»   » 'ರಾವಣಿ' ಸಿನಿಮಾ ನಿಂತಿದ್ಯಾಕೆ.? ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ ಗಾಂಧಿ.!

'ರಾವಣಿ' ಸಿನಿಮಾ ನಿಂತಿದ್ಯಾಕೆ.? ಕೊನೆಗೂ ಸತ್ಯ ಬಾಯ್ಬಿಟ್ಟ ಪೂಜಾ ಗಾಂಧಿ.!

Posted By: Naveen
Subscribe to Filmibeat Kannada

ಮಳೆ ಹುಡುಗಿ ಪೂಜಾ ಗಾಂಧಿ ಅವರ 'ರಾವಣಿ' ಸಿನಿಮಾ ಶುರುವಾಗಿದ್ದು ವರ್ಷದ ಹಿಂದೆ. 'ರಾವಣಿ' ಸಿನಿಮಾ ಅನೌನ್ಸ್ ಆಗಿದ್ದು ಬಿಟ್ಟರೆ, ಸಿನಿಮಾ ತಂಡದಿಂದ ಚಿತ್ರದ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಈಗ ವರ್ಷ ಕಳೆದರೂ, 'ರಾವಣಿ' ಸದ್ದು-ಸುದ್ದಿ ಮಾಡುತ್ತಿಲ್ಲ ಯಾಕೆ ಎಂಬ ಪ್ರಶ್ನೆ ಹಲವರಲ್ಲಿ ಉದ್ಭವವಾಗಿತ್ತು. ಇದೀಗ ಈ ಪ್ರಶ್ನೆಗೆ ಸ್ವತಃ ಪೂಜಾ ಗಾಂಧಿ ಉತ್ತರ ಕೊಟ್ಟಿದ್ದಾರೆ.

'ರಾವಣಿ' ಸಿನಿಮಾದ ನಾಯಕಿ ಪೂಜಾ ಗಾಂಧಿ ಮತ್ತು ಸಿನಿಮಾದ ನಿರ್ದೇಶಕ ಚಂದ್ರಚೂಡ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ಮಧ್ಯೆ ಗಲಾಟೆ ಆಗಿರುವುದರಿಂದ 'ರಾವಣಿ' ಚಿತ್ರ ನಿಂತು ಹೋಗಿದೆ ಎಂಬ ಗುಸುಗುಸು ಗಾಂಧಿನಗರದಲ್ಲಿ ಕೇಳಿಬಂದಿತ್ತು.[ಪೂಜಾ ಗಾಂಧಿ ಬಂಡವಾಳದಲ್ಲಿ ಸೆಟ್ಟೇರಲಿದೆ ಮೂರು ಹೊಸ ಸಿನಿಮಾಗಳು!]

ಈಗ ಈ ಎಲ್ಲಾ ಅಂತೆ-ಕಂತೆಗಳಿಗೆ ಪೂಜಾ ಗಾಂಧಿ ಬ್ರೇಕ್ ಹಾಕಿದ್ದಾರೆ. 'ರಾವಣಿ' ಚಿತ್ರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿ...

'ರಾವಣಿ' ಸಿನಿಮಾ ನಿಂತಿದ್ಯಾಕೆ.?

''ರಾವಣಿ' ಸಿನಿಮಾ ನಿಂತು ಹೋಗಲು ಅನೇಕ ಕಾರಣಗಳಿವೆ. ಆ ಸಿನಿಮಾ ಯಾಕೋ ಸರಿಯಾಗಿ ವರ್ಕ್ ಔಟ್ ಆಗುತ್ತಿರಲಿಲ್ಲ. 'ರಾವಣಿ' ಸಿನಿಮಾ ಸದ್ಯ ನಿಂತ್ತಿದೆ, ಅದಕ್ಕೆ ಕಾರಣ ನಾನೇ'' ಎನ್ನುತ್ತಾರೆ ನಟಿ ಪೂಜಾ ಗಾಂಧಿ.

ಪೂಜಾ ಗಾಂಧಿ ಬಿಜಿ ಶೆಡ್ಯೂಲ್ ಕಾರಣ

''ರಾವಣಿ' ಸಿನಿಮಾಗೆ ಎಲ್ಲ ತಯಾರಿಗಳು ನಡೆದಿತ್ತು. ಅದ್ರೆ, ಸಿನಿಮಾ ಪ್ರಾರಂಭವಾದ ಸಮಯದಲ್ಲೇ ನಾನು 'ಬಿಗ್ ಬಾಸ್'ಗೆ ಹೋದೆ. ಆಮೇಲೆ ಬೇರೆ ಬೇರೆ ಕೆಲಸಗಳಿಂದಾಗಿ ಸಿನಿಮಾ ಕೆಲಸಗಳನ್ನ ಮುಗಿಸುವುದಕ್ಕೆ ಆಗಲಿಲ್ಲ'' -ಪೂಜಾ ಗಾಂಧಿ

ಚಂದ್ರಚೂಡ್-ನಾನು ಸ್ನೇಹಿತರು

''ರಾವಣಿ' ಸಿನಿಮಾದ ನಿರ್ದೇಶಕ ಚಂದ್ರಚೂಡ್ ಮತ್ತು ನಾನು ಈಗ ಕೂಡ ಸ್ನೇಹಿತರು. ನನ್ನ ಮುಂದಿನ ಸಿನಿಮಾಗಳಲ್ಲಿ ಅವರು ಕೆಲಸ ಮಾಡಲಿದ್ದಾರೆ. ನನ್ನ ಮತ್ತು ಅವರ ನಡುವೆ ಯಾವುದೇ ಜಗಳವಾಗಿಲ್ಲ'' -ಪೂಜಾ ಗಾಂಧಿ

ಯಾರಿಂದಲೂ ತೊಂದರೆ ಇಲ್ಲ

''ಸಿನಿಮಾ ಸದ್ಯ ನಿಂತಿರುವುದು ನನ್ನ ಬಿಜಿ ಶೆಡ್ಯೂಲ್ ನಿಂದ ಅಷ್ಟೇ. ಬೇರೆ ಯಾರಿಂದಲೂ ಚಿತ್ರಕ್ಕೆ ಅಡ್ಡಿ ಆಗಿಲ್ಲ. ಸಿನಿಮಾ ನಿಂತಿರುವುದಕ್ಕೆ ಯಾವುದೇ ಬೇರೆ ಕಾರಣಗಳು ಇಲ್ಲ'' - ಪೂಜಾ ಗಾಂಧಿ

ಹಾಗಾದ್ರೆ, ಮತ್ತೆ ಶುರು ಆಗುತ್ತಾ..?

'ರಾವಣಿ' ಸಿನಿಮಾ ನಿಂತಿರುವುದಕ್ಕೆ ನಾನೇ ಕಾರಣ ಅಂತ ಹೇಳಿಕೊಂಡ ಪೂಜ ಗಾಂಧಿ ಮುಂದೆ ಆ ಸಿನಿಮಾವನ್ನ ಮುಗಿಸುತ್ತಾರಾ, ಇಲ್ವಾ.. ಎನ್ನುವ ಬಗ್ಗೆ ಮಾತ್ರ ಬಾಯಿ ಬಿಡಲಿಲ್ಲ.['ದಂಡುಪಾಳ್ಯ' ಗ್ಯಾಂಗ್ ನಿಂದ ಬಂತು ಭಯಾನಕ ಸುದ್ದಿ]

English summary
Kannada Actress Pooja Gandhi breaks her silence about Kannada Movie 'Raavani'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada