twitter
    For Quick Alerts
    ALLOW NOTIFICATIONS  
    For Daily Alerts

    ಉಮಾಪತಿಗೆ ನೀಡಿದ್ದ ಭದ್ರತೆ ವಾಪಸ್: ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

    |

    ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿದೆ. ಇಲಾಖೆಯ ಈ ಹಠಾತ್ ನಿರ್ಣಯದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಉಮಾಪತಿ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

    ನಿರ್ಮಾಪಕ ಉಮಾಪತಿ ಹಾಗೂ ಅವರ ಸಹೋದರ ಇಬ್ಬರಿಗೂ ಭೂಗತ ಲೋಕದಿಂದ ಜೀವ ಬೆದರಿಕೆ ಇತ್ತು. ವರ್ಷದ ಹಿಂದೆಯಷ್ಟೆ ಬಾಂಬೆ ರವಿ ಕಡೆಯ ಕೆಲವರು ಉಮಾಪತಿ ಹಾಗೂ ಅವರ ಸಹೋದರನನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಉಮಾಪತಿ ಹಾಗೂ ಅವರ ಸಹೋದರನಿಗೆ ಭದ್ರತೆ ನೀಡಿದ್ದರು.

    ಆದರೆ ಈಗ ಪೊಲೀಸ್ ಭದ್ರತೆಯನ್ನು ಹಿಂಪಡೆದಿದ್ದು, ಇದನ್ನು ಪ್ರಶ್ನಿಸಿ ಉಮಾಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯವು ಗೃಹ ಇಲಾಖೆ ಮತ್ತು ಬೆಂಗಳೂರು ನಗರ ಪೊಲೀಸ್ ಕಮೀಷನರ್‌ಗೆ ನೊಟೀಸ್ ನೀಡಿದ್ದು, ಕಾರಣ ನೀಡುವಂತೆ ಕೇಳಿದೆ.

    Police Took Back Security Given To Producer Umapathy Srinivas Gowda

    ಕಳೆದ ಒಂದು ವರ್ಷದಿಂದ ಪೊಲೀಸ್ ಇಲಾಖೆ ಭದ್ರತೆ ನೀಡುತ್ತಿದೆ. ಈಗ ಏಕಾ-ಏಕಿ ಭದ್ರತೆ ವಾಪಸ್ ಪಡೆದಿದ್ದು, ಹೀಗೆ ಹಠಾತ್ತನೆ ಭದ್ರತೆ ವಾಪಸ್ ಪಡೆದಿರುವ ಬಗ್ಗೆ ಮಾಹಿತಿಯನ್ನೂ ನೀಡಿಲ್ಲ ಎಂದು ಉಮಾಪತಿ ಆರೋಪ ಮಾಡಿದ್ದಾರೆ.

    ಗ್ರಾನೈಟ್ ಸೇರಿ ಹಲವು ಉದ್ಯಮಗಳಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ಅವರ ಅಣ್ಣ ತೊಡಗಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಪಕರಾಗಿಯೂ ಜನಪ್ರಿಯರು, ಈ ಸಹೋದರರ ಏಳಿಗೆಯನ್ನು ಸಹಿಸದ ಕೆಲವರು ಉಮಾಪತಿ ಸಹೋದರರ ವಿರುದ್ಧ ಸುಪಾರಿ ನೀಡಿದ್ದರು. ಆದರೆ ಅದೃಷ್ಟವಶಾತ್ ಆರೋಪಿಗಳು ಬಂಧನಕ್ಕೆ ಒಳಗಾದರು.

    ಉಮಾಪತಿ ಶ್ರೀನಿವಾಸ್ ಗೌಡ ಇದೀಗ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರು-ಕನಕಪುರ ರಸ್ತೆಯಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲು ಉಮಾಪತಿ ಮುಂದಾಗಿದ್ದಾರೆ. ಈಗಾಗಲೇ ಗುದ್ದಲಿ ಪೂಜೆ ಮುಗಿದಿದ್ದು, ನಿರ್ಮಾಣ ಕಾರ್ಯ ಆರಂಭವಾಗಿದೆ. 25 ಎಕರೆ ವ್ಯಾಪ್ತಿಯ ಫಿಲಂ ಸಿಟಿ ನಿರ್ಮಾಣಕ್ಕೆ 175 ಕೋಟಿ ಬಂಡವಾಳವನ್ನು ಉಮಾಪತಿ ಶ್ರೀನಿವಾಸ್ ಗೌಡ ತೊಡಗಿಸುತ್ತಿದ್ದಾರೆ. ಕೇವಲ ಒಂದು ವರ್ಷದಲ್ಲಿ ಫಿಲಂ ಸಿಟಿ ನಿರ್ಮಾಣವನ್ನು ಪೂರ್ಣಗೊಳಿಸುವ ಯೋಜನೆಯನ್ನು ಹಾಕಿಕೊಂಡಿರುವ ಉಮಾಪತಿ ವಿದೇಶದಿಂದ ತಂತ್ರಜ್ಞರನ್ನು ಇದಕ್ಕಾಗಿ ಕರೆತರುತ್ತಿದ್ದಾರೆ. ಒಟ್ಟಿನಲ್ಲಿ ಬೃಹತ್‌ ಆಗಿಯೇ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ ಉಮಾಪತಿ.

    ನಿರ್ಮಾಪಕ ಉಮಾಪತಿ ಇತ್ತೀಚೆಗೆ ದರ್ಶನ್ ಕಾರಣಕ್ಕೆ ಸುದ್ದಿಯಲ್ಲಿದ್ದರು. ದರ್ಶನ್ ಗೆಳೆಯರೇ ಕೆಲವರು ದರ್ಶನ್ ಹೆಸರು ಬಳಸಿ ಬ್ಯಾಂಕ್‌ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಪ್ರಕರಣದಲ್ಲಿ ದರ್ಶನ್‌ರ ಮೈಸೂರು ಗೆಳೆಯರು ಹಾಗೂ ಸ್ವತಃ ದರ್ಶನ್ ಉಮಾಪತಿಯೇ ಆರೋಪಿ ಎಂಬಂತೆ ಮಾತನಾಡಿದ್ದರು. ನಂತರ ಈ ವಿಷಯ ದೊಡ್ಡದಾಗಿ ಬೆಳೆದು, ದರ್ಶನ್ ಹಾಗೂ ಉಮಾಪತಿ ನಡುವೆ ಮುನಿಸಿಗೆ ಕಾರಣವಾಯ್ತು. ಇದೇ ಪ್ರಕರಣದ ಮುಂದುವರೆದ ಭಾಗದಂತೆ ಇಂದ್ರಜಿತ್ ಲಂಕೇಶ್ ಅವರೂ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

    English summary
    Police department took back security given to producer Umapathy Srinivas Gowda. Producer approached high court and court issue notice to police commissioner.
    Saturday, October 16, 2021, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X