'ಪಂಚತಂತ್ರ' ಬೆಡಗಿಯ ಜೊತೆ 'ಬನಾರಸ್'ಗೆ ಹೊರಟ ಜಮೀರ್ ಅಹ್ಮದ್ ಪುತ್ರ
Recommended Video
ಶಾಸಕ ಜಮೀರ್ ಅಹ್ಮದ್ ಪುತ್ರ ಜಾಹಿದ್ ಖಾನ್ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ತಿಂಗಳುಗಳಿಂದ ಕೇಳಿ ಬರುತ್ತಿದೆ. ಆದ್ರೆ ಜಾಹಿದ್ ಸಿನಿಮಾ ಮಾತ್ರ ಇನ್ನು ಅನೌನ್ಸ್ ಆಗಿಲ್ಲ. ಆದ್ರೀಗ ಜಾಹಿದ್ ಖಾನ್ ನಿರ್ದೇಶಕ ಯೋಗರಾಜ್ ಭಟ್ರ ಪಂಚತಂತ್ರ ಸಿನಿಮಾದ ಬೆಡಗಿ ಸೋನಲ್ ಮೊಂತೆರೋ ಜೊತೆ ಬನಾರಸ್ ಗೆ ಹೊರಟಿದ್ದಾರೆ.
ಏನಿದು ಅಂತ ಅಚ್ಚರಿ ಪಡಬೇಡಿ. ಸೂಪರ್ ಹಿಟ್ ಬೆಲ್ ಬಾಟಂ ಸಿನಿಮಾದ ನಂತರ ನಿರ್ದೇಶಕ ಜಯತೀರ್ಥ, ಜಮೀರ್ ಅಹ್ಮದ್ ಪುತ್ರ ಜಾಹಿದ್ ಖಾನ್ ಗೆ ಆಕ್ಷನ್ ಕಟ್ ಹೇಳಲು ತಯಾರಿ ಮಾಡಿಕೊಳ್ಳುತ್ತಿದ್ದರು. ಆದ್ರೀಗ ಸಿನಿಮಾದ ಟೈಟಲ್ ರಿವೀಲ್ ಆಗಿದೆ.
ಹೌದು, ಜಾಹಿದ್ ಚೊಚ್ಚಲ ಚಿತ್ರಕ್ಕೆ ಬನಾರಸ್ ಎಂದು ನಾಮಕರಣ ಮಾಡಲಾಗಿದೆಯಂತೆ. ಪ್ರತೀ ಸಿನಿಮಾದಲ್ಲೂ ಏನಾದರೊಂದು ಹೊಸತನದ ಮೂಲಕ ಅಭಿಮಾನಿಗಳ ಗಮನ ಸೆಳೆಯುವ ಜಯತೀರ್ಥ ಈ ಬಾರಿ ಬನಾರಸ್ ನಲ್ಲಿ ಯಾವ ಅಂಶ ಹೇಳಲು ಹೊರಟಿದ್ದಾರೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳನ್ನು ಕಾಡುತ್ತಿದೆ.

ಜಾಹಿದ್ ಗೆ ಸೋನಲ್ ನಾಯಕಿ
ದೊಡ್ಡ ನಟನಾಗಬೇಕೆನ್ನುವ ಕನಸೊತ್ತು ಚಿತ್ರರಂಗಕ್ಕೆ ಬಂದಿರುವ ಜಾಹಿದ್ 'ಬನಾರಸ್ ಸಿನಿಮಾ ಮೂಲಕ ಬಣ್ಣದ ಲೋಕದ ಜರ್ನಿ ಪ್ರಾರಂಭಿಸುತ್ತಿದ್ದಾರೆ. ಅಂದ್ಹಾಗೆ ಜಾಹಿದ್ ಖಾನ್ ಮೊದಲ ಸಿನಿಮಾಗೆ ಸೋನಲ್ ಮೊಂತೆರೋ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೆ ಸಾಕಷ್ಟು ಸಿನಿಮಾಗಲ್ಲಿ ಬ್ಯುಸಿ ಇರುವ ಸೋನಲ್ ಈಗ ಬನಾರಸ್ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ.

ವಾರಣಾಸಿಯಲ್ಲಿ ಚಿತ್ರೀಕರಣ
ಅಂದ್ಹಾಗೆ ಚಿತ್ರದ ಚಿತ್ರೀಕರಣ ಬಹುತೇಕ ಭಾಗ ವಾರಣಾಸಿಯಲ್ಲಿ ಆಗಲಿದೆ. ಈಗಾಗಲೆ ನಿರ್ದೇಶಕ ಜಯತೀರ್ಥ ಚಿತ್ರೀಕರಣ ಲೊಕೇಶನ್ ಗಾಗಿ ವಾರಣಾಸಿ ಪ್ರವಾಸ ಮಾಡಿ ಬಂದಿದ್ದಾರೆ. ಸುಮಾರು ಒಂದು ತಿಂಗಳ ಕಾಲ ವಾರಣಾಸಿಯಲ್ಲಿ ಬೀಡುಬಿಡಲಿದೆ ಚಿತ್ರತಂಡ.

ಅದ್ದೂರಿ ಲಾಂಚ್ ಗೆ ಪ್ಲಾನ್
ಒಂದು ತಿಂಗಳ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ನಂತರ ದೊಡ್ಡ ಮಟ್ಟಕ್ಕೆ ಅಧಿಕೃತವಾಗಿ ಚಿತ್ರದ ಟೈಟಲ್, ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಲಾಂಚ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ. ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಸೋನಲ್ ಬಳಿ ಇರುವ ಸಿನಿಮಾಗಳು
ತುಳು ಸಿನಿಮಾದಿಂದ ಪ್ರಾರಂಭವಾದ ಸೋನಲ್ ಸಿನಿ ಜರ್ನಿ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ವರೆಗು ರೀಚ್ ಆಗಿದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಉಪೇಂದ್ರ ಜೊತೆ ಬುದ್ಧಿವಂತ-2 ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಸೋನಲ್ ಈಗ ಬನಾರಸ್ ಚಿತ್ರದಲ್ಲೂ ಮಿಂಚಲಿದ್ದಾರೆ.


Click it and Unblock the Notifications











