»   » ಉಪೇಂದ್ರ ಯಾವ ಪಕ್ಷ ಸೇರಬೇಕು ಎನ್ನುವ ಬಗ್ಗೆ ಜನಸಾಮಾನ್ಯರು ಕೊಟ್ಟ ತೀರ್ಪು

ಉಪೇಂದ್ರ ಯಾವ ಪಕ್ಷ ಸೇರಬೇಕು ಎನ್ನುವ ಬಗ್ಗೆ ಜನಸಾಮಾನ್ಯರು ಕೊಟ್ಟ ತೀರ್ಪು

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ರಾಜಕಾರಣಕ್ಕೆ ಇಳಿಯಲಿದ್ದಾರೆ. ರಾಜಕೀಯವನ್ನು ಪ್ರಜಾಕೀಯ ಎಂದು ಮಾಡುವುದಕ್ಕೆ ಉಪ್ಪಿ ಹೊರಟಿದ್ದು, ತಮ್ಮ ತಲೆಯಲ್ಲಿರುವ ಹೊಸ ಐಡಿಯಾಗಳ ಮೂಲಕ ವ್ಯವಸ್ಥೆಯನ್ನು ಬದಲಾಯಿಸುವುದಕ್ಕೆ ಒಂದು ಹೆಜ್ಜೆ ಇಟ್ಟಿದ್ದಾರೆ.

ಉಪೇಂದ್ರ ರಾಜಕೀಯಕ್ಕೆ ಬರುವ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಒಂದು ಪೋಲ್ ಏರ್ಪಡಿಸಿತ್ತು. ಉಪೇಂದ್ರ ಅವರು ರಾಜಕೀಯಕ್ಕೆ ಬರಬೇಕಾ ಹಾಗೂ ಬಂದರೆ ಅವರು ಯಾವ ಪಕ್ಷ ಸೇರಬೇಕು ಎಂದು ಪ್ರಶ್ನೆ ಕೇಳಿತ್ತು. ಇದಕ್ಕೆ ಸಾವಿರಾರು ಜನರು ತಮ್ಮ ಮತವನ್ನು ಹಾಕಿದ್ದು ತಮ್ಮ ಜನಾಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಹಾಗಿದ್ರೆ, ಉಪೇಂದ್ರ ಯಾವ ಪಕ್ಷ ಸೇರಲಿ ಎಂದು ಜನರು ಹೇಳುತ್ತಿದ್ದಾರೆ ಎಂಬುದನ್ನ ಮುಂದೆ ನೋಡಿ

ಬಿಜೆಪಿಗೆ ಉಪೇಂದ್ರ ಸೇರಲಿ

ಉಪೇಂದ್ರ ರಾಜಕೀಯಕ್ಕೆ ಬಂದರೆ ಬಿಜೆಪಿ ಪಕ್ಷ ಸೇರಬೇಕು ಎನ್ನುವುದು ಶೇಕಡಾ 41% ಜನ ಅಭಿಪ್ರಾಯ ಪಟ್ಟಿದ್ದಾರೆ.

ಕಾಂಗ್ರೆಸ್ ಗೆ ಉಪ್ಪಿ ಬರಲಿ

ಶೇಕಡ 4 ರಷ್ಟು ಜನ ಉಪೇಂದ್ರ ಅವರು ಕಾಂಗ್ರೆಸ್ ಪಕ್ಷ ಸೇರಬೇಕು ಅಂತ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್

ಉಪೇಂದ್ರ ಅವರು ಜೆಡಿಎಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಬೇಕು ಎಂದು ಶೇಕಡಾ 5% ರಷ್ಟು ಜನರು ಹೇಳುತ್ತಿದ್ದಾರೆ.

ಸ್ವತಂತ್ರ ಪಕ್ಷ

ಉಪೇಂದ್ರ ತಮ್ಮ ಕನಸನ್ನು ನನಸು ಮಾಡುವುದಕ್ಕೆ ಅವರದ್ದೇ ಆದ ಸ್ವತಂತ್ರ ಪಕ್ಷವನ್ನು ಸ್ಥಾಪನೆ ಮಾಡಬೇಕು ಎಂಬುದು ಶೇಕಡ 30ರಷ್ಟು ಜನರ ಅಭಿಮತ.

ರಾಜಕೀಯ ಬೇಡ

ಇನ್ನು ಶೇಕಡಾ 19 ರಷ್ಟು ಜನರು ಉಪೇಂದ್ರ ಅವರು ರಾಜಕೀಯಕ್ಕೆ ಬರುವುದು ಬೇಡ ಅವರು ಸಿನಿಮಾ ನಟರಾಗಿಯೇ ಇರಲಿ ಎನ್ನುತ್ತಿದ್ದಾರೆ.

ಬಿಜೆಪಿ ಸೇರಲಿ

ನಿಮ್ಮ 'ಫಿಲ್ಮಿಬೀಟ್ ಕನ್ನಡ' ಏರ್ಪಡಿಸಿದ್ದ ಪೋಲ್ ನಲ್ಲಿ ಅತಿ ಹೆಚ್ಚು ಜನ ಉಪೇಂದ್ರ ಬಿಜೆಪಿ ಪಕ್ಷದ ಮೂಲಕ ರಾಜಕೀಯಕ್ಕೆ ಬರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Filmibeat Kannada poll result about Real Star Upendra's politics entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada