For Quick Alerts
  ALLOW NOTIFICATIONS  
  For Daily Alerts

  ಯಶ್ 19 ಸಿನಿಮಾದಲ್ಲಿ ನಟಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಸೈಮಾದಲ್ಲಿ ನೇರ ಉತ್ತರ ಕೊಟ್ಟ ಪೂಜಾ ಹೆಗ್ಡೆ!

  |

  ಕಳೆದ ಶನಿವಾರ ಹಾಗೂ ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ನಡೆಯಿತು.

  ಇನ್ನು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲು ಹಾಗೂ ಇತ್ತೀಚಿನ ದಿನಗಳಲ್ಲಿ ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾರಣದಿಂದಾಗಿ ಈ ಬಾರಿಯ ಸೈಮಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿತ್ತು.

  ಸೈಮಾ 2022: ಅಪ್ಪುಗೆ ಅತ್ಯುತ್ತಮ ನಟ ಪ್ರಶಸ್ತಿ; ಪುನೀತ್ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಯಾರು? ಸೈಮಾ 2022: ಅಪ್ಪುಗೆ ಅತ್ಯುತ್ತಮ ನಟ ಪ್ರಶಸ್ತಿ; ಪುನೀತ್ ಬದಲಾಗಿ ಪ್ರಶಸ್ತಿ ಸ್ವೀಕರಿಸಿದ ನಟ ಯಾರು?

  ಕಾರ್ಯಕ್ರಮದ ಮೊದಲನೇ ದಿನ ಕನ್ನಡ ಮತ್ತು ತೆಲುಗು ಚಿತ್ರರಂಗಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಒಟ್ಟಿಗೆ ನಡೆಯಿತು ಹಾಗೂ ಭಾನುವಾರದಂದು ತಮಿಳು ಮತ್ತು ಮಲಯಾಳಂ ಚಿತ್ರರಂಗದ ಕಾರ್ಯಕ್ರಮ ಒಟ್ಟಿಗೆ ನಡೆಯಿತು. ಮೊದಲ ದಿನ ನಡೆದ ಕನ್ನಡ ಮತ್ತು ತೆಲುಗು ಚಲನಚಿತ್ರಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಯಶ್ ಹಾಗೂ ತೆಲುಗು ಚಿತ್ರರಂಗದ ಪೂಜಾ ಹೆಗ್ಡೆ ಇಬ್ಬರೂ ಸಹ ಭಾಗವಹಿಸಿದ್ದರು. ಇನ್ನು ಇದೇ ಪೂಜಾ ಹೆಗ್ಡೆ ಯಶ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂಬ ದೊಡ್ಡ ಮಟ್ಟದ ಸುದ್ದಿ ಇತ್ತು. ಆ ಕುರಿತಾಗಿ ಸೈಮಾದಲ್ಲಿ ಭಾಗವಹಿಸಿದ್ದ ಪೂಜಾ ಹೆಗ್ಡೆಗೆ ಪತ್ರಕರ್ತರಿಂದ ಪ್ರಶ್ನೆಯೂ ಸಹ ಎದುರಾಗಿತ್ತು. ಈ ಪ್ರಶ್ನೆಗೆ ಪೂಜಾ ಹೆಗ್ಡೆ ಉತ್ತರಿಸಿದ್ದಾರೆ.

  ಸನ್ನೆ ಮೂಲಕ ಉತ್ತರ ನೀಡಿದ ಪೂಜಾ ಹೆಗ್ಡೆ

  ಸನ್ನೆ ಮೂಲಕ ಉತ್ತರ ನೀಡಿದ ಪೂಜಾ ಹೆಗ್ಡೆ

  ಯಶ್ ಅಭಿನಯದ ಮುಂದಿನ ಚಿತ್ರಕ್ಕೆ ನೀವು ನಾಯಕಿ ಎಂಬ ಸುದ್ದಿ ಹರಿದಾಡುತ್ತಿದೆ ಇದರ ಬಗ್ಗೆ ನೀವು ಏನು ಹೇಳ್ತೀರಾ ಎಂದು ಪತ್ರಕರ್ತರೋರ್ವರು ಪ್ರಶ್ನೆಯನ್ನು ಇಟ್ಟಾಗ ಪೂಜಾ ಹೆಗ್ಡೆ ಅದರ ಬಗ್ಗೆ ಯಾವುದೇ ರೀತಿಯ ಐಡಿಯಾ ಇಲ್ಲ ಎಂಬಂತೆ ಕೈಸನ್ನೆ ಮಾಡಿದ್ದಾರೆ. ಕೆಲವರು ಪೂಜಾ ಹೆಗ್ಡೆ ಈ ಮೌನದ ಉತ್ತರ ನೋಡಿದ್ರೆ ಗುಟ್ಟನ್ನು ಬಿಟ್ಟು ಕೊಡಬಾರದು ಎಂಬರ್ಥದಲ್ಲಿ ಈ ರೀತಿ ಸೈಲೆಂಟ್ ಆಗಿ ಬಿಟ್ಟಿದ್ದಾರೆ ಎನ್ನುತ್ತಿದ್ದಾರೆ. ಈ ರೀತಿ ಮೌನ ವಹಿಸಿದ ಪೂಜಾ ಹೆಗ್ಡೆ ನೋಡೋಣ ಮುಂದೇನಾಗುತ್ತೋ ಎಂದು ಸ್ಪಷ್ಟ ಉತ್ತರ ನೀಡದೇ ಅಡ್ಡಗೋಡೆ ಮೇಲೆ ದೀಪವನ್ನಿಟ್ಟು ಜಾರಿಕೊಂಡಿದ್ದಾರೆ.

  ಆದರೆ ನನಗೆ ಕನ್ನಡದಲ್ಲಿ ನಟಿಸುವ ಆಸಕ್ತಿಯಿದೆ

  ಆದರೆ ನನಗೆ ಕನ್ನಡದಲ್ಲಿ ನಟಿಸುವ ಆಸಕ್ತಿಯಿದೆ

  ಹೀಗೆ ಮುಂದೇನಾಗುತ್ತೋ ನೋಡೋಣ ಎಂಬ ಉತ್ತರವನ್ನು ನೀಡಿದ ಪೂಜಾ ಹೆಗ್ಡೆ ಆದರೆ ನನಗೆ ಕನ್ನಡದಲ್ಲಿ ಏನಾದರೂ ಮಾಡಬೇಕೆಂಬ ಯೋಜನೆ ಇದೆ ಎಂದು ಇಂಗ್ಲಿಷ್‌ನಲ್ಲಿಯೇ ಉತ್ತರಿಸಿದ್ದಾರೆ ಈ ಕರಾವಳಿ ಬೆಡಗಿ.

  ಎರಡೆರಡು ಅವಾರ್ಡ್ ಪಡೆದ ಪೂಜಾ ಹೆಗ್ಡೆ

  ಎರಡೆರಡು ಅವಾರ್ಡ್ ಪಡೆದ ಪೂಜಾ ಹೆಗ್ಡೆ

  ಅಖಿಲ್ ಅಕ್ಕಿನೇನಿ ಅಭಿನಯದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಪೂಜಾ ಹೆಗ್ಡೆ ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಹಾಗೂ ಅಷ್ಟೇ ಅಲ್ಲದೆ ಸೈಮಾ ವಿಶೇಷವಾಗಿ ನೀಡುವ ಫಿಮೇಲ್ ಯೂತ್ ಐಕಾನ್ ಪ್ರಶಸ್ತಿಯನ್ನು ಕೂಡ ಪೂಜಾ ಹೆಗ್ಡೆ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

  ಪ್ರಶಸ್ತಿ ಪಡೆದ ಪೂಜಾ ಹೆಗ್ಡೆ ವಿರುದ್ಧ ಗಂಭೀರ ಆರೋಪ

  ಪ್ರಶಸ್ತಿ ಪಡೆದ ಪೂಜಾ ಹೆಗ್ಡೆ ವಿರುದ್ಧ ಗಂಭೀರ ಆರೋಪ

  ಶ್ಯಾಮ್ ಸಿಂಗ್ ರಾಯ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಸಾಯಿ ಪಲ್ಲವಿ ಅವರಿಗೆ ಬೆಸ್ಟ್ ನಟಿ ಪ್ರಶಸ್ತಿ ಬರಬೇಕಿತ್ತು ಹಾಗೂ ಫೀಮೇಲ್ ಯೂತ್ ಐಕಾನ್ ಕೂಡ ಸಾಯಿ ಪಲ್ಲವಿ ಅವರಿಗೆ ಸಲ್ಲಬೇಕಿತ್ತು, ಆದರೆ ಪೂಜಾ ಹೆಗ್ಡೆ ಹಣ ಕೊಟ್ಟು ಇದನ್ನು ಖರೀದಿಸಿದ್ದಾರೆ ಎಂಬ ಗಂಭೀರ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.

  English summary
  Pooja Hegde speaks about acting in Yash upcoming movie during SIIMA 2022. Read on
  Tuesday, September 13, 2022, 9:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X