ರಾಕಿಂಗ್ ಸ್ಟಾರ್ ಹತ್ಯೆಗೆ ಸಂಚು ಅನ್ನೋದು ಸುಳ್ಳು
Recommended Video

ಕುಖ್ಯಾತ ರೌಡಿ ಸೈಕಲ್ ರವಿಗೂ ಸ್ಯಾಂಡಲ್ ವುಡ್ ಗೂ ಸಂಬಂಧವಿದೆ ಎನ್ನುವ ವದಂತಿಗಳು ಕೆಲವು ದಿನಗಳಿಂದ ಕೇಳಿಬರುತ್ತಿವೆ. ಅದಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ನಟ ಯಶ್ ಹತ್ಯೆಗೆ ಎರಡು ವರ್ಷಗಳ ಹಿಂದೆಯೇ ಸಂಚು ನಡೆದಿತ್ತು ಎನ್ನುವ ಸುದ್ದಿ ಜೋರಾಗಿದೆ. ಆದರೆ ಇವೆಲ್ಲವೂ ಸುಳ್ಳು ವದಂತಿ ಎನ್ನುವುದನ್ನು ಹಿರಿಯ ಪೋಲೀಸ್ ಅಧಿಕಾರಿ ಸತೀಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಯಶ್ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವ ಸುದ್ದಿ ಆಗುತ್ತಿದ್ದಂತೆ ರಾಕಿಂಗ್ ಸ್ಟಾರ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಯಾಕೆಂದರೆ ಎರಡು ವರೆ ವರ್ಷದ ಹಿಂದೆಯೂ ಯಶ್ ಅವರ ಮೇಲೆ ಹಲ್ಲೆ ಆಗಿದೆ ಎನ್ನುವ ಸುದ್ದಿಗಳು ಕೇಳಿ ಬಂದಿತ್ತು.
ಈಗ ಆ ಹಲ್ಲೆ ವಿಚಾರಕ್ಕೂ, ಹತ್ಯೆಗೆ ಸಂಚು ಸುದ್ದಿಯನ್ನು ತಳುಕು ಹಾಕಿ ಸುದ್ದಿ ಹರಡಲಾಗಿತ್ತು. ಇದೇ ವಿಚಾರವಾಗಿ ರಾಕಿಂಗ್ ಸ್ಟಾರ್ ಪೋಲೀಸರಿಗೆ ದೂರು ಕೊಟ್ಟಿದ್ದಾರೆ ಎನ್ನುವ ಸುದ್ದಿಯೂ ಕೇಳಿ ಬಂದಿತ್ತು ಆದರೆ ಯಶ್ ಆ ವೇಳೆ ಮಾತನಾಡಿದ್ದು ಕಲ್ಲು ತೂರಾಟದ ಬಗ್ಗೆ ಅಷ್ಟೇ ಎನ್ನುವುದು ಸ್ಪಷ್ಟವಾಗಿದೆ.

ಇನ್ನು ಈ ವದಂತಿಗೆ ಹಿರಿಯ ಪೋಲೀಸ್ ಅಧಿಕಾರಿಗಳು ತೆರೆ ಎಳೆದಿದ್ದಾರೆ. ಯಶ್ ಹತ್ಯೆ ಬಗ್ಗೆ ಸುದ್ದಿ ಸುಳ್ಳು ಆ ರೀತಿ ಏನಾದರೂ ಸುದ್ದಿ ಇದ್ದಲ್ಲಿ ನಾವೇ ತಿಳಿಸುತ್ತೇವೆ. ಯಾರೋ ಸುಮ್ಮನೆ ಸುದ್ದಿ ಹಬ್ಬಿಸಿದ್ದಾರೆ ಎಂದಿದ್ದಾರೆ.


Click it and Unblock the Notifications











