»   » ಹೆಸರು ಹೇಳದೆ ನಿರ್ದೇಶಕರ ವಂಚನೆ ಬಾಯ್ಬಿಟ್ಟ 'ಬಂಧು-ಬಳಗ' ಚಿತ್ರದ ನಟಿ

ಹೆಸರು ಹೇಳದೆ ನಿರ್ದೇಶಕರ ವಂಚನೆ ಬಾಯ್ಬಿಟ್ಟ 'ಬಂಧು-ಬಳಗ' ಚಿತ್ರದ ನಟಿ

Posted By:
Subscribe to Filmibeat Kannada

ಸಿನಿಮಾ ಇಂಡಸ್ಟ್ರಿಯಲ್ಲಿ 'ಕಾಸ್ಟಿಂಗ್ ಕೌಚ್' ಭೂತ ಎಂಬುದು ಯಾರನ್ನೂ ಬಿಡುತ್ತಿಲ್ಲ. ಒಬ್ಬರ ನಂತರ ಮತ್ತೊಬ್ಬರನ್ನ ಸುತ್ತಿಕೊಳ್ಳುತ್ತಲೇ ಇದೆ. ಟಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಈ ವಿವಾದದ ಬಗ್ಗೆ ಈಗ ಇನ್ನೊಬ್ಬ ನಟಿ ಬಾಯ್ಬಿಟ್ಟಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಧು-ಬಳಗ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಪೂನಂ ಕೌರ್ ನಿರ್ದೇಶಕರೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿರುವ ಪೂನಂ ಆ ನಿರ್ದೇಶಕನ ಹೆಸರೇ ಹೇಳದೆ, ತನಗಾದ ಅನುಭವವನ್ನ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಸಮಾಧಾನ ಹೊರಹಾಕಿರುವ ನಟಿ ಆ ನಿರ್ದೇಶಕನ ಕರಾಳ ಮುಖವನ್ನ ಬಯಲು ಮಾಡಿದ್ದಾರೆ. ಮುಂದೆ ಓದಿ.....

ನಂಬಿಸಿ ಮೋಸ ಮಾಡಿದ ನಿರ್ದೇಶಕ

''ಒಬ್ಬ ನಿರ್ದೇಶಕ ಇದ್ದಾನೆ. ಆತ ಬರಿ ಸಿನಿಮಾಗಳನ್ನ ಮಾತ್ರ ಮಾಡಲ್ಲ. ಜೊತೆಗೆ ಮನುಷ್ಯರನ್ನ ಕೂಡ ಡೈರೆಕ್ಟ್ ಮಾಡ್ತಾನೆ. ನನಗೆ ಅವಕಾಶ ಕೊಡ್ತೀನಿ ಅಂತ ಹೇಳಿದ್ದ. ನಂತರ ಆ ಮಾತು ಬದಲಿಸಿದ. ಆಮೇಲೆ ಎದುರಲ್ಲಿ ನಿಲ್ಲಿಸಿ ಕೇಳಿದ್ರೆ, ಏನೂ ಗೊತ್ತಿಲ್ಲದಾಗೆ ನಟಿಸಿದ. ಆತನಿಗೆ ಹತ್ತಿರವಿರುವಂತಹ ನಟಿಯರು ಮಾತ್ರ ಇಂಡಸ್ಟ್ರಿಯಲ್ಲಿ ಇರಬೇಕು'' ಎಂದು ಪೂನಂ ಕಾಮೆಂಟ್ ಮಾಡಿದ್ದಾರೆ.

ಬೇಕಾದವರಿಗೆ ಮಾತ್ರ ಅವಕಾಶ

''ಬೇರೆಯವರು ಅವಕಾಶಗಳನ್ನ ಕೊಡ್ತಾರೆ ಅಂದಾಗ, ಅದಕ್ಕೆ ಆತ ಬೇರೆಯದ್ದೇ ಕಾರಣ ಹೇಳಿದ್ದ. ಆದ್ರೆ, ಅದನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹೀರೋಯಿನ್ ಒಬ್ಬರು ಫ್ಲಾಫ್ ಆಗುತ್ತಿದ್ದರೂ, ಮತ್ತೆ ಮತ್ತೆ ಅದೇ ನಾಯಕಿಗೆ ಅವಕಾಶ ಕೊಡ್ತಿದ್ದಾರೆ. ಇಂಡಸ್ಟ್ರಿಯಲ್ಲಿ ಏನ್ ನಡೆಯುತ್ತಿದೆ'' ಎಂದು ಪ್ರಶ್ನಿಸಿದ್ದಾರೆ.

ಬೇರೆಯದ್ದೇ ಕಾರಣ ಇರುತ್ತೆ

''ಯಾರಾದರೂ ಸಿನಿಮಾಗಳಿಗೆ ಬೇಕು ಅಂದ್ರೆ ಇರಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣಗಳಿರುವುದಿಲ್ಲ. ಆದ್ರೆ, ಸ್ವಲ್ಪ ಜನ ಸ್ವಾರ್ಥಕ್ಕಾಗಿ ಅವಕಾಶವನ್ನ ಬಳಸಿಕೊಳ್ಳುತ್ತಾರೆ. ಹೆಚ್ಚಿನ ಚಟುವಟಿಕೆಗಳು ಇದರಲ್ಲಿ ಇರುತ್ತೆ'' ಎಂದು ಪೂನಂ ಹೇಳಿದ್ದಾರೆ.

ಕರ್ಮ ಎದುರಿಸಬೇಕಾಗುತ್ತೆ

''ಆಸೆ ಹುಟ್ಟಿಸುವುದು ತಪ್ಪು, ನಂಬಿಕೆ ಹುಟ್ಟಿಸಿ, ಆಮೇಲೆ ಏನೂ ಗೊತ್ತಿಲ್ಲದಾಗೆ ಹೋಗುವುದು ಸರಿಯಲ್ಲ. ಗೊತ್ತಿರುವವರು ಸಾಕ್ಷಿಗಳನ್ನ ಸಂಗ್ರಹಿಸುತ್ತಾರೆ. ಆಮಾಯಕರು ಅವರನ್ನ ನಂಬುತ್ತಾರೆ ಅಷ್ಟೇ. ಇದಕ್ಕೆ ಅವ್ರ ಕರ್ಮವೇ ಸಮಾಧಾನ ಹೇಳುತ್ತೇ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಪೂನಂ ಕೌರ್

ಯಾರು ಆ ಸ್ಟಾರ್ ಡೈರೆಕ್ಟರ್

ನಿರ್ದೇಶಕರೊಬ್ಬರು ತನಗೆ ಅವಕಾಶ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಕ್ಕೆ, ಆಗಾಗ ಪೂನಂ ಕೌರ್ ಕಾಮೆಂಟ್ ಮಾಡುವ ಮೂಲಕ ವಾಗ್ದಾಳಿ ಮಾಡುತ್ತಾರೆ ಎಂದು ಇಂಡಸ್ಟ್ರಿಯಲ್ಲಿ ಟಾಕ್. ಆದ್ರೆ, ಆ ನಿರ್ದೇಶಕ ಯಾರು ಎಂಬುದನ್ನ ಮಾತ್ರ ಹೇಳುತ್ತಿಲ್ಲ. ಹಲವು ಸ್ಟಾರ್ ನಟರಿಗೆ ಸಿನಿಮಾ ಮಾಡಿದ್ದಾರಂತೆ. ಈ ಮಧ್ಯೆ ಕೆಲವು ಫ್ಲಾಫ್ ಚಿತ್ರಗಳನ್ನ ನೀಡಿದ್ದ ಅವರು, ಈಗ ಜಾಗೃತೆಯಿಂದ ಸಿನಿಮಾ ಮಾಡ್ತಿದ್ದಾರಂತೆ.

English summary
Poonam Kaur Lal who is seen ranting on some people took her Twitter to vent out her anger on a ‘director’ whose name she did not mention. Poonam Kaur fired on that director for manipulating her life and demeaning her career by putting down her expectations.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X