ಹರಿಕೃಷ್ಣ ನಿಧನದ ನಂತರ ಪೂಜಾ ಹೆಗ್ಡೆ ಕಷ್ಟ ಯಾರಿಗೂ ಹೇಳೋಕೆ ಆಗ್ತಿಲ್ಲ.!
ಸೌತ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಪೂಜಾ ಹೆಗ್ಡೆ ಅತ್ತ ಬಾಲಿವುಡ್ ನಲ್ಲೂ ಹೆಚ್ಚು ಹೆಚ್ಚು ಅವಕಾಶಗಳನ್ನ ಪಡೆದುಕೊಳ್ತಿದ್ದಾರೆ. ಸದ್ಯ, ಜೂನಿಯರ್ ಎನ್.ಟಿ.ಆರ್ ಅಭಿನಯದ 'ಅರವಿಂದ ಸಮೇತ' ಚಿತ್ರದಲ್ಲಿ ಪೂಜಾ ನಾಯಕಿ.
ಮಹೇಶ್ ಬಾಬು ಅಭಿನಯಿಸುತ್ತಿರುವ 'ಮಹರ್ಷಿ' ಚಿತ್ರದಲ್ಲೂ ಪೂಜಾ ನಾಯಕಿ. ಜೊತೆ ಪ್ರಭಾಸ್ ಅಭಿನಯಿಸುತ್ತಿರುವ ಹೊಸ ಸಿನಿಮಾಗೂ ಪೂಜಾ ಹೀರೋಯಿನ್. ಈ ಸಿನಿಮಾ ಈಗಷ್ಟೇ ಆರಂಭವಾಗಿದೆ. ಈ ಕಡೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾದಲ್ಲೂ ಪೂಜಾ ಅಭಿನಯಿಸುತ್ತಿದ್ದಾರೆ.
ಹೀಗೆ, ಸಿಕ್ಕಾಪಟ್ಟೆ ಬ್ಯುಸಿಯಿರುವ ಪೂಜಾ ತನ್ನ ಡೈರಿಯಲ್ಲಿರುವ ದಿನಾಂಕವನ್ನೆಲ್ಲಾ ನಿರ್ದೇಶಕರಿಗೆ ಕೊಟ್ಟಿಬಿಟ್ಟಿದ್ದಾರೆ. ಹೀಗಿರುವಾಗ, ನಂದಮೂರಿ ಹರಿಕೃಷ್ಣ ಅವರ ಅಕಾಲಿಕ ಸಾವು ಈಕೆಯನ್ನ ಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಅಷ್ಟಕ್ಕೂ, ಪೂಜಾಗೆ ಎದುರಾಗಿರುವ ಆ ಕಷ್ಟವೇನು.? ಮುಂದೆ ಓದಿ....

ಹರಿಕೃಷ್ಣ ನಿಧನದ ನಂತರ....
ಜೂನಿಯರ್ ಎನ್.ಟಿ.ಆರ್ ಹಾಗೂ ತ್ರಿವಿಕ್ರಮ ಶ್ರೀನಿವಾಸ್ ಜೋಡಿಯಲ್ಲಿ ತಯಾರಾಗುತ್ತಿರುವ 'ಅರವಿಂದ ಸಮೇತ' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ. ಹರಿಕೃಷ್ಣ ಅವರ ನಿಧನದಿಂದ ಈ ಸಿನಿಮಾ ಶೂಟಿಂಗ್ ಐದಾರು ದಿನ ಸ್ಥಗಿತವಾಗಿತ್ತು. ನಂತರ ಈ ವಿಷಾದದಿಂದ ಹೊರ ಬಂದ ಎನ್.ಟಿ.ಆರ್ ಚಿತ್ರೀಕರಣಕ್ಕೆ ಬಂದರು. ಈಗ ಈ ಚಿತ್ರಕ್ಕಾಗಿ ನಟಿ ಪೂಜಾ ಡೇಟ್ಸ್ ಸರಿಪಡಿಸಿಕೊಳ್ಳುವ ಅಗತ್ಯ ಸಂಭವಿಸಿದೆ.

ಒಂದೇ ಸಮಯದಲ್ಲಿ ಎರಡು ಶೂಟಿಂಗ್
ಪೂಜಾ ಹೆಗ್ಡೆಯ ತುಂಬಾ ಬ್ಯುಸಿಯಿರೋದ್ರಿಂದ ಅವರ ದಿನಾಂಕವನ್ನ ಹೊಂದಿಸುವುದು ಕಷ್ಟವಾಗಿದೆ. ಇದೇ ಸಮಯದಲ್ಲಿ ಅಕ್ಷಯ್ ಕುಮಾರ್ ಸಿನಿಮಾಗಾಗಿ ರಾಜಸ್ಥಾನಕ್ಕೆ ಹೋಗಬೇಕಾಗಿದೆ. ಹೈದ್ರಾಬಾದ್ ನಲ್ಲಿ ಎನ್.ಟಿ.ಆರ್ ಸಿನಿಮಾ ಮತ್ತು ರಾಜಸ್ಥಾನದಲ್ಲಿ ಅಕ್ಷಯ್ ಕುಮಾರ್ ಸಿನಿಮಾ. ಇಲ್ಲಿಂದ ಅಲ್ಲಿಗೆ ಒಂದು ವಿಮಾನ ಕೂಡ ಇದೆ. ಆದ್ರೆ, ಅದರಲ್ಲಿ ಹೋದರು ತುಂಬಾ ತಡವಾಗುತ್ತೆ. ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಿಲ್ಲ.

ಪ್ರೈವೇಟ್ ಜೆಟ್ ಖರೀದಿಗೆ ಚಿಂತನೆ
ಹೈದರಬಾದ್ ಮತ್ತು ರಾಜಸ್ಥಾನ ಎರಡು ಕಡೆ ಶೂಟಿಂಗ್ ಭಾಗಿಯಾಗಬೇಕು ಎಂದು ಚಿಂತಿಸಿರುವ ಪೂಜಾ, ಒಂದು ಪ್ರೈವೇಟ್ ಜೆಟ್ ಬಾಡಿಗಿಗೆ ಪಡೆದು ಎರಡು ಚಿತ್ರಗಳಲ್ಲಿಯೂ ಭಾಗವಹಿಸಲು ನಿರ್ಧರಿಸಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಆದ್ರೆ, ಅಲ್ಲಿಯೂ ಸಮಸ್ಯೆ ಇದೆ.

ಅಲ್ಲಿಯೂ ಸಮಸ್ಯೆ ಇದೆ
ರಾಜಸ್ಥಾನದ ಜೈಸಲ್ಮಾರ್ ಪ್ರಾಂತ್ಯದಲ್ಲಿ ಬೆಳಿಗ್ಗೆ 11 ರಿಂದ ಸಂಜೆ 6 ಗಂಟೆಯವರೆಗೂ ಜೆಟ್ ವಿಮಾನ ಪ್ರಯಾಣ ನಿರ್ಬಂಧಿಸಲಾಗಿದೆ. ಹೀಗಾಗಿ, ಇದು ಕೂಡ ಪೂಜಾಗೆ ಸಂಕಷ್ಟಕರ ಪರಿಸ್ಥಿತಿಗೆ ತಳ್ಳಿದೆ. ಹೀಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ತುಂಬಾ ಆಲೋಚನೆಗೆ ಸಿಲುಕಿದ್ದಾರೆ. ಆ ಕಡೆ ಅಕ್ಷಯ್ ಕುಮಾರ್ ತಂಡವನ್ನ ತಮಗಾಗಿ ಕಾಯಿಸುವುದಕ್ಕೆ ಸಿದ್ಧವಿಲ್ಲ. ಈ ಕಡೆ ನಡೆಯುತ್ತಿರುವ ಶೂಟಿಂಗ್ ಬಿಟ್ಟು ಹೋಗಲು ಸಾಧ್ಯವಿಲ್ಲ. ಹೀಗಾಗಿ, ಅದು ಹೇಗೆ ಬ್ಯಾಲೆನ್ಸ್ ಮಾಡ್ತಾರೋ ಕಾದುನೋಡಬೇಕಿದೆ.


Click it and Unblock the Notifications











