'ದಂಡುಪಾಳ್ಯ' ಜಗಳ: ಸಂಜನಾಗೆ ಪೂಜಾ ಗಾಂಧಿ ತಿರುಗೇಟು.!
ನಟಿ ಸಂಜನಾ ಗಲ್ರಾನಿ 'ದಂಡುಪಾಳ್ಯ-2' ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಅವರ ಪೋಸ್ಟರ್ ಗಳು ಕೂಡ ರಿಲೀಸ್ ಆಗಿ ಕುತೂಹಲ ಹೆಚ್ಚಿಸಿತ್ತು. ಇದೀಗ, ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಹೀಗಿರುವಾಗ, ಸಂಜನಾ ಗಲ್ರಾನಿ 'ದಂಡುಪಾಳ್ಯ' ಚಿತ್ರತಂಡದ ಮೇಲೆ ಮುನಿಸಿಕೊಂಡಿದ್ದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
ಚಿತ್ರದ ಪ್ರಮೋಷನ್ ಗಳಲ್ಲಿ ಕಾಣಿಸಿಕೊಳ್ಳದ ಸಂಜನಾ ''ನನ್ನನ್ನ ಕಡೆಗಣಿಸಲಾಗಿದೆ, ಪೂಜಾ ಗಾಂಧಿ ಅವರಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ, ಪೋಸ್ಟರ್, ಟ್ರೈಲರ್ ಗಳಲ್ಲೂ ನನ್ನನ್ನ ಬಳಸಿಕೊಂಡಿಲ್ಲ, ಇದಕ್ಕೆ ಪೂಜಾ ಗಾಂಧಿ ಅವರೇ ಕಾರಣ ಎಂದು ಪರೋಕ್ಷವಾಗಿ ಆರೋಪ ಮಾಡಿದ್ದರು.
ಸಂಜನಾ ಅವರ ಈ ಆರೋಪಗಳಿಗೆ ಪೂಜಾ ಗಾಂಧಿ ಅವರು ಕೂಡ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. ಮುಂದೆ ಓದಿ.....

ಸಂಜನಾಗೆ ತಿರುಗೇಟು ಕೊಟ್ಟ ಪೂಜಾ
ಸಂಜನಾ ಗಲ್ರಾನಿ ಅವರ ಆರೋಪಗಳಿಗೆ ನಟಿ ಪೂಜಾ ಗಾಂಧಿ ತಿರುಗೇಟು ಕೊಟ್ಟಿದ್ದಾರೆ. ''ನಾನು ಏನು, ನನ್ನ ಕೆಲಸವೇನುವೆಂಬುದು ನನಗೆ ಗೊತ್ತಿದೆ'' ಎಂದು ಹೇಳುವ ಮೂಲಕ ಫೇಸ್ ಬುಕ್ ಪುಟಗಟ್ಟಲೇ ಬರೆದುಕೊಂಡಿದ್ದಾರೆ.

ಬೇರೆಯವರನ್ನು ತುಳಿದು ಬೆಳೆಯುವ ಉದ್ದೇಶ ನನಗಿಲ್ಲ
''ಬೇರೆಯವರನ್ನು ತುಳಿದು ಬೆಳೆಯುವ ಪರಿಸ್ಥಿತಿ ಅಥವಾ ಉದ್ದೇಶ ನನಗಿಲ್ಲ. ನನಗೆ ನನ್ನದೇ ಆದ ಜವಾಬ್ದಾರಿ, ಹೊಣೆಗಳಿವೆ. ಇದು ನನ್ನ ಚಿತ್ರ, ನನ್ನ ಸಿನಿಮಾವನ್ನ ನಾನು ಪ್ರೀತಿಸುತ್ತೇನೆ. ನಿರ್ದೇಶಕ, ನಿರ್ಮಾಪಕರ ಸೂಚನೆಯಂತೆ ನಾನು ಕಾರ್ಯನಿರ್ವಹಿಸಿದ್ದೇನೆ''- ಪೂಜಾ ಗಾಂಧಿ, ನಟಿ

ನನ್ನ ಸಿನಿಮಾಗಳಿಗೆ ಟೈಂ ಸಿಕ್ತಿಲ್ಲ, ಇದು ಬೇರೆ
''ಒಟ್ಟಿಗೇ ಮೂರು ಸಿನಿಮಾಗಳನ್ನ ನಾನು ನಿರ್ಮಿಸುತ್ತಿದ್ದೇನೆ. ಆ ಕೆಲಸಕ್ಕೇ ನನಗೆ ಟೈಂ ಸಿಗ್ತಾ ಇಲ್ಲ. ಹೀಗಿರುವಾಗ ಚಿತ್ರದ ನಿರ್ದೇಶಕರು, ನಿರ್ಮಾಪಕರಿಗೆ ಒತ್ತಡ ಹೇರುವಷ್ಟು ಪುರುಸೊತ್ತೂ ನನಗಿಲ್ಲ. ನನ್ನ ಚಿತ್ರಗಳ ಜೊತೆ 'ದಂಡುಪಾಳ್ಯ-3' ಚಿತ್ರವನ್ನ ಮಾಡಬೇಕಿದೆ''- ಪೂಜಾ ಗಾಂಧಿ

'ಆಕೆ’ಗೆ ಅಸುರಕ್ಷತೆ, ಅಭದ್ರತೆ ಕಾಡುತ್ತಿದೆ
''ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ‘ಆಕೆ'ಗೆ ಅಸುರಕ್ಷತೆ, ಅಭದ್ರತೆ ಕಾಡುತ್ತಿದೆ. ಅದಕ್ಕೇ ಹೀಗೆ ಹೇಳಿದ್ದಾರೆ. ನಾನು ಏನೇ ಹೇಳಿದರೂ, ಆಕೆಗೆ ಇದೆಲ್ಲ ಅರ್ಥವಾಗುವುದಿಲ್ಲ'' ಎಂದು ಪೂಜಾ ಗಾಂಧಿ ಉತ್ತರ ಕೊಟ್ಟಿದ್ದಾರೆ.

ನಿಮ್ಮ ಗೌರವ, ನೀವೇ ಹಾಳು ಮಾಡಿಕೊಳ್ಳಬೇಡಿ
''ದಂಡುಪಾಳ್ಯ-2'' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದೇನೆ. ನಾನು ಒಳ್ಳೆಯ ನಟಿ ಎಂದು ನನಗೂ ಗೊತ್ತಿದೆ. ಈ ರೀತಿಯಾದ ಹೇಳಿಕೆ ನೀಡುವ ಮೂಲಕ ನಿಮ್ಮ ಗೌರವವನ್ನ ನೀವೇ ಹಾಳುಮಾಡಿಕೊಳ್ಳಬೇಡಿ'' ಪೂಜಾ ಗಾಂಧಿ, ನಟಿ

ಸಂಜನಾ ಕೋಪಕ್ಕೆ ಕಾರಣವಾಗಿರುವುದು ಇದೇ.!
'ದಂಡುಪಾಳ್ಯ-2' ಚಿತ್ರದ ಪೋಸ್ಟರ್ ಹಾಗೂ ಟ್ರೈಲರ್ ಗಳಲ್ಲಿ ನಟಿ ಸಂಜನಾ ರವರನ್ನ ನಿರ್ಲಕ್ಷ್ಯ ಮಾಡಲಾಗಿದ್ಯಂತೆ. ಇಡೀ ಚಿತ್ರತಂಡದ ಫೋಕಸ್ ನಟಿ ಪೂಜಾ ಗಾಂಧಿ ಮೇಲೆ ಹೆಚ್ಚಾಗಿದ್ಯಂತೆ. ಇದರಿಂದ ಬೇಸರಗೊಂಡಿರುವ ನಟಿ ಸಂಜನಾ, 'ದಂಡುಪಾಳ್ಯ-2' ಚಿತ್ರದ ಪ್ರಮೋಷನ್ ಕಾರ್ಯಗಳಿಗೆ ಭಾಗಿಯಾಗುತ್ತಿಲ್ಲ ಎನ್ನಲಾಗುತ್ತಿದೆ.

ಹೇಳಿದ್ದು ಒಂದು, ಮಾಡಿರುವುದು ಇನ್ನೊಂದಂತೆ!
ಅಷ್ಟಕ್ಕೂ, 'ಸಾವಿತ್ರಿ' ಪಾತ್ರವನ್ನ ಮೊದಲು ಲಕ್ಷ್ಮಿ ಮಂಚು ಅವರಿಗೆ ಆಫರ್ ಮಾಡಲಾಗಿತ್ತಂತೆ. ಅವರು ರಿಜೆಕ್ಟ್ ಮಾಡಿದ ನಂತರ ಈ ಅವಕಾಶ ಸಂಜನಾ ಪಾಲಾಯ್ತಂತೆ. ಸಿನಿಮಾದಲ್ಲಿ ಪೂಜಾ ಗಾಂಧಿ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದ್ಯೋ, ಸಂಜನಾ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಎಂದು ನಿರ್ದೇಶಕರು ಪ್ರಾಮಿಸ್ ಮಾಡಿದ್ರಂತೆ. ಆದ್ರೀಗ, ಟ್ರೈಲರ್ ನೋಡಿದ್ಮೇಲೆ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ನೀಡಲಾಗಿಲ್ಲ ಎಂದು ಸಂಜನಾ ಮುನಿಸಿಕೊಂಡಿದ್ದಾರೆ.


Click it and Unblock the Notifications