twitter
    For Quick Alerts
    ALLOW NOTIFICATIONS  
    For Daily Alerts

    ಪೊಲೀಸ್ ಠಾಣೆಗೆ ಬರಲಿಲ್ಲ ಹಂಸಲೇಖ: 2ನೇ ಬಾರಿ ನೋಟಿಸ್

    |

    ಸಂಗೀತಗಾರ ಹಂಸಲೇಖರ ಹೇಳಿಕೆ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಲೇ ಇದೆ. ನಾದಬ್ರಹ್ಮನ ಹೇಳಿಕೆ ಖಂಡಿಸಿ ದೂರುಗಳು ದಾಖಲಾಗಿವೆ. ಕೆಲವೆಡೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡುದ್ದಾರೆ. ದಿವಂಗತ ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಯನ್ನು ವಿರೋಧಿಸಿ, ಇತ್ತೀಚೆಗೆ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆಯಿಂದ ದೂರು ನೀಡಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿ ಹಂಸಲೇಖ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.

    ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಂಸಲೇಖ ಅಸ್ಪೃಶ್ಯತೆ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ದಿವಂಗತ ಪ್ರೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದರ ಬಗ್ಗೆ ಪ್ರಸ್ತಾಪಿಸಿದ್ದರು. ದಲಿತರ ಮನೆಗೆ ಹೋದ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದು ಹಂಸಲೇಖ ಪ್ರಶ್ನೆ ಮಾಡಿದ್ದರು. ಇದು ಪೇಜಾವರ ಶ್ರೀ ಭಕ್ತಗಣವನ್ನು ಕೆರಳಿಸಿತ್ತು. ಈ ಬೆನ್ನಲ್ಲೇ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆ ಪೊಲೀಸರಿಗೆ ದೂರು ನೀಡಿತ್ತು.

    ನೋಟಿಸ್ ನೀಡಿದರೂ ಹಾಜರಾಗಿಲ್ಲ ಹಂಸಲೇಖ

    ನೋಟಿಸ್ ನೀಡಿದರೂ ಹಾಜರಾಗಿಲ್ಲ ಹಂಸಲೇಖ

    ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆ ಹಂಸಲೇಖ ಹೇಳಿಕೆ ವಿರುದ್ಧ ತಿರುಗಿ ಬಿದ್ದಿತ್ತು. ಹೀಗಾಗಿ ಕ್ಷಮೆ ಕೇಳಿದರೂ ಅದನ್ನು ಒಪ್ಪದ ವೇದಿಕೆ ದೂರು ನೀಡಿದ್ದರು. ಈ ದೂರಿನ ಅನ್ವಯ ಬಸವನಗುಡಿ ಪೊಲೀಸರು ಹಂಸಲೇಖಗೆ ನೋಟಿಸ್ ಕಳುಹಿಸಿದ್ದರು. ಆದರೆ, ಹಂಸಲೇಖರಿಂದ ಆ ದೂರಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಪೊಲೀಸರು ನೀಡಿದ ನೋಟಿಸ್ ಬಳಿಕವೂ ವಿಚಾರಣೆಗೆ ಹಾಜರಾಗಿರಲಿಲ್ಲ.

    2ನೇ ಬಾರಿ ನೋಟಿಸ್ ಕಳುಹಿಸಿದ ಪೊಲೀಸ್

    2ನೇ ಬಾರಿ ನೋಟಿಸ್ ಕಳುಹಿಸಿದ ಪೊಲೀಸ್

    ಬಸವನಗುಡಿ ಪೊಲೀಸರು ಮೊದಲನೇ ಬಾರಿ ಕಳುಹಿಸಿದ ನೋಟಿಸ್‌ಗೆ ಹಂಸಲೇಖ ಪ್ರತಿಕ್ರಿಯೆ ಬಾರದ ಹಿನ್ನೆಲೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಬಾರಿ ಹಂಸಲೇಖ ವಿಚಾರಣೆ ಹಾಜರಾಗಲೇ ಬೇಕಿದೆ. ಇಲ್ಲವೆ ಕಾನೂನು ತಜ್ಞರ ಸಲಹೆ ಪಡೆದು ಮುನ್ನುಗ್ಗುವ ಸಾಧ್ಯತೆಯಿದೆ. ಆದರೆ, ಹಂಸಲೇಖ ಅವರೂ ಪಟ್ಟು ಬಿಡುತ್ತಿಲ್ಲ. ಇತ್ತ ದಿವಂಗತ ಪೇಜಾವರ ಶ್ರೀ ಭಕ್ತಗಣನೂ ಸುಮ್ಮನಾಗಿಲ್ಲ. ಹೀಗಾಗಿ ಮುಸುಕಿನ ಯುದ್ಧ ಎಷ್ಟು ದಿನ ಮುಂದುವರೆಯುತ್ತೋ ಗೊತ್ತಿಲ್ಲ.

    ಹಂಸಲೇಖ ಬಹಿರಂಗ ಕ್ಷಮೆ ಕೇಳಲು ಪಟ್ಟು

    ಹಂಸಲೇಖ ಬಹಿರಂಗ ಕ್ಷಮೆ ಕೇಳಲು ಪಟ್ಟು

    ದಿವಂಗತ ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ತಪ್ಪು ಹೇಳಿಕೆ ಕೊಟ್ಟಿದ್ದಾರೆ. ವಿದ್ಯಾಪೀಠ ಸರ್ಕಲ್ ಬಳಿ ಇರುವ ಶ್ರೀಗಳ ಬೃಂದಾವನಕ್ಕೆ ಬಂದು ಬಹಿರಂಗವಾಗಿ ಕ್ಷಮೆ ಕೇಳಬೇಕು. ನಾಲ್ಕು ಗೋಡೆಗಳ ಮಧ್ಯೆ ಕ್ಷಮೆ ಹೇಳಿರುವುದು ಸರಿಯಿಲ್ಲ. ಒಂದು ವೇಳೆ ಬಹಿರಂಗ ಕ್ಷಮೆ ಯಾಚಿಸದೆ ಹೋದರೆ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆಯ ಅಧ್ಯಕ್ಷ ಕೃಷ್ಣ ಕಿಡಿಕಾರಿದ್ದರು.

    ಮಾಧ್ವ ಮಹಾಸಭಾದಿಂದಲೂ ದೂರು

    ಮಾಧ್ವ ಮಹಾಸಭಾದಿಂದಲೂ ದೂರು

    ಹಂಸಲೇಖ ಆಡಿದ ಮಾತುಗಳು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯನ್ನುಂಟು ಮಾಡಿವೆ. ದಿವಂಗತ ಪೇಜಾವರ ಶ್ರೀಗಳಿಗೆ ಕೇಡು ಬಯಸುವ ಸಲುವಾಗಿಯೇ ಇಂತಹ ಹೇಳಿಕೆಗಳನ್ನು ಹಂಸಲೇಖ ನೀಡಿದ್ದಾರೆ. ಇದು ಸಮಾಜದಲ್ಲಿ ವರ್ಗಗಳ ಮಧ್ಯೆ ದ್ವೇಷವನ್ನು ಸಾರುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಹಂಸಲೇಖ ನೀಡಿದ ಹೇಳಿಕೆಯಿಂದ ಸಮಾಜದಲ್ಲಿ ಏನಾದರೂ ಗಲಾಟೆಗಳು ಸಂಭವಿಸಿದರೆ, ಅದಕ್ಕೆ ಕಾರಣ ಇವರೇ ಕಾರಣೀಕರ್ತರಾಗಿರುತ್ತಾರೆ. ಅಲ್ಲದೆ ಹಂಸಲೇಖ ಪತ್ನಿಯೇ ಖಂಡಿಸಿದ್ದಾಗಿ ಅವರು ಹೇಳಿಕೊಂಡಿರುವುದರಿಂದ ಇವರ ನಡುವಳಿಕೆ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದೆ. ಹೀಗಾಗಿ ಇವರನ್ನು ಸಮಾಜಕ್ಕೆ ಘಾತುಕ ಉಂಟು ಮಾಡುವ ವ್ಯಕ್ತಿಯೆಂದು ಪರಿಗಣಿಸಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.

    English summary
    Hamalekha's comment against Peejawara seer turned into controversial. After received complaint from Akhila Bharata Bhramhana Mahasabha Vipra Vedike President, police served notice to Hamasalekha. They severed notice 2nd time.
    Friday, November 19, 2021, 17:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X