ದರ್ಶನ್ ನೋಡಲು ಬಂದ ಫ್ಯಾನ್ಸ್: ಹಾವೇರಿಯಲ್ಲಿ ಪೊಲೀಸರಿಂದ ಲಾಠಿ ಚಾರ್ಜ್

25 ಕೋಟಿ ಲೋನ್ ವಿವಾದ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆಗಿನ ಜಟಾಪಟಿ, ವಾದ-ಪ್ರತಿವಾದಗಳಲ್ಲೇ ಸಿಲುಕಿಕೊಂಡಿದ್ದ ನಟ ದರ್ಶನ್ ಈಗ ರಿಲ್ಯಾಕ್ಸ್‌ನಲ್ಲಿದ್ದಾರೆ.

ಬೆಂಗಳೂರು, ಮೈಸೂರಿನಿಂದ ನೇರವಾಗಿ ಹಾವೇರಿ ಕಡೆ ಹೊರಟ ದರ್ಶನ್, ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅವರ ಗೆಸ್ಟ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸೋಮವಾರ ರಾತ್ರಿಯಿಂದ ದರ್ಶನ್ ಹಾವೇರಿಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದರ್ಶನ್ ಬಂದಿದ್ದಾರೆ ಎಂಬ ವಿಷಯ ತಿಳಿದು ಸುರೇಶ್ ಗೌಡ ಪಾಟೀಲರ ಗೆಸ್ಟ್‌ಹೌಸ್‌ ಬಳಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಡಿ ಬಾಸ್, ಡಿ ಬಾಸ್ ಎಂದು ಕೂಗುತ್ತಾ, ಜೈಕಾರ ಹಾಕಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

Police Lathi Charge On Darshan Fans Who Came To See Him In Haveri

ಕೊನೆಗೂ ದರ್ಶನ್ ಅವರು ಗೆಸ್ಟ್‌ಹೌಸ್‌ನಿಂದ ಹೊರಗೆ ಬಂದರು. ಕಾರಿನಿಂದ ಇಳಿದು ಅಭಿಮಾನಿಗಳತ್ತ ಕೈ ಬೀಸಿದರು. ನೋಡು ನೋಡುತ್ತಿದ್ದಂತೆ ಅಭಿಮಾನಿಗಳು ದರ್ಶನ್ ಕಾರು ಸುತ್ತುವರಿದು ಫೋಟೋ ತೆಗೆಸಿಕೊಳ್ಳಲು ಯತ್ನಿಸಿದರು. ಅಪ್ಪಿಕೊಳ್ಳಲು ಮುಂದಾದರು. ಈ ವೇಳೆ ಸಿಟ್ಟಿಗೆದ್ದ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

ಕಾರು ಸುತ್ತವರಿದಿದ್ದ ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ ಪೊಲೀಸರು ದರ್ಶನ್ ಕಾರು ಕಳುಹಿಸಿಕೊಟ್ಟರು. ಈ ವಿಡಿಯೋ ಹಾಗೂ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲ್ಲೆ ಆರೋಪ ಎದುರಿಸುತ್ತಿರುವ ದರ್ಶನ್

ಪತ್ರಕರ್ತ-ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ದರ್ಶನ್ ಹಿಂಬಾಲಕರ ವಿರುದ್ಧ ಬೆದರಿಕೆ ಆರೋಪದಲ್ಲಿ ದೂರು ನೀಡಿದ್ದಾರೆ. ದರ್ಶನ್ ವಿರುದ್ಧ ಆರೋಪ ಮಾಡಿದ್ದಕ್ಕೆ ಅವರು ಬೆಂಬಲಿಗರು ದೂರವಾಣಿ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

Recommended Video

ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ

More from Filmibeat

English summary
Police lathi charge on darshan fans who came to see him in haveri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X