For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' Vs 'ಪೊನ್ನಿಯಿನ್ ಸೆಲ್ವನ್': ರಿಷಬ್ ಶೆಟ್ಟಿ ಸಿನಿಮಾವನ್ನು ಮೀರಿಸ್ತಿದೆ ತಮಿಳು ಸಿನಿಮಾ ಟಿಕೆಟ್ ಬುಕ್ಕಿಂಗ್!

  |

  ಬಾಕ್ಸಾಫೀಸ್‌ನಲ್ಲಿ ಈ ವಾರ 4 ದೊಡ್ಡ ದೊಡ್ಡ ಸಿನಿಮಾಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಕನ್ನಡದ 'ಕಾಂತಾರ', ತಮಿಳಿನ 'ಪೊನ್ನಿಯಿನ್ ಸೆಲ್ವನ್', 'ನಾನೇ ವರುವೇನ್' ಜೊತೆಗೆ ಬಾಲಿವುಡ್‌ನ 'ವಿಕ್ರಂ ವೇದ' ಸಿನಿಮಾಗಳು ಒಟ್ಟಿಗೆ ತೆರೆಗಪ್ಪಳಿಸ್ತಿವೆ. ಈಗಾಗಲೇ ಆನ್‌ಲೈನ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

  ಮೊದಲೆಲ್ಲಾ ಸಿನಿಮಾ ಶೋ ಶುರುವಾಗುವ ಮುಂದೆ ಥಿಯೇಟರ್ ಮುಂದೆ ಕ್ಯೂ ನಿಂತು ಟಿಕೆಟ್ ಖರೀದಿಸುವ ವಾಡಿಕೆ ಇತ್ತು. ಸಿಗದೇ ಇದ್ದರೆ ಬ್ಲಾಕ್‌ನಲ್ಲಿ ಟಿಕೆಟ್‌ ಖರೀದಿಸಿ ಸಿನಿಮಾ ನೋಡುತ್ತಿದ್ದರು. ಆದರೆ ಈಗ ಎಲ್ಲವೂ ಆನ್‌ಲೈನ್. ಮೂರ್ನಾಲ್ಕು ದಿನ ಮೊದಲೇ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಟಿಕೆಟ್ ಬುಕ್‌ ಮಾಡಿಕೊಳ್ಳಬಹುದು. ಸದ್ಯ ರಾಜ್ಯದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಹಾಗೂ ತಮಿಳಿನ 'ಪೊನ್ನಿಯಿನ್ ಸೆಲ್ವನ್' ಸಿನಿಮಾಗಳ ಟಿಕೆಟ್ ಬುಕ್ಕಿಂಗ್ ಜೋರಾಗಿದೆ.

  ಬಿಡುಗಡೆಗೂ ಮುನ್ನವೇ ಕಾಂತಾರ ವೀಕ್ಷಿಸುವ ಅವಕಾಶ; ಟಿಕೆಟ್ ದರ ಯಾವ ಚಿತ್ರಮಂದಿರದಲ್ಲಿ ಎಷ್ಟೆಷ್ಟು?ಬಿಡುಗಡೆಗೂ ಮುನ್ನವೇ ಕಾಂತಾರ ವೀಕ್ಷಿಸುವ ಅವಕಾಶ; ಟಿಕೆಟ್ ದರ ಯಾವ ಚಿತ್ರಮಂದಿರದಲ್ಲಿ ಎಷ್ಟೆಷ್ಟು?

  ಬೆಂಗಳೂರಿನಲ್ಲಿ 'ಕಾಂತಾರ' ಚಿತ್ರಕ್ಕಿಂತ 'ಪೊನ್ನಿಯಿನ್ ಸೆಲ್ವನ್' ಟಿಕೆಟ್ ಬುಕ್ಕಿಂಗ್ ಚೆನ್ನಾಗಿದೆ. ಬುಕ್‌ಮೈ ಶೋನಲ್ಲಿ ಇದು ಸ್ಪಷ್ವವಾಗಿ ಗೊತ್ತಾಗುತ್ತಿದೆ. ಜೊತೆಗೆ ಮಲ್ಟಿಫ್ಲೆಕ್ಸ್‌ಗಳಲ್ಲಿ ತಮಿಳು ಚಿತ್ರಕ್ಕೆ ಹೆಚ್ಚು ಶೋಗಳು ಸಿಕ್ಕಿವೆ. ಇದು ಕೆಲವರಿಗೆ ಅಚ್ಚರಿ ಉಂಟುಮಾಡಿರುವುದು ಸುಳ್ಳಲ್ಲ.

   'ಕಾಂತಾರ' Vs 'ಪೊನ್ನಿಯಿನ್ ಸೆಲ್ವನ್'

  'ಕಾಂತಾರ' Vs 'ಪೊನ್ನಿಯಿನ್ ಸೆಲ್ವನ್'

  ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ತ್ರಿಶಾ ಸೇರಿದಂತೆ ದೊಡ್ಡ ತಾರಾಗಣ ಈ ಕಾಸ್ಟ್ಯೂಮ್ ಡ್ರಾಮಾ ಸಿನಿಮಾದಲ್ಲಿದೆ. ರಾಜ್ಯದಲ್ಲೂ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು, ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ರೆಸ್ಪಾನ್ಸ್ ಚೆನ್ನಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಸಿನಿಮಾ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿದೆ. ಬುಕ್‌ಮೈ ಶೋನಲ್ಲಿ 'ಕಾಂತಾರ' ಬಹುತೇಕ ಹಸಿರುಮಯವಾಗಿದ್ದು, 'ಪೊನ್ನಿಯಿನ್ ಸೆಲ್ವನ್' ಕೆಂಪಾಗುತ್ತಲೇ ಇದೆ.

  'ಕಾಂತಾರ' ಚಿತ್ರದಲ್ಲಿ ಹಾಲಿವುಡ್ ನಟ ರಾಕ್: ಸೀಕ್ರೆಟ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ'ಕಾಂತಾರ' ಚಿತ್ರದಲ್ಲಿ ಹಾಲಿವುಡ್ ನಟ ರಾಕ್: ಸೀಕ್ರೆಟ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ

   'ಪೊನ್ನಿಯಿನ್ ಸೆಲ್ವನ್' ಫಾಸ್ಟ್ ಫಿಲ್ಲಿಂಗ್

  'ಪೊನ್ನಿಯಿನ್ ಸೆಲ್ವನ್' ಫಾಸ್ಟ್ ಫಿಲ್ಲಿಂಗ್

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಕೆಜಿ ರಸ್ತೆಯ ನರ್ತಕಿ ಥಿಯೇಟರ್‌ನಲ್ಲಿ ಕನ್ನಡ ವರ್ಷನ್‌ಗೆ ಎರಡು ಶೋಗಳು ಮಾತ್ರ ಕೊಟ್ಟಿದ್ದಾರೆ. ಇನ್ನುಳಿದಂತೆ ತಮಿಳು ವರ್ಷನ್ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗ್ತಿದೆ. ಬೆಂಗಳೂರು ಮಾತ್ರವಲ್ಲದೇ ಮೈಸೂರಿನಲ್ಲಿ 'ಪೊನ್ನಿಯಿನ್ ಸೆಲ್ವನ್' ಅಡ್ವಾನ್ಸ್‌ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಹುತೇಕ ಕಡೆಗಳಲ್ಲಿ ಶೋಗಳು ಫಾಸ್ಟ್ ಫಿಲ್ಲಿಂಗ್ ಆಗ್ತಿದ್ದು, ಚಿತ್ರಕ್ಕೆ ರಾಜ್ಯದಲ್ಲಿ ದೊಡ್ಡಮಟ್ಟದ ಓಪನಿಂಗ್ ಸಿಗುವ ನಿರೀಕ್ಷೆಯಿದೆ.

   ಹಿಂದೆ ಬಿದ್ದ 'ತೋತಾಪುರಿ' & 'ವಿಕ್ರಂವೇದ'

  ಹಿಂದೆ ಬಿದ್ದ 'ತೋತಾಪುರಿ' & 'ವಿಕ್ರಂವೇದ'

  ರಾಜ್ಯದಲ್ಲಿ ಕನ್ನಡದ 'ಕಾಂತಾರ' ಹಾಗೂ 'ತೋತಾಪುರಿ' ಜೊತೆಗೆ 'ಪೊನ್ನಿಯಿನ್ ಸೆಲ್ವನ್', 'ನಾನೇ ವರುವೇನ್', 'ವಿಕ್ರಂ ವೇದ' ಸಿನಿಮಾಗಳು ರಿಲೀಸ್ ಆಗ್ತಿದೆ. 'ಪೊನ್ನಿಯಿನ್ ಸೆಲ್ವನ್', 'ಕಾಂತಾರ' ಬಿಟ್ಟರೆ ಇನ್ನುಳಿದ 3 ಸಿನಿಮಾಗಳ ಅಡ್ವಾನ್ಸ್ ಬುಕ್ಕಿಂಗ್ ತಕ್ಕಮಟ್ಟಿಗೆ ಆಗುತ್ತಿಲ್ಲ. ಸದ್ಯದ ಟ್ರೆಂಡ್ ಪ್ರಕಾರ ಮಣಿರತ್ನಂ ನಿರ್ದೇಶನದ ಎಪಿಕ್ ಪೀರಿಯಡ್ ಸಿನಿಮಾ ಬಗ್ಗೆ ಪ್ರೇಕ್ಷಕರ ಒಲವು ಹೆಚ್ಚಾಗಿರುವುದು ಗೊತ್ತಾಗ್ತಿದೆ.

  ಕಾಂತಾರದಲ್ಲಿ ಅಪ್ಪು: ಪುನೀತ್ ರಾಜ್‌ಕುಮಾರ್ ಪೋಸ್ಟರ್‌ಗಳು ವೈರಲ್; ಆಹಾ ಎಷ್ಟು ಚೆಂದಕಾಂತಾರದಲ್ಲಿ ಅಪ್ಪು: ಪುನೀತ್ ರಾಜ್‌ಕುಮಾರ್ ಪೋಸ್ಟರ್‌ಗಳು ವೈರಲ್; ಆಹಾ ಎಷ್ಟು ಚೆಂದ

   'ಕಾಂತಾರ' ರಿವ್ಯೂಗೆ ಕಾಯ್ತಿದ್ದಾರಾ ಪ್ರೇಕ್ಷಕರು?

  'ಕಾಂತಾರ' ರಿವ್ಯೂಗೆ ಕಾಯ್ತಿದ್ದಾರಾ ಪ್ರೇಕ್ಷಕರು?

  ಒಂದು ದಿನ ಮೊದಲೇ ದೇಶಾದ್ಯಂತ 'ಕಾಂತಾರ' ಚಿತ್ರದ 75ಕ್ಕೂ ಪ್ರೀಮಿಯರ್ ಶೋಗಳು ಶೆಡ್ಯೂಲ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷರ ಪ್ರತಿಕ್ರಿಯೆ ನೋಡಿಕೊಂಡು ನಂತರ ಟಿಕೆಟ್ ಬುಕ್ ಮಾಡಲು ಕಾಯುತ್ತಿರುವಂತಿದೆ. ಇನ್ನು ಪ್ರೀಮಿಯರ್‌ ಶೋ ಟಿಕೆಟ್ ಬುಕ್ಕಿಂಗ್ ಕೂಡ 'ಕಾಂತಾರ' ಕ್ರೇಜ್‌ಗೆ ತಕ್ಕಂತೆ ಇಲ್ಲ. ಆದರೆ ಕೆಲವರು ಕರ್ನಾಟಕ ಎಂದರೆ ಬರೀ ಬೆಂಗಳೂರು ಮಾತ್ರವಲ್ಲ. ರಾಜ್ಯಾದ್ಯಂತ 'ಕಾಂತಾರ' ಸಿನಿಮಾ ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ ಎಂದು ಹೇಳ್ತಿದ್ದಾರೆ.

  English summary
  Ponniyin Selvan has very good Booking in Karnataka than Rishab Shetty Starrer Kantara.Know More.
  Wednesday, September 28, 2022, 13:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X