ್ತಾರJNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: ಶ್ಲಾಘಿಸಿ ಟ್ವೀಟ್ ಡಿಲಿಟ್ ಮಾಡಿದ ಪಾಕ್ ಆರ್ಮಿ ವಕ್ತಾರ

  "ಇನ್ನು ರಾಘವೇಂದ್ರ ಔರಾದ್ಕರ್ ಈಗಾಗಲೆ ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಯಾರೊ ಅದನ್ನು ಹ್ಯಾಕ್ ಮಾಡಿ ಟ್ವೀಟ್ ಮಾಡುತ್ತಿದ್ದಾರೆ, ಈ ಬಗ್ಗೆ ಸಂಬಂಧಿತ ಪೊಲೀಸ್ ಘಟಕ ತನಿಖೆ ನಡೆಸುತ್ತಿದೆ" ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

  ಅಂದ್ಹಾಗೆ ದೀಪಿಕಾರನ್ನು ಹಿಯಾಳಿಸಿ ರಾಘವೇಂದ್ರ ಔರಾದ್ಕರ್ ಅವರ ಟ್ವಿಟ್ಟರ್ ಖಾತೆಯಿಂದ ಬಂದ ಟ್ವೀಟ್ ಹೀಗಿತ್ತು, "ದೀಪಿಕಾ ಪಡುಕೋಣೆ BSNLಗೆ ಬೆಂಬಲ ನೀಡಿದ್ದರು ಅದು ನಷ್ಟಕ್ಕೆ ಹೋಯಿತು, RCBಜೊತೆ ನಿಂತರು ಅದು ಒಂದು ಬಾರಿಯೂ ಕಪ್ ಗೆಲ್ಲಲಿಲ್ಲ, ವಿಜಯ್ ಮಲ್ಯ ಮತ್ತು ಸಿದ್ಧಾರ್ಥ ಮಲ್ಯ ದೇಶಬಿಟ್ಟೇ ಪರಾರಿ ಆದರು. ಯುವರಾಜ್ ಸಿಂಗ್ ಜೊತೆ ಹೋದರು ಬಹು ಕಷ್ಟಪಟ್ಟು ಕ್ಯಾನ್ಸರ್‌ ಜೊತೆ ಹೋರಾಡಿ ಬದುಕಿದರು. ಈಗ ತುಕ್ಡೆ-ತುಕ್ಡೆ ಗ್ಯಾಂಗ್ ಸರದಿ, ದೀಪಿಕಾಳ ಟ್ರ್ಯಾಕ್ ರೆಕಾರ್ಡ್‌ ಅದ್ಭುತವಾಗಿದೆ, ಆಲ್‌ ದಿ ಬೆಸ್ಟ್ ಹೇಳೋಣ' ಎಂದು ಟ್ವೀಟ್ ಮಾಡಿದ್ದರು.

  ರಾಘವೇಂದ್ರ ಔರಾದ್ಕರ್ ಈ ಟ್ವೀಟರ್ ಖಾತೆಯಿಂದ ಪೋಸ್ಟ್‌ ಆಗಿದ್ದ ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಕೆಲವರು ಪ್ರಶಂಸಿದ್ದರೆ, ಇನ್ನು ಕೆಲವರು ವಿರೋಧಿ ವ್ಯಕ್ತಪಡಿಸಿದ್ದರು. ಈ ಟ್ವೀಟ್ ಜೋರಾಗಿ ಚರ್ಚೆಯಾಗುತ್ತಿದ್ದಂತೆ ಈಗ ಬೆಂಗಳೂರು ಪೊಲೀಸರು ಅಧಿಕೃತ ಟ್ವಿಟ್ಟರ್ ಖಾತೆಯಿಂದ ಸ್ಪಷ್ಟನೆ ನೀಡಿದ್ದಾರೆ.

  English summary
  Bengaluru police Commissioner clarifies about former Bangalore Commissioner tweeted about Deepika Padukone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X