ನ್ಯಾಯಾಂಗ ಬಂಧನ ಅವಧಿ ಮುಕ್ತಾಯ ಹಿನ್ನೆಲೆ; ನಟ ದರ್ಶನ್‌ಗೆ ಮತ್ತೊಂದು ಶಾಕ್!

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ಕಾಲ ಕಳೆಯುವಂತಿದೆ. ಸದ್ಯ ನ್ಯಾಯಾಂಗ ಅವಧಿ ಮುಕ್ತಾಯವಾಗುತ್ತಾ ಬಂದಿದೆ. ಹಾಗಾಗಿ ಜಾಮೀನು ಪಡೆಯಲು ಯತ್ನಿಸುವ ಸಾಧ್ಯತೆಯಿದೆ. ಆದರೆ ಅದಕ್ಕೆ ಪೊಲೀಸರು ಆಸ್ಪದ ಮಾಡಿಕೊಳ್ಳುವುದಿಲ್ಲ ಎನ್ನಲಾಗ್ತಿದೆ.

ನಾಳೆ(ಜುಲೈ 18) ಎಲ್ಲಾ 17 ಜನ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗುತ್ತಿದೆ. ಹಾಗಾಗಿ ಮತ್ತೊಮ್ಮೆ ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗುವ ಸಾಧ್ಯತೆಯಿದೆ. ಈ ಬಾರಿಯೂ ವೀಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಿಕ್ಕೆ ಸಿದ್ಧತೆ ಮಾಡಲಾಗಿದೆ. ಮತ್ತೆ ರಿಮ್ಯಾಂಡ್ ಅರ್ಜಿ ಸಲ್ಲಿಸಿ ಆರೋಪಿಗಳಿಗೆ ಜಾಮೀನು ನೀಡದಂತೆ ಮನವಿ ಮಾಡುವ ಸಾಧ್ಯತೆಯಿದೆ.

Police ready to file remand application Darshan And Gang may not get bail

ಅಷ್ಟಕ್ಕೂ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಯಾಕೆ ನೀಡಬಾರದು ಎಂದು ಒಂದಷ್ಟು ಕಾರಣಗಳನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆಯ ಬಳಿಕ ಸಾಕ್ಷ್ಯ ನಾಶಕ್ಕೆ ಆರೋಪಿಗಳು ಯತ್ನಿಸಿದ್ದು ತನಿಖೆ ವೇಳೆ ಗೊತ್ತಾಗಿದೆ. ಜಾಮೀನು ಸಿಕ್ಕರೆ ಮತ್ತೆ ಅದೇ ಕೆಲಸ ಆಗಬಹುದು. ಜೊತೆಗೆ ನಟ ದರ್ಶನ್‌ ಬಹಳ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಮುಂದೆ ತನಿಖೆಗೆ ತೊಂದರೆ ಆಗಬಹುದು ಎನ್ನುವ ಕಾರಣವನ್ನು ಮುಂದಿಡುತ್ತಾರೆ ಎನ್ನಲಾಗ್ತಿದೆ.

ಪ್ರಕರಣದ ತನಿಖೆ ಶುರುವಾಗಿ ತಿಂಗಳು ಕಳೆದಿದೆ. ಪೊಲೀಸರು ಈಗಾಗಲೇ ಚಾರ್ಜ್‌ ಶೀಟ್ ಸಲ್ಲಿಸಲು ಮುಂದಾಗಿದ್ದಾರೆ. ಮತ್ತೊಂದು ಕಡೆ ಗುರುವಾರ(ಜುಲೈ 18) ರಂದು ರಿಮ್ಯಾಂಡ್ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ. ರಿಮ್ಯಾಂಡ್ ಅರ್ಜಿಯಲ್ಲಿ ಒಂದಷ್ಟು ಕಾರಣಗಳನ್ನು ನಮೂದಿಸಿದ್ದಾರೆ ಎಂದು ತಿಳಿದು ಬಂದಿದೆ.

1. ಆರೋಪಿಗಳಿಗೆ ಜಾಮೀನು ಸಿಕ್ಕರೆ ಸಾಕ್ಷಿಗಳ‌ ಮೇಲೆ ಪ್ರಭಾವ ಬಿರಬಹುದು.

2. ಜಾಮೀನು ಸಿಕ್ಕಿ ಹೊರಬಂದು ಆರೋಪಿಗಳು ವಿದೇಶಕ್ಕೆ ಹಾರುವ ಸಾಧ್ಯತೆಯಿದೆ.

3. ಹತ್ಯೆ ಬೆನ್ನಲ್ಲೇ ಆರೋಪಿಗಳು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು.

4. ಸಾಕ್ಷ್ಯ ನಾಶ ಮಾಡಿರುವುದಕ್ಕೆ ಎಫ್‌ಎಸ್‌ಎಲ್‌ ವರದಿಯಲ್ಲಿ ಸುಳಿವು ಸಿಕ್ಕಿದೆ.

5. ಪ್ರಕರಣದ ಎ2 ಆರೋಪಿ ದರ್ಶನ್ ತಮ್ಮ ಹಣ ಹಾಗೂ ಅಭಿಮಾನಿ ಬಳಗದ ಮೂಲಕ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.

6. ತಾವು ಮಾಡುತ್ತಿರುವುದು ಅಪರಾಧ ಎಂದು ಗೊತ್ತಿದ್ದು ಆರೋಪಿಗಳು ಕೃತ್ಯ ಎಸಗಿದ್ದಾರೆ.

7. ಹತ್ಯೆ ಬಳಿಕ ಆರೋಪಿಗಳು ಸಾಕ್ಷ್ಯ ನಾಶ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

8. ತನಿಖೆ ಪ್ರಗತಿಯಲ್ಲಿರುವಾಗ ಆರೋಪಿಗಳಿಗೆ ಜಾಮೀನು ಸಿಕ್ಕರೆ ತನಿಖೆಗೆ ಹಿನ್ನಡೆ ಆಗಬಹುದು.

ಹೀಗೆ ಹಲವು ಕಾರಣಗಳನ್ನು ಪೊಲೀಸರು ರಿಮ್ಯಾಂಡ್ ಅರ್ಜಿಯಲ್ಲಿ ಸೇರಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ನಾಳೆ(ಜುಲೈ 18) ಕೂಡ ದರ್ಶನ್ ಮತ್ತವರ ಗ್ಯಾಂಗ್‌ ಜಾಮೀನು ಅರ್ಜಿ ಸಲ್ಲಿಸಲು ಯತ್ನಿಸುವುದಕ್ಕೂ ಸಾಧ್ಯವಾಗುವುದಿಲ್ಲ ಎನ್ನಲಾಗ್ತಿದೆ.

More from Filmibeat

English summary
Renukaswamy murder case, Police ready to file remand application again;
Read more about: darshan case sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X