For Quick Alerts
  ALLOW NOTIFICATIONS  
  For Daily Alerts

  'ಅಭಿನೇತ್ರಿ' ಪೂಜಾಗಾಂಧಿ ಮೇಲೆ ಕಥೆ ಕದ್ದ ಆರೋಪ

  By Rajendra
  |

  ಪೂಜಾಗಾಂಧಿ ಅಭಿನಯದ 'ಅಭಿನೇತ್ರಿ' ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ರಿಲೀಸ್ ಹಂತದಲ್ಲಿರುವ ಈ ಚಿತ್ರದ ಬಿಡುಗಡೆಗೆ ಬೆಂಗಳೂರು 10ನೇ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಭಿನೇತ್ರಿ ಚಿತ್ರ ಕಥೆ ಕದ್ದ ಆರೋಪ ಎದುರಿಸುತ್ತಿದೆ.

  ತಮ್ಮ ಕೃತಿ 'ಅಭಿನೇತ್ರಿ ಅಂತರಂಗ'ದಲ್ಲಿನ ಕಥೆಯನ್ನು ಬಳಸಿಕೊಂಡು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ ಎಂದು ಲೇಖಕಿ ಭಾಗ್ಯ ಕೃಷ್ಣಮೂರ್ತಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಅಭಿನೇತ್ರಿ ಚಿತ್ರಕ್ಕೆ ತಡೆಯಾಜ್ಞೆ ನೀಡಿದೆ. [ಅರೆಬರೆ ಬೆತ್ತಲಾದ 'ಅಭಿನೇತ್ರಿ' ಪೂಜಾಗಾಂಧಿ]

  ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂಜಾಗಾಂಧಿ, "ಚಿತ್ರದ ಕಥೆಗೂ ಅವರ ಕೃತಿಗೂ ಸಾಮ್ಯತೆ ಇಲ್ಲ. ಅವರು ಕೋರ್ಟ್ ಮೆಟ್ಟಿಲೇರಿದ ಮೇಲೆ ನಮಗೆ ಆ ಕೃತಿಯ ಬಗ್ಗೆ ಗೊತ್ತಾಗಿದ್ದು. ತಾವು ಹೈಕೋರ್ಟ್ ಗೆ ಹೋಗುತ್ತೇವೆ" ಎಂದಿದ್ದಾರೆ ಪೂಜಾಗಾಂಧಿ.

  ಆರಂಭದಿಂದಲೂ ವಿಭಿನ್ನ ಪೋಸ್ಟರ್ ಗಳು, ಸ್ಟಿಲ್ಸ್ ಮೂಲಕ ಸುದ್ದಿ ಮಾಡುತ್ತಿರುವ ಚಿತ್ರ ಅಭಿನೇತ್ರಿ. ಪೂಜಾಗಾಂಧಿ ಅವರು ಮಿನುಗು ತಾರೆ ಕಲ್ಪನಾ ಅವರ ಗೆಟಪ್ ನಲ್ಲಿರುವ ಕಾರಣ ಇದು ಕಲ್ಪನಾ ಅವರದ್ದೇ ಜೀವನ ಕಥೆ ಎಂದು ಹೇಳಲಾಗುತ್ತಿದೆ.

  ಆದರೆ ಪೂಜಾಗಾಂಧಿ ಮಾತ್ರ ಇದು ಮಿನುಗು ತಾರೆ ಕಲ್ಪನಾ ಅಥವಾ ಮಂಜುಳಾ ಅವರ ಜೀವನ ಕಥೆಯಲ್ಲಾ ಎಂದಿದ್ದಾರೆ. ಪೂಜಾ ಇಲ್ಲಿ 70-80ರ ದಶಕದ ನಾಯಕಿಯರನ್ನ ಪ್ರತಿನಿಧಿಸೋ ಪಾತ್ರ ಮಾಡ್ತಿದ್ದಾರೆ. ಇಲ್ಲಿ ಪೂಜಾಗಾಂಧಿ 20 ಕ್ಕೂ ಹೆಚ್ಚು ಗೆಟಪ್ ಗಳಲ್ಲಿ ಮಿಂಚ್ತಾರೆ. ಸತೀಶ್ ಪ್ರಧಾನ್ ನಿರ್ದೇಶಿಸುತ್ತಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಪೂಜಾಗಾಂಧಿ ಜೊತೆ ಮಕರಂದ್ ದೇಶ್ ಪಾಂಡೆ, ರವಿಶಂಕರ್ ಇದ್ದಾರೆ. (ಏಜೆನ್ಸೀಸ್)

  English summary
  The 10th City Civil Court stayed the screening of Kannada film Abhinetri, starring Pooja Gandhi and directed by Satish Pradhan, over a petition filed by an author Bhagya Krishnamurthy. The film was scheduled to release this month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X