Don't Miss!
- News Lok Sabha Election 2024: ಚಾಮರಾಜನಗರ ಕ್ಷೇತ್ರದಲ್ಲಿರುವ ಮತದಾರರ ವಿವರ-ಅಂಕಿಅಂಶಗಳ ಮಾಹಿತಿ
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಂಡುಪಾಳ್ಯ-2' ಚಿತ್ರದಲ್ಲಿದೆ ಸಲಿಂಗ ಚುಂಬನ: ನಟಿಯ ತುಟಿಗೆ ತುಟಿ ಒತ್ತಿದ ಪೂಜಾ ಗಾಂಧಿ!
ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಮಳೆ ಹುಡುಗಿ ಪೂಜಾ ಗಾಂಧಿ ಈಗ ಬೇಡದ ವಿಷ್ಯಕ್ಕೆ ಸದ್ದು ಮಾಡಿದ್ದಾರೆ. 'ದಂಡುಪಾಳ್ಯ-2' ಚಿತ್ರದಲ್ಲಿ ನಟಿ ಪೂಜಾ ಗಾಂಧಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಚಿತ್ರದಲ್ಲಿರುವ ಸಲಿಂಗ 'ಲಿಪ್ ಲಾಕ್' ದೃಶ್ಯದಿಂದಾಗಿ ಗಾಂಧಿನಗರದಲ್ಲೀಗ ಪೂಜಾ ಗಾಂಧಿ ಬಗ್ಗೆ ಬಿಸಿ ಬಿಸಿ ಚರ್ಚೆಗೆ ನಡೆಯುತ್ತಿದೆ. [ಪೂಜಾಗಾಂಧಿಗಿರುವಷ್ಟು ಎದೆಗಾರಿಕೆ ಇನ್ಯಾರಿಗಿದೆ?]
'ದಂಡುಪಾಳ್ಯ' ಚಿತ್ರದಲ್ಲಿ ಬೆತ್ತಲೆ ಬೆನ್ನು ಪ್ರದರ್ಶಿಸಿ, ಮಡಿವಂತರ ಕಣ್ಣು ಕೆಂಪಗೆ ಮಾಡಿದ್ದ ನಟಿ ಪೂಜಾ ಗಾಂಧಿ ಇದೀಗ ಮತ್ತೋರ್ವ ನಟಿಯ ತುಟಿಗೆ ಚುಂಬಿಸಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಮುಂದೆ ಓದಿ...
'ದಂಡುಪಾಳ್ಯ-2 ಚಿತ್ರತಂಡದಿಂದ ಬಿಡುಗಡೆ ಆಗಿರುವ ಫೋಟೋ ಇದು...
ಇಲ್ಲಿಯವರೆಗೂ ಹಿಂಸೆ, ಕ್ರೌರ್ಯ ತುಂಬಿದ್ದ 'ದಂಡುಪಾಳ್ಯ-2' ಪೋಸ್ಟರ್ ಗಳನ್ನ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಇಬ್ಬರು ನಟಿಯರು ತುಟಿಗೆ ತುಟಿ ಒತ್ತಿರುವ ಫೋಟೋವೊಂದನ್ನ ಲೀಕ್ ಮಾಡಿದೆ. [ಶಯನಗೃಹದಲ್ಲಿ ಪೂಜಾಗಾಂಧಿ ಹಾಟ್ ದೃಶ್ಯಗಳು]
ಮಹಿಳಾ ಖೈದಿಗಳ ಚುಂಬನ
ಜೈಲಿನಲ್ಲಿ ಖೈದಿ ಪೂಜಾ ಗಾಂಧಿಗೆ ಮತ್ತೋರ್ವ ಖೈದಿ ಕಿಸ್ ಮಾಡುವ ಸನ್ನಿವೇಶ 'ದಂಡುಪಾಳ್ಯ-2' ಚಿತ್ರದಲ್ಲಿದೆ. ಈ ಸನ್ನಿವೇಶದ ಚಿತ್ರೀಕರಣ ಇತ್ತೀಚೆಗಷ್ಟೇ ನಡೆದಿದ್ದು, ಅದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.['ದಂಡುಪಾಳ್ಯ' ಗ್ಯಾಂಗ್ ನಿಂದ ಬಂತು ಭಯಾನಕ ಸುದ್ದಿ]
ಮತ್ತೊಂದು ಗಿಮಿಕ್.?
'ದಂಡುಪಾಳ್ಯ' ಸಿನಿಮಾದ ಶೂಟಿಂಗ್ ಟೈಮ್ ನಲ್ಲೂ, ಪೂಜಾ ಗಾಂಧಿ ತಮ್ಮ ಬೆತ್ತಲೆ ಬೆನ್ನು ಪ್ರದರ್ಶಿಸಿ ಸುದ್ದಿ ಮಾಡಿದ್ದರು. ಇದೀಗ ಚಿತ್ರತಂಡ ಮತ್ತೊಂದು ಗಿಮಿಕ್ ಮಾಡುತ್ತಿದೆ ಎಂಬುದು ಹಲವರ ಅಭಿಪ್ರಾಯ. [ಬೆತ್ತಲೆ ಬೆನ್ನು ತೋರಿದ 'ಅಭಿನೇತ್ರಿ' ಪೂಜಾಗಾಂಧಿ]
ಪೂಜಾ ಗಾಂಧಿ ಏನು ಹೇಳುತ್ತಾರೆ.?
''ಜೈಲಿನಲ್ಲಿ ಮಹಿಳಾ ಖೈದಿಗಳಿಬ್ಬರು ಕಿಸ್ ಮಾಡುವ ದೃಶ್ಯ ಅದು. ಈ ಬಗ್ಗೆ ನಿರ್ದೇಶಕರು ಮೊದಲೇ ನನಗೆ ತಿಳಿಸಿದ್ದರಿಂದ ನನಗೆ ಅಭ್ಯಂತರ ಇರಲಿಲ್ಲ. ಹುಡುಗಿ-ಹುಡುಗಿ ಕಿಸ್ ಮಾಡಿದ್ರೆ, ತಪ್ಪೇನು.?'' ಎಂದು ಪ್ರಶ್ನಿಸುತ್ತಾರೆ ನಟಿ ಪೂಜಾ ಗಾಂಧಿ.
ಅನಿವಾರ್ಯ ಇತ್ತು.!
''ಇದು ಗಿಮಿಕ್ ಅಲ್ಲ. ಚಿತ್ರದಲ್ಲಿ ಈ ಸನ್ನಿವೇಶ ಕಥೆಗೆ ಪೂರಕವಾಗಿದೆ'' ಎನ್ನುತ್ತಾರೆ ನಟಿ ಪೂಜಾ ಗಾಂಧಿ.
ಚಿತ್ರಕಥೆಗೆ ಟ್ವಿಸ್ಟ್
''ಜೈಲು ಸನ್ನಿವೇಶದಲ್ಲಿ ಬರುವ ಈ ದೃಶ್ಯ ಚಿತ್ರಕಥೆಗೆ ದೊಡ್ಡ ತಿರುವು ನೀಡಲಿದೆ'' ಅಂತಾರೆ ನಿರ್ದೇಶಕ ಶ್ರೀನಿವಾಸ್ ರಾಜು. ಒಟ್ನಲ್ಲಿ ಒಂದಲ್ಲೊಂದು ವಿವಾದಗಳಿಂದ 'ದಂಡುಪಾಳ್ಯ-2' ಸತತ ಸುದ್ದಿಯಲ್ಲಿಯೇ ಇದೆ.