twitter
    For Quick Alerts
    ALLOW NOTIFICATIONS  
    For Daily Alerts

    ನಾನಿನ್ನು ಜೆಡಿಎಸ್ ನಲ್ಲೇ ಇದ್ದೀನಿ, ಮಂಡ್ಯ ಫಲಿತಾಂಶದ ಬಗ್ಗೆ ಮಾತನಾಡಲ್ಲ - ಪೂಜಾಗಾಂಧಿ

    |

    ಮಂಡ್ಯ ಚುನಾವಣಾ ಫಲಿತಾಂಶ ಭಾರಿ ಕುತೂಹಲ ಮೂಡಿಸಿದೆ. ಕೊನೆ ಕ್ಷಣದ ವರೆಗೆ ಏನಾಗುತ್ತದೆಯೋ ಎನ್ನುವ ನಿರೀಕ್ಷೆ ಎಲ್ಲರಿಗೆ ಇದೆ.

    ನಟಿ ಪೂಜಾಗಾಂಧಿ ಇದೀಗ ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ಪೂಜಾಗಾಂಧಿ ನಿನ್ನೆ (ಮೇ 22) ರಾಜಕೀಯದ ಬಗ್ಗೆ ಮಾತನಾಡಿದ್ದಾರೆ.

    ಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಚಂದ್ರಬಾಬು ನಾಯ್ಡು ರಾಜೀನಾಮೆ

    ''ನಾನಿನ್ನು ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ. ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲದ ಕಾರಣ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ದಿನದಲ್ಲಿ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆ'' ಎಂದಿದ್ದಾರೆ.

    pooja gandhi said that she will not comment about mandya election result

    ಈ ವೇಳೆ ಮಂಡ್ಯ ಬಗ್ಗೆ ಪ್ರಶ್ನೆ ಮಾಡಿದಾಗ ''ಮಂಡ್ಯ ಚುನಾವಣೆ ಫಲಿತಾಂಶದ ಕುರಿತು ನಾನೇನೂ ಮಾತನಾಡಲ್ಲ. ಆ ಕುರಿತು ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಎಕ್ಸಿಟ್ ಪೋಲ್ ಸಮೀಕ್ಷೆ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಯಾವುದೇ ಸುದ್ದಿಗಳನ್ನು ಫಾಲೋ ಮಾಡ್ತಿಲ್ಲ'' ಎಂದಿದ್ದಾರೆ.

    ಸಿನಿಮಾಗಳ ಸೋಲುಗಳ ಬಳಿಕ 2012 ರಲ್ಲಿ ಅವರು ಜೆಡಿಎಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿದರು. ನಂತರ ಬಿ ಎಸ್ ಆರ್ ಕಾಂಗ್ರೆಸ್ ಪಕ್ಷಕ್ಕೆ ಹಾರಿ ರಾಯಚೂರು ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಿ ಸೋತರು. ಕಳೆದ ವರ್ಷ ಮತ್ತೆ ಜೆಡಿಎಸ್ ಸೇರ್ಪಡೆಯಾಗಿದ್ದರು.

    English summary
    Kannada actress Pooja Pandhi said that she will not comment about mandya election result.
    Thursday, May 23, 2019, 12:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X