ನಟಿ ರಾಗಿಣಿ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪಟ್ಟಿ

ನಟಿ ರಾಗಿಣಿಯನ್ನು ಸೆಪ್ಟೆಂಬರ್ 04 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ವ್ಯಸನ, ಡ್ರಗ್ಸ್ ಸೇವಿಸಲು ಉತ್ತೇಜನ, ಡ್ರಗ್ ಪೆಡ್ಲರ್ ಜೊತೆ ನಂಟು ಸೇರಿದಂತೆ ಕೆಲವು ಆರೋಪಗಳು ಮೇಲಿವೆ.

ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆವ ಮುಂಚೆ, ಅವರ ಯಲಹಂಕದ ಫ್ಲಾಟ್‌ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ತಪಾಸಣೆ ನಡೆಸಿ, ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿದಾಗ, 'ರಾಗಿಣಿ ಮನೆಯಲ್ಲಿ ಕೆಲವು ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ವಸ್ತುಗಳು ದೊರೆತಿವೆ' ಎಂದಷ್ಟೇ ಹೇಳಿದ್ದರು. ಏನು ವಸ್ತುಗಳು ದೊರೆತಿವೆ ಎಂದು ಬಹಿರಂಗಗೊಳಿಸಿರಲಿಲ್ಲ. ಆದರೆ ಪೊಲೀಸರು ಸಲ್ಲಿಸಿರುವ ರಿಮ್ಯಾಂಡ್ ಪತ್ರದಲ್ಲಿ ರಾಗಿಣಿ ಮನೆಯಲ್ಲಿ ವಶಪಡಿಸಿಕೊಂಡ ವಸ್ತುಗಳ ಪಟ್ಟಿಯನ್ನು ನೀಡಿದ್ದಾರೆ.

ಸೆಪ್ಟೆಂಬರ್ 4 ರಂದು ರೇಡ್‌

ಸೆಪ್ಟೆಂಬರ್ 4 ರಂದು ರೇಡ್‌

ಯಲಹಂಕ ಬಳಿಯ ಅಳ್ಳಾಲ್‌ ಸಂದ್ರದ ಅನನ್ಯ ಅಪಾರ್ಟ್‌ಮೆಂಟ್‌ನಲ್ಲಿನ ರಾಗಿಣಿ ಮನೆಯನ್ನು ಸೆಪ್ಟೆಂಬರ್ 04 ರ ಬೆಳಿಗ್ಗೆ ಸಿರಾಜ್ ಎಂಬ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಮಾಡಲಾಯಿತು. ಬೆಳ್ಳಬೆಳಿಗ್ಗೆ ಆದ ರೇಡ್‌ನಿಂದ ರಾಗಿಣಿ ವಿಚಲಿತರಾಗಿದ್ದರು.

ಮೂರು ದುಬಾರಿ ಮೊಬೈಲ್ ಹೊಂದಿದ್ದ ರಾಗಿಣಿ

ಮೂರು ದುಬಾರಿ ಮೊಬೈಲ್ ಹೊಂದಿದ್ದ ರಾಗಿಣಿ

ರಾಗಿಣಿ ಮನೆಯಿಂದ ಕಪ್ಪು ಬಣ್ಣದ ಸ್ಯಾಮ್‌ಸಂಗ್ ನೋಟ್ 10 ಮೊಬೈಲ್, ನೀಲಿ ಬಣ್ಣದ ಗ್ಯಾಲಕ್ಸಿ ನೋಟ್ 9, ಬಂಗಾರದ ಬಣ್ಣದ ಆಪಲ್ 11, 32 ಜಿಬಿ, 8 ಜಿಬಿಯ ಎರಡು ಪೆನ್‌ಡ್ರೈವ್ ಹಾಗೂ ಕೆಲವು ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾಮಾನ್ಯ ಸಿಗರೇಟ್‌ಗಳಲ್ಲ ಅವು!

ಸಾಮಾನ್ಯ ಸಿಗರೇಟ್‌ಗಳಲ್ಲ ಅವು!

ವಶಪಡಿಸಿಕೊಳ್ಳಲಾದ ಸಿಗರೇಟ್ ಸಾಮಾನ್ಯದ ಸಿಗರೇಟ್‌ಗಳಾಗಿರಲಿಲ್ಲ! ಪೊಲೀಸರು ಉಲ್ಲೇಖಿಸಿರುವಂತೆ, 'ಆರ್ಗಾನಿಕ್ ಸ್ಮೋಕ್ ಮೆಂಥಲ್ ಫ್ರೀ ಇನ್ಸೇಟಿವ್ ಎಂಬ ಹೆಸರಿನ ಮರದ ಬಾಕ್ಸ್‌ನಲ್ಲಿ ಆರು ಸಿಗರೇಟುಗಳಿದ್ದವಂತೆ. ಜೊತೆಗೆ ಮೂರು ಸಿಗರೇಟ್ ಬಳಿಸಿದ ಸ್ಟ್ರಿಪ್‌ಗಳಿದ್ದವಂತೆ. ಇವುಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ.

Recommended Video

Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada
ಎ-7 ಆರೋಪಿ ನೀಡಿದ ಮಾಹಿತಿ

ಎ-7 ಆರೋಪಿ ನೀಡಿದ ಮಾಹಿತಿ

ಪ್ರಕರಣದಲ್ಲಿ ಎ-7 ಆರೋಪಿ ಆಗಿರುವ ಲೂಮ್ ಪೆಪ್ಪರ್, ತಾನು ರಾಗಿಣಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದೆ ಎಂದು ಹೇಳಿದ್ದಾನಂತೆ. ಅಷ್ಟೇ ಅಲ್ಲದೆ ಆತನ ಮನೆಯಲ್ಲಿ 10 ಗ್ರಾಂ ತೂಕದ ಸಿಂಥೆಟಿಕ್ ಡ್ರಗ್ಸ್ ಅನ್ನು ವಶಪಡಸಿಕೊಂಡಿದ್ದಾರಂತೆ ಪೊಲೀಸರು.

More from Filmibeat

English summary
CCB police sized three costly mobiles, 2 pen drives and different kind of cigarettes from actress Ragini's house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X