Poonam Pandey Death News: ನಟಿ ಪೂನಂ ಪಾಂಡೆ ನಿಧನ ; ಆಘಾತದಲ್ಲಿ ಬಾಲಿವುಡ್
ಮಾಡೆಲಿಂಗ್ ಹಾಗೂ ನಟನೆಯಲ್ಲಿ ಹೆಸರು ಮಾಡಿದ್ದಕ್ಕಿಂತಾ, ಗಾಸಿಪ್ಪುಗಳ ಮೂಲಕ ಹೆಚ್ಚು ಗುಲ್ಲೆಬ್ಬಿಸಿದ್ದ ಪೂನಂ ಪಾಂಡೆ ಸಾವನ್ನಪ್ಪಿದ್ದಾರೆ. ಕನ್ನಡದ ಲವ್ ಇಸ್ ಪಾಯ್ಸನ್ ಸೇರಿ ಹಿಂದಿಯ ಅರ್ಧ ಡಜನ್ ಸಿನಿಮಾದಲ್ಲಿ ನಟಿಸಿದ್ದ ಪೂನಂ ಪಾಂಡೆಯ ಅಕಾಲಿಕ ನಿಧನದ ಸುದ್ದಿ ಕೇಳಿ ಹಿಂದಿ ಉದ್ಯಮ ಆಘಾತಕ್ಕೊಳಗಾಗಿದೆ.
ಬೇರೆ ಯಾರಾದ್ರೂ ಈ ಸುದ್ದಿಯನ್ನ ಹರಿಬಿಟ್ಟಿದ್ದರೆ ಅಷ್ಟೊಂದು ಸುಲಭಕ್ಕೆ ಯಾರು ನಂಬುತ್ತಿರಲಿಲ್ಲ. ಈ ಕ್ಷಣಕ್ಕೂ ಕೂಡ ನಂಬಲು ಅನೇಕರು ಸಿದ್ದರಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕೆಲವರು ಇದು ಕೂಡ ಪ್ರಚಾರದ ಗಿಮಿಕ್ ಆಗಿರಬಹುದಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪೂನಂ ಪಾಂಡೆ ಅವರ ಇನ್ಸ್ಟಾ ಗ್ರಾಂ ಖಾತೆ ಹ್ಯಾಕ್ ಆಗಿರಬಹುದು ಎಂದು ಊಹೆ ಮಾಡ್ತಿದ್ದಾರೆ.

ಆದರೆ ಪೂನಂ ಪಾಂಡೆ ಸಾವಿನ ಸುದ್ದಿಯನ್ನ ಖುದ್ದು ಪೂನಂ ಪಾಂಡೆಯ ಮ್ಯಾನೇಜರ್ ಖಚಿತ ಪಡಿಸಿದ್ದಾರೆ. ಈ ಕಾರಣಕ್ಕೆ ದಿಗ್ಭ್ರಾಂತಗೊಂಡಿರುವ ಬಾಲಿವುಡ್ ನ ಅನೇಕರು ಪೂನಂ ಪಾಂಡೆಯ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.
ಇನ್ನೂ ಪೂನಂ ಪಾಂಡೆ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಅನ್ನುವ ಮಾಹಿತಿಯನ್ನೂ ಪೂನಂ ಪಾಂಡೆ ತಂಡದ ಸದಸ್ಯರು ಹಂಚಿಕೊಂಡಿದ್ದಾರೆ. ತಮ್ಮ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಫುರದಲ್ಲಿ ಪೂನಂ ಪಾಂಡೆ ಕೊನೆಯುಸಿರೆಳೆದರು ಎಂದು ಹೇಳಿರುವ ಪೂನಂ ಪಾಂಡೆಯ ಮ್ಯಾನೇಜರ್ ಅಂತ್ಯಕ್ರಿಯೆಯ ಮಾಹಿತಿಯನ್ನ ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ
ಬೆಳ್ಳಿಗ್ಗೆ ಬಡಿದ ಬರಸಿಡಿಲು.. ಹೇಳಿದ್ದೇನು ಪೂನಂ ಪಾಂಡೆ ತಂಡ..?
ಇದಕ್ಕೂ ಮುನ್ನ ಇಂದು ಮುಂಜಾನೆ ಸಾಕಷ್ಟು ಕಷ್ಟಕರವಾಗಿತ್ತು. ಸರ್ವಿಕಲ್ ಕ್ಯಾನ್ಸರ್ನಿಂದ ನಮ್ಮ ಪ್ರೀತಿಯ ಪೂನಂ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ಇಂದು ನಾವು ಪೂನಮ್ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಕೆಯೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಗಳಿಗೂ ಶುದ್ಧ ಪ್ರತಿ ಹಾಗೂ ದಯೆಯಿಂದ ಭೇಟಿಯಾಗುತ್ತಿದ್ದರು. ಈ ದುಃಖದ ಸಮಯದಲ್ಲಿ ನಾವು ನಮ್ಮ ಖಾಸಗಿತನಕ್ಕಾಗಿ ವಿನಂತಿ ಮಾಡುತ್ತಿದ್ದೇವೆ. ಆಕೆಯೊಂದಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ' ಎಂದು ಪೂನಂ ಪಾಂಡೆ ಅವರ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.


Click it and Unblock the Notifications











