ಅಭಿಮಾನಿಯ ಈ ಕೆಲಸ ಕಂಡು ಸುದೀಪ್ ಖುಷಿ ಪಟ್ಟರು
Recommended Video

ಅಭಿಮಾನಿಗಳು ಸ್ಟಾರ್ ಗಳನ್ನು ಎಲ್ಲ ವಿಷಯದಲ್ಲಿಯೂ ಫಾಲೋ ಮಾಡುತ್ತಾರೆ. ಆದರೆ ನಟರು ಮಾಡುವ ಒಳ್ಳೆಯ ಕೆಲಸಗಳನ್ನು ಸಹ ಅಭಿಮಾನಿಗಳ ಫಾಲೋ ಮಾಡಿದರೆ ಆ ನಟರಿಗೆ ನಿಜವಾದ ಖುಷಿ ಸಿಗುತ್ತದೆ. ಹುಟ್ಟುಹಬ್ಬಕ್ಕೆ ಕೇಕ್ ತರುವುದು, ಕಟ್ ಔಟ್ ಗೆ ಹಾಲಿನ ಅಭಿಷೇಕ ಮಾಡುವುದು ಇವುಗಳಿಗಿಂತ ಹೆಚ್ಚಾಗಿ ಅಭಿಮಾನಿಯ ಒಳ್ಳೆಯ ಕೆಲಸ ಸ್ಟಾರ್ ಗೆ ಹೆಮ್ಮೆ ತರಿಸುತ್ತದೆ.
ಅದೇ ರೀತಿ ಇದೀಗ ತನ್ನ ಅಭಿಮಾನಿಯೊಬ್ಬರು ಮಾಡಿದ ಕೆಲಸಕ್ಕೆ ಸುದೀಪ್ ಹೆಮ್ಮೆ ಪಡುತ್ತಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸುದೀಪ್ ಆ ಮಹಿಳಾ ಅಭಿಮಾನಿಯ ಕೆಲಸವನ್ನು ಹೊಗಳಿದ್ದಾರೆ.
ರಾಜಶೇಖರ್ ಎಂಬ ಒಬ್ಬ ಅಂಧರು ಪರೀಕ್ಷೆ ಬರೆಯಬೇಕಿತ್ತು. ಆಗ ಸುದೀಪ್ ಅಭಿಮಾನಿಯಾದ ಪೂಜಾ ಆ ದೃಷ್ಟಿ ಹೀನಾರಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದಾರೆ. ಕಿಚ್ಚನ ತಂಡವಾದ 'ಹೆಬ್ಬುಲಿ ಹುಡ್ಗೀರು' ಟೀಂ ಮೊದಲನೆ ವಾರ್ಷಿಕೋತ್ಸವ ಪ್ರಯುಕ್ತ ಪೂಜಾ ಈ ಒಳ್ಳೆಯ ಕೆಲಸ ಮಾಡಿದ್ದಾರೆ.

ಪೂಜಾ ಮಾಡಿರುವ ಸಹಾಯವನ್ನು ಸುದೀಪ್ ಇಷ್ಟಪಟ್ಟಿದ್ದಾರೆ. ಸುದೀಪ್ ಅವರ ಉಳಿದ ಅನೇಕ ಅಭಿಮಾನಿಗಳಿಗೂ ಅವರು ಸ್ಪೂರ್ತಿ ನೀಡಿದ್ದಾರೆ. ಈ ಹಿಂದೆ ಹುಟ್ಟುಹಬ್ಬದ ಸಂದರ್ಭದಲ್ಲಿ ಸುದೀಪ್ ಇತರರಿಗೆ ಸಹಾಯ ಮಾಡಿ ಎಂಬ ಕರೆ ನೀಡಿದ್ದು, ಅದೇ ರೀತಿ ಪೂಜಾ ಮಾಡಿದ್ದಾರೆ.


Click it and Unblock the Notifications











