'ಸೀತಾರಾಮ ಕಲ್ಯಾಣ' ನೋಡಿ ಭಲೇ ಭಲೇ ಎಂದ ರಾಜಕಾರಣಿಗಳು.!
ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯ, ಶಾಸಕರ ಹೊಡೆದಾಟ.. ಹೀಗೆ ಪ್ರಸಕ್ತ ರಾಜಕೀಯ ಜಂಜಾಟ ಏನೇ ಇರಲಿ... ಅದನ್ನೆಲ್ಲ ಬದಿಗಿಟ್ಟು ಎಲ್ಲ ಪಕ್ಷದ ನಾಯಕರನ್ನು ತಮ್ಮ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದ ಪ್ರೀಮಿಯರ್ ಶೋಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಹ್ವಾನಿಸಿದ್ದರು.
ಮುಖ್ಯಮಂತ್ರಿಗಳ ಆಹ್ವಾನವನ್ನು ಸ್ವೀಕರಿಸಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಚಿವ ಈಶ್ವರಪ್ಪ, ಸಚಿವರಾದ ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ರಾಜಕೀಯ ನಾಯಕರು ನಿನ್ನೆ ಸಂಜೆ ಒರಾಯನ್ ಮಾಲ್ ಗೆ ಆಗಮಿಸಿದ್ದರು.
ಓರಾಯನ್ ಮಾಲ್ ನ ಪಿವಿಆರ್ ನಲ್ಲಿ ಏರ್ಪಡಿಸಲಾಗಿದ್ದ 'ಸೀತಾರಾಮ ಕಲ್ಯಾಣ' ಪ್ರೀಮಿಯರ್ ಶೋ ಮುಗಿದ ಮೇಲೆ ಚಿತ್ರವನ್ನು ಕಣ್ತುಂಬಿಕೊಂಡ ರಾಜಕೀಯ ನಾಯಕರು ಚಿತ್ರದ ಬಗ್ಗೆ ಕಾಮೆಂಟ್ ಮಾಡಿದ್ದು ಹೀಗೆ...

ನೂರಕ್ಕೆ ನೂರು ಅಂಕ ಕೊಟ್ಟ ಕುಮಾರಸ್ವಾಮಿ
''ಈ ಚಿತ್ರದಲ್ಲಿ ಉತ್ತಮ ಸಂದೇಶ ಇದೆ. ನಿಖಿಲ್ ಮೇಲೆ ಎಲ್ಲರ ಆಶೀರ್ವಾದ ಇರಲಿ ಅಂತ ನಾಡಿನ ಜನತೆ ಬಳಿ ನಾನು ಪ್ರಾರ್ಥನೆ ಮಾಡುವೆ. ವೀಕ್ಷಕನಾಗಿ ನಿಖಿಲ್ ಗೆ ನೂರಕ್ಕೆ ನೂರು ಅಂಕ ಕೊಡುವೆ. ನಿಖಿಲ್ ನಟನೆ ನನಗೆ ಮೆಚ್ಚುಗೆ ಆಗಿದೆ'' - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ನಿಖಿಲ್ ತಾಯಿ ಅನಿತಾ ಹೇಳಿದ್ದೇನು.?
''ನಿಖಿಲ್ ಪರ್ಫಾಮೆನ್ಸ್ ನಲ್ಲಿ ತುಂಬಾ ಇಂಪ್ರೂವ್ ಆಗಿದೆ. ಎಕ್ಸ್ ಪ್ರೆಶನ್ಸ್ ಮತ್ತು ಡ್ಯಾನ್ಸ್ ನಲ್ಲಿ ಇಂಪ್ರೂವ್ ಮೆಂಟ್ ಇದೆ. ಕಾಮಿಡಿ ನನಗೆ ತುಂಬಾ ಇಷ್ಟ ಆಯ್ತು'' - ಅನಿತಾ ಕುಮಾರಸ್ವಾಮಿ

ವಿಶಲ್ ಹೊಡೆಯಬೇಕು ಅನಿಸುತ್ತಿತ್ತು
''ಬಹಳ ವರ್ಷಗಳ ನಂತರ ಒಂದು ಅದ್ಭುತ ಸಿನಿಮಾ ನೋಡಿದ ಹಾಗಾಯಿತು. ಹೊಗಳಿಕೆಗೆ ಹೀಗೆ ಹೇಳುತ್ತಿಲ್ಲ. ರಿಚ್ ಮೇಕಿಂಗ್ ಇದೆ. ಡೈಲಾಗ್ಸ್ ಚೆನ್ನಾಗಿದೆ. ನಿಖಿಲ್ ಮತ್ತು ರಚಿತಾ ಅಭಿನಯ ಸೂಪರ್. ನಿಖಿಲ್ ಸ್ಟಂಟ್ಸ್, ಡೈಲಾಗ್ ಡೆಲಿವೆರಿ ಈಸ್ ವೆರಿ ಗುಡ್. ನನಗೆ ಎಷ್ಟೋ ಬಾರಿ ವಿಶಲ್ ಹೊಡೆಯಬೇಕು ಅನಿಸುತ್ತಿತ್ತು. ಫ್ಯಾಮಿಲಿ ಎಂಟರ್ ಟೇನರ್ ಜೊತೆಗೆ ಮೆಸೇಜ್ ಇದೆ. ರೈತರ ಬಗ್ಗೆ ಒಳ್ಳೆಯ ಸಂದೇಶ ಇದೆ'' - ಬಿ.ಸಿ.ಪಾಟೀಲ್

ಮನರಂಜನೆ ಕೊಡುವ ಚಿತ್ರ
''ಸೀತಾರಾಮ ಕಲ್ಯಾಣ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದಲ್ಲಿ ನೀತಿ ಪಾಠ ಇದೆ. ಸಂಸಾರ ಸಮೇತ ನೋಡುವ ಚಿತ್ರ. ನಿಖಿಲ್ ಮತ್ತು ರಚಿತಾ ಅಭಿನಯ ಬಹಳ ಚೆನ್ನಾಗಿದೆ. ಜನರಿಗೆ ಖಂಡಿತ ಮನರಂಜನೆ ಕೊಡುತ್ತದೆ'' - ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವ

ನಾಗತಿಹಳ್ಳಿ ಚಂದ್ರಶೇಖರ್ ಏನಂದರು.?
''ಜಾಗ್ವಾರ್ ಚಿತ್ರದಲ್ಲಿ ಏನೇನು ಅಂಶಗಳು ಕೊರತೆ ಇತ್ತೋ, ಅದನ್ನ ನಿಖಿಲ್ ತುಂಬಿಸಿಕೊಂಡಿದ್ದಾರೆ. ಅವರ ಅಭಿನಯದಲ್ಲಿ ಪಕ್ವತೆ ಬಂದಿದೆ. ಕೆಲವು ಸನ್ನಿವೇಶಗಳಲ್ಲಿ ಪ್ರಬುದ್ಧತೆ ಕಾಣಿಸಿದೆ. ಕನ್ನಡ ಚಿತ್ರರಂಗಕ್ಕೆ ನಿಜವಾದ ನಾಯಕ ನಟನ ಪ್ರವೇಶ ಈಗ ಆಗಿದೆ'' - ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ

ಈಶ್ವರಪ್ಪ ಹೇಳಿದ್ದೇನು.?
''ನಿಖಿಲ್ ಪ್ರತಿಭೆಯನ್ನು ಹೊರಗೆ ತಂದಿರುವ ಒಂದು ವಿಶೇಷ ಸಿನಿಮಾ ಇದು. ಸಿನಿಮಾದಲ್ಲಿ ಮನರಂಜನೆ ಸಿಗುತ್ತೆ. ರೈತರಿಗೆ ಒಳ್ಳೆ ಸಂದೇಶ ಇದೆ. ಜನರ ಜೀವನಕ್ಕೆ ಒಂದು ಮಾರ್ಗದರ್ಶನ ಆಗಬಲ್ಲ ಚಿತ್ರ ಇದು'' - ಈಶ್ವರಪ್ಪ, ಬಿಜೆಪಿ ನಾಯಕ.

ಉತ್ತಮ ಸಿನಿಮಾ
''ನಾನು ಸಿನಿಮಾ ನೋಡುವುದೇ ಬಹಳ ಕಡಿಮೆ. ಸೀತಾರಾಮ ಕಲ್ಯಾಣ ನಿಜಕ್ಕೂ ಉತ್ತಮ ಸಿನಿಮಾ. ನಟನೆಯಲ್ಲಿ ಪ್ರಬುದ್ಧೆ ಇದೆ. ಅನೇಕ ವಿಚಾರಗಳಲ್ಲಿ ಮೆಸೇಜ್ ಇದೆ. ಈ ಚಿತ್ರವನ್ನು ಜನರು ಮೆಚ್ಚಿ ಎಲ್ಲರಿಗೂ ಪ್ರೋತ್ಸಾಹ ಕೊಡಲಿ''- ಉಗ್ರಪ್ಪ


Click it and Unblock the Notifications