»   » ತಡರಾತ್ರಿ ತುಂಡುಡುಗೆಯಲ್ಲಿದ್ದ ಪೂನಂ ಪಾಂಡೆ ಬಂಧನ

ತಡರಾತ್ರಿ ತುಂಡುಡುಗೆಯಲ್ಲಿದ್ದ ಪೂನಂ ಪಾಂಡೆ ಬಂಧನ

Posted By:
Subscribe to Filmibeat Kannada

ಮುಂಬೈ, ಮೇ 3: ಶುಕ್ರವಾರ ತಡರಾತ್ರಿ ಮುಂಬೈ ಪೊಲೀಸರು ವಿವಾದಿತ ನಟಿ, ಮಾಡೆಲ್ ಪೂನಂ ಪಾಂಡೆ ಅವರನ್ನು ಬಂಧಿಸಿದ್ದಾರೆ.

ಮುಂಬೈನ ಮೀರಾ ರಸ್ತೆಯಲ್ಲಿ ಅಸಭ್ಯ ವರ್ತನೆಗಾಗಿ ನಿನ್ನೆ ರಾತ್ರಿ ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ಅವರನ್ನು ಬಂಧಿಸಿದ್ದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ/ ಅಶ್ಲೀಲವಾಗಿ ವರ್ತಿಸುತ್ತಿದ್ದ ಪೂನಂ ಪಾಂಡೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆವು. ಆನಂತರ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದ್ದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ.

poonam-pandey-arrested-by-mumbai-police-for-indecent-behaviour

ನಿನ್ನೆ ರಾತ್ರಿ 10.30 ರಿಂದ 11 ಗಂಟೆಯ ನಡುವೆ ತುಂಡುಡುಗೆ ತೊಟ್ಟು ಪೂನಂ ಯಾರಿಗೋ ಕಾಯುತ್ತಾ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಳು. ಹಾಗಾಗಿ ಆ ಯುವತಿಯನ್ನು ಬಂಧಿಸಿ, ಠಾಣೆಗೆ ಕರೆತಂದಿವಿ ಎಂದು Mira Road ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಫುಲ್ ವಾಘ್ ತಿಳಿಸಿದ್ದಾರೆ.

ಅಂದಹಾಗೆ 23 ವರ್ಷದ ತರುಣಿ ಪೂನಂ ಹೀಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಇದೇ ಮೊದಲಲ್ಲ. ನಟಿ ಪೂನಂ ಪಾಂಡೆ ತಾಜಾ ಆಗಿ ನಶಾ ಎಂಬ ಮಾದಕ ಚಿತ್ರದಲ್ಲಿ ನಟಿಸಿದ್ದರು. (ನಟಿ ಪೂನಂ ಪಾಂಡೆ ಯಾವುದೇ ಕ್ಷಣದಲ್ಲಿ ಬಂಧನ)

English summary
Mumbai police arrest Poonam Pandey for indecent behaviour. Bollywood actress Poonam Pandey was arrested late on Friday night from Mira road in Mumbai. She was held for allegedly behaving indecently in public. The actress was later released after a warning from the police.
Please Wait while comments are loading...