»   » ಬೆತ್ತಲೆ ಸೇವೆಗೆ ಮತ್ತೆ ರೆಡಿಯಾದ ಪೂನಂ ಪಾಂಡೆ

ಬೆತ್ತಲೆ ಸೇವೆಗೆ ಮತ್ತೆ ರೆಡಿಯಾದ ಪೂನಂ ಪಾಂಡೆ

By: ರವಿಕಿಶೋರ್
Subscribe to Filmibeat Kannada

ತಮ್ಮ ಜೀವನವನ್ನು ಬೆತ್ತಲಾಗುವುದಕ್ಕೇ ಮುಡಿಪಾಗಿಟ್ಟಿರುವ ತಾರೆ ಪೂನಂ ಪಾಂಡೆ. ಸಂದರ್ಭ ಸಿಕ್ಕಾಗಲೆಲ್ಲಾ ಬೆತ್ತಲಾಗುತ್ತಾ ತಮ್ಮ ಜೀವನವನ್ನು ತೇಯುತ್ತಿದ್ದಾರೆ. ಈಗ ತಮ್ಮ ಚೊಚ್ಚಲ ಚಿತ್ರ 'ನಶಾ' ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಈ ಚಿತ್ರದಲ್ಲೂ ಸಾಕಷ್ಟು ಡಿಂಗ್ ಡಾಂಗ್ ದೃಶ್ಯಗಳಿವೆ. ತಮ್ಮ ಚಿತ್ರವನ್ನು ಅಭಿಮಾನಿಗಳು ಗೆಲ್ಲಿಸಿದರೆ ಅವರ ಕಣ್ಣಿಗೆ ಮತ್ತೊಮ್ಮೆ ರಸದೌತಣ ನೀಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ. ತಮ್ಮ ನಶಾ ಚಿತ್ರ ಗೆದ್ದರೆ ಅಭಿಮಾನಿಗಳ ಮುಂದೆ ಮತ್ತೊಮ್ಮೆ ಬಟ್ಟೆ ಬಿಚ್ಚುತ್ತೇನೆ. ನನ್ನ ಅಭಿಮಾನಿಗಳನ್ನು ನಾನು ಎಂದಿಗೂ ನಿರಾಶೆಗೊಳಿಸಲ್ಲ ಎಂದಿದ್ದಾರೆ ಪೂನಂ.


ಆದರೆ ತಮ್ಮನ್ನು ತಾವು ಪೋರ್ನ್ ಸ್ಟಾರ್ ಎಂದು ಕರೆಸಿಕೊಳ್ಳಲು ಅವರಿಗೆ ಇಷ್ಟವಿಲ್ಲವಂತೆ. ತಮ್ಮ ನಶಾ ಚಿತ್ರದಲ್ಲಿ ಕೇವಲ ಓಹ್ ಆಹ್ ಎಂಬ ಸನ್ನಿವೇಶಗಳಷ್ಟೇ ಇಲ್ಲ. ಡೈಲಾಗ್ ಗಳೂ ಇವೆ. ತಮ್ಮ ಚಿತ್ರದಲ್ಲಿ ಒಳ್ಳೆಯ ಕಥೆಯೂ ಇದೆ. ಹಾಗಾಗಿ ತಮಗೆ ಪೋರ್ನ್ ಸ್ಟಾರ್ ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ ಪೂನಂ.

ತಮ್ಮ ನಶಾ ಚಿತ್ರಕ್ಕೂ ವೀಣಾ ಮಲಿಕ್ ಅವರ 'ಸೂಪರ್ ಮಾಡೆಲ್' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಎರಡೂ ಚಿತ್ರಗಳ ಪೋಸ್ಟರ್ ಗಳಲ್ಲಿ ಸಾಮ್ಯತೆ ಇರುವ ಬಗ್ಗೆ ತಮಗೇನು ಗೊತ್ತಿಲ್ಲ. ನಶಾ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗ ಪೋಸ್ಟರ್ ಗಳ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎಂದಿದ್ದಾರೆ ಪೂನಂ.

ನಾನು ಎಲ್ಲೇ ಇರಲಿ ಅಭಿಮಾನಿಗಳ ಜೊತೆ ಟ್ವಿಟ್ಟರ್ ಮೂಲಕ ನಿರಂತರ ಸಂಪರ್ಕದಲ್ಲಿರುತ್ತೇನೆ. ನಶಾ ಚಿತ್ರದ ಬಗ್ಗೆ ನಮ್ಮ ಮನೆಯಲ್ಲಿ ಸಾಕಷ್ಟು ವಾದ ವಿವಾದಗಳಾಗಿವೆ. ಅವರನ್ನು ನಾನು ಮನವರಿಕೆ ಮಾಡಿಕೊಟ್ಟಿದ್ದೇನೆ. ಇನ್ನು ಮುಂದೆ ಅವರು ನನ್ನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

English summary
Poonam Pandey, who is geared up for her debut film, Nasha, believes the role is perfect for her. “If this film does well then I’ll definitely strip for my fans as disappointing anybody is not in my nature,” she adds.
Please Wait while comments are loading...