''ನಾನು ಯಾರ ಜೊತೆಯೂ ರೂಮ್ ಬುಕ್ ಮಾಡಿಲ್ಲ'' : ಪೂಜಾಗಾಂಧಿ ಸ್ಪಷ್ಟನೆ

ಸ್ಯಾಂಡಲ್ ವುಡ್ ನಟಿ, 'ಮುಂಗಾರು ಮಳೆ' ಪೂಜಾ ಗಾಂಧಿ ವಿರುದ್ಧ ಇಂದು ಗಂಭೀರ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಬಿಲ್ ಪಾವತಿ ಮಾಡದೆ ಯಾಮಾರಿಸಿದ್ದರು ಎಂದು ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಒಂದು ವರ್ಷ ಹೋಟೆಲ್ ಬುಕ್ ಮಾಡಿದ್ದ ಪೂಜಾಗಾಂಧಿ 26 ಲಕ್ಷ ಬಿಲ್ ಮಾಡಿದ್ದರು. ಅದರಲ್ಲಿ 22 ಲಕ್ಷವನ್ನು ಪಾವತಿ ಮಾಡಿ ಇನ್ನೂ 4 ಲಕ್ಷ ಹಣವನ್ನು ಹೋಟೆಲ್ ಗೆ ಪಾವತಿ ಮಾಡಿರಲಿಲ್ಲ. ಎಂದು ದೂರಿನಲ್ಲಿ ಹೇಳಲಾಗಿತ್ತು.

ಮತ್ತೊಂದು ಕಡೆ ಪೂಜಾಗಾಂಧಿ ಹೆಸರು ಬಿಜೆಪಿ ಪಕ್ಷದ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆಗೆ ಥಳುಕು ಹಾಕಿಕೊಂಡಿದೆ. ಅನಿಲ್ ಮೆಣಸಿನಕಾಯಿ ಹಾಗೂ ಪೂಜಾಗಾಂಧಿ ಇಬ್ಬರ ಹೆಸರಿನಲ್ಲಿ ರೂಮ್ ಬುಕ್ ಆಗಿದ್ದು, ಏನಿದು ಪ್ರಕರಣ ಎನ್ನುವ ಅನುಮಾನ ಮೂಡಿಸಿತ್ತು.

ಅಂದಹಾಗೆ, ಇವೆಲ್ಲ ಬೆಳವಣಿಗೆಗಳ ನಂತರ ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಪೂಜಾ ಗಾಂಧಿ ಉತ್ತರ ನೀಡಿದ್ದಾರೆ. ಮುಂದೆ ಓದಿ...

ಸಿನಿಮಾದ ಪ್ರೊಡಕ್ಷನ್ಸ್ ಗಾಗಿ ರೂಮ್ ಬುಕ್

ಸಿನಿಮಾದ ಪ್ರೊಡಕ್ಷನ್ಸ್ ಗಾಗಿ ರೂಮ್ ಬುಕ್

ಅಶೋಕ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿರುವುದನ್ನು ಒಪ್ಪಿಕೊಂಡಿರುವ ಪೂಜಾ ಗಾಂಧಿ ತಮ್ಮ ಬ್ಯಾನರ್ ಸಿನಿಮಾದ ಪ್ರೊಡಕ್ಷನ್ಸ್ ನಡೆಯುವ ಸಮಯದಲ್ಲಿ ರೂಮ್ ಬುಕ್ ಮಾಡಿದ್ದರಂತೆ. ಹೈದರಾಬಾದ್, ಬಾಂಬೆ, ಚೆನ್ನೈನ ಕಲಾವಿದರು ಹಾಗೂ ತಂತ್ರಜ್ಞರಿಗಾಗಿ ರೂಮ್ ಅಗತ್ಯ ಇತ್ತು ಆ ಕಾರಣಕ್ಕೆ ರೂಮ್ ಬುಕ್ ಮಾಡಿದ್ದರಂತೆ.

ಹಣ ಪಾವತಿ ಮಾಡಿದ್ದೇನೆ

ಹಣ ಪಾವತಿ ಮಾಡಿದ್ದೇನೆ

1 ವರ್ಷ ಸಿನಿಮಾದ ಕೆಲಸಕ್ಕಾಗಿ ರೂಮ್ ಬುಕ್ ಮಾಡಿದ್ದು, ಅದರ ಹಣವನ್ನು ಈಗಾಗಲೇ ಪಾವತಿ ಮಾಡಿದ್ದೇನೆ ಎನ್ನುತ್ತಿದ್ದಾರೆ ಪೂಜಾ ಗಾಂಧಿ. ''ಅಶೋಕ ಹೋಟೆಲ್ ಗೆ ಬಾಕಿ ಇದ್ದ ಬಿಲ್ ಹಣವನ್ನು ವರ್ಷದ ಹಿಂದೆಯೇ ನೀಡಿದ್ದೇನೆ ಆದರೂ ನನ್ನ ಬಗ್ಗೆ ದೂರು ಯಾಕೆ ನೀಡಿದ್ದಾರೆ ಗೊತ್ತಿಲ್ಲ.'' ಎಂದರು ಪೂಜಾ ಗಾಂಧಿ.

ಅನಿಲ್ ನನ್ನ ಸಹೋದರ ಇದ್ದ ಹಾಗೆ

ಅನಿಲ್ ನನ್ನ ಸಹೋದರ ಇದ್ದ ಹಾಗೆ

ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆಗೆ ತಮ್ಮ ಹೆಸರು ಇರುವ ಬಗ್ಗೆ ಪೂಜಾಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ''ನಾನು ಚುನಾವಣಾಗೆ ಸ್ಪರ್ಧೆ ಮಾಡಿದ್ದ ಸಮಯದಲ್ಲಿ ಅನಿಲ್ ಮೆಣಸಿನಕಾಯಿ ಅವರು ಪರಿಚಯ ಇದ್ದರು. ಅದರ ನನ್ನ ಸಹೋದರ ಇದ್ದ ಹಾಗೆ. ಅವರ ಜೊತೆಗೆ ರೂಮ್ ಬುಕ್' ಎನ್ನುವ ಸುದ್ದಿ ಸುಳ್ಳು'' ಎಂದು ಸ್ಪಷ್ಟನೆ ನೀಡಿದರು ಪೂಜಾ.

ಹಾಗಾದರೆ ದೂರು ಕೊಟ್ಟಿದ್ದು ಯಾಕೆ?

ಹಾಗಾದರೆ ದೂರು ಕೊಟ್ಟಿದ್ದು ಯಾಕೆ?

ನಟಿ ಪೂಜಾ ಗಾಂಧಿ ಪ್ರಕಾರ ಅವರು ಎಲ್ಲ ಹಣವನ್ನು ಪಾವತಿ ಮಾಡಿದ್ದಾರೆ. ಅಲ್ಲದೆ ಬೇರೆಯವರ ಜೊತೆಗೆ ರೂಮ್ ಬುಕ್ ಮಾಡಿಲ್ಲ. ಹೀಗಿರುವಾಗ, ಪೂಜಾ ಗಾಂಧಿ ವಿರುದ್ಧ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಮೂಡುತ್ತದೆ. ಇತ್ತ ಪೂಜಾ ಹೇಳಿಕೆ ಕೂಡ ಎಷ್ಟು ಸತ್ಯ ಎನ್ನುವುದು ತಿಳಿದಿಲ್ಲ.

More from Filmibeat

English summary
Highground station police filed a complaint against kannada actress Pooja Gandhi for not paying bill of Ashoka hotel. Now Pooja Gandhi gave her reaction about bill issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X