twitter
    For Quick Alerts
    ALLOW NOTIFICATIONS  
    For Daily Alerts

    'ಮಾಯಾಬಜಾರ್' ಪೈರಸಿ: ಪೊಲೀಸರಿಗೆ ದೂರು

    |

    ಪುನೀತ್ ರಾಜ್‌ಕುಮಾರ್ ನಿರ್ಮಾಣದ 'ಮಾಯಾಬಜಾರ್ 2016' ಸಿನಿಮಾ ಪೈರಸಿ ಆಗಿರುವುದರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

    'ಮಾಯಾಬಜಾರ್ 2016' ಚಿತ್ರವನ್ನು 'ಕನ್ನಡ ರಾಕರ್ಸ್' ಹೆಸರಿನಲ್ಲಿ ಸೋರಿಕೆ ಮಾಡಲಾಗಿದೆ ಎಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

    'ಮಾಯಾ ಬಜಾರ್' ಸಿನಿಮಾಗೂ ಎದುರಾದ ಪೈರಸಿ ಕಾಟ'ಮಾಯಾ ಬಜಾರ್' ಸಿನಿಮಾಗೂ ಎದುರಾದ ಪೈರಸಿ ಕಾಟ

    ಮಾಯಾಬಜಾರ್ ಸಿನಿಮಾ ಫೆ. 28ರಂದು ತೆರೆಕಂಡಿತ್ತು. ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಣದ ಎರಡನೆಯ ಚಿತ್ರದಲ್ಲಿ ನಿರ್ಮಾಪಕ ಪುನೀತ್ ರಾಜ್‌ಕುಮಾರ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ಮರುದಿನವೇ ಸಾಮಾಜಿಕ ಜಾಲತಾಣಗಳಲ್ಲಿ ಪೂರ್ಣ ಸಿನಿಮಾ ಸೋರಿಕೆಯಾಗಿದೆ.

    Police Complaint Against Kannada Rockers For Mayabazar 2016 Kannada Movie Piracy

    ಟೆಲಿಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಮಾಯಾಬಜಾರ್‌ನ ನಕಲು ಕಾಪಿ ಸಿಗುತ್ತಿದ್ದು, ಚಿತ್ರವನ್ನು ಅಕ್ರಮವಾಗಿ ಪೈರಸಿ ಮಾಡಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಸೋರಿಕೆ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸ್ವಾಮಿ ಎಂಬುವವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

    ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಚಿತ್ರತಂಡದ ಅಳಲಿನ ನಡುವೆ ಪೈರಸಿ ಕಾಟ ತೀವ್ರವಾಗಿದೆ. ತಮಿಳ್ ರಾಕರ್ಸ್ ಎಂಬ ಪೈರಸಿ ಗುಂಪಿನ ವಿರುದ್ಧ ಈ ಹಿಂದೆಯೂ ಅನೇಕ ಬಾರಿ ದೂರುಗಳು ದಾಖಲಾಗಿದ್ದವು. ಅದರದ್ದೇ ತಂಡ 'ಕನ್ನಡ ರಾಕರ್ಸ್' ಹೆಸರಿನಲ್ಲಿ ಕನ್ನಡ ಚಿತ್ರಗಳನ್ನು ಪೈರಸಿ ಮಾಡುತ್ತಿವೆ ಎನ್ನಲಾಗಿದೆ.

    ಮಾಯಾಬಜಾರ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ವಾರ ಕನ್ನಡದ್ದೇ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಪರಭಾಷಾ ಚಿತ್ರಗಳ ನಡುವೆ ಇವು ಸ್ಪರ್ಧಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಚಿತ್ರಗಳು ಸೋರಿಕೆಯಾಗುತ್ತಿರುವುದು ಆಘಾತ ಮೂಡಿಸಿದೆ.

    English summary
    A complaint has been lodged in Sadashivanagar police station against Kannada Rockers for alleged piracy of Kannada movie Mayabazar 2016.
    Monday, March 2, 2020, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X