Poonam Pandey Death : ಏನಿದು ದುರಂತ ? ಹೀರೋನೂ ಇಲ್ಲ, ಐಟಂ ಸಾಂಗ್ ನಲ್ಲಿ ನಟಿಸಿದ್ದ ಪೂನಂ ಕೂಡ ಇಲ್ಲ

ಬಟ್ಟೆಯ ವಿಚಾರಕ್ಕೆ ಸಂಬಂಧಿಸಿದಂತೆ ಸದಾ ಕಾಲ ಚರ್ಚೆಗೀಡಾದವರು ಪೂನಂ ಪಾಂಡೆ. ಮಾಡೆಲಿಂಗ್ ಹಾಗೂ ನಟನೆಯಲ್ಲಿ ಹೆಸರು ಮಾಡಿದ್ದಕ್ಕಿಂತಾ, ಗಾಸಿಪ್ಪುಗಳ ಮೂಲಕ ಹೆಚ್ಚು ಗುಲ್ಲೆಬ್ಬಿಸಿದ್ದ ಪೂನಂ ಪಾಂಡೆ ಕನ್ನಡದ ಲವ್ ಇಸ್ ಪಾಯಿಸನ್ ಸಿನಿಮಾದಲ್ಲಿ ಕೂಡ ನಟಿಸಿದ್ದರು. ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು.

ಇನ್ನೂ ಆ ಕಾಲಕ್ಕೆ ಅಂದರೆ ಸರಿಯಾಗಿ ಹತ್ತು ವರ್ಷಗಳ ಹಿಂದೆ, ಪೂನಂ ಪಾಂಡೆ ಕನ್ನಡಕ್ಕೆ ಬರ್ತಾರೆ, ರಿಯಾಲಿಟಿ ಶೋ ಗೆದ್ದಿದ್ದ ಜಂಗಲ್ ಜಾಕಿ ರಾಜೇಶ್ ಎದುರು ಪೂನಂ ಪಾಂಡೆ ಹೆಜ್ಜೆ ಹಾಕ್ತಾರೆ ಅಂದಾಗ ಯಾರೆಂದರೆ ಯಾರು ನಂಬಿರಲಿಲ್ಲ. ಆದರೆ ಎಲ್ಲ ಲೆಕ್ಕಾಚಾರವನ್ನ ತಲೆ ಕೆಳಗಾಗಿಸಿ ಪೂನಂ ಪಾಂಡೆ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಿದ್ದರು. ತಮ್ಮ ವಯ್ಯಾರದ ಮೂಲಕ ಚಿತ್ರದಲ್ಲಿ ಪಡ್ಡೆಗಳ ಹೃದಯವನ್ನೂ ಕದ್ದಿದ್ದರು.

Poonam pandey has shared screen with Rajesh in kannada in love is posion film

ಪೂನಂ ಪಾಂಡೆ ಕನ್ನಡಕ್ಕೆ ಬಂದಿದ್ದರ ಹಿಂದೆ ಇತ್ತು ಒಂದು ಕಥೆ

ಆಗಷ್ಟೇ ನಶಾ ಸಿನಿಮಾ ಮೂಲಕ ಜನಪ್ರಿಯತೆಯನ್ನ ಗಳಿಸಿದ್ದ ಪೂನಂ ಪಾಂಡೆ, ಲವ್ ಇಸ್ ಪಾಯ್ಸನ್ ಚಿತ್ರಕ್ಕಾಗಿ ಬಂದಾಗ ಕನ್ನಡದ ನಟಿಯರು ನಿಮಗೆ ಕಾಣಿಸಲಿಲ್ಲವಾ ಎಂಬ ಪ್ರಶ್ನೆ ಆ ಚಿತ್ರದ ನಿರ್ಮಾಪಕ ಕೇಶವ ಮೂರ್ತಿ ಅವರಲ್ಲಿ ಕೇಳಿದ್ದರು. ಯಾಕೆಂದರೆ ಈ ಹಾಡಿಗಾಗಿಯೇ ಅರ್ಧ ಕೋಟಿ ಹಣ ನಿರ್ಮಾಪಕರು ಸುರಿದಿದ್ದರು. ಆಗ ಪೂನಂ ಪಾಂಡೆ ಅವರನ್ನ ಕನ್ನಡಕ್ಕೆ ಕರೆ ತಂದಿದ್ದು ಯಾಕೆ ಅನ್ನುವುದರ ಕುರಿತು ಮಾಹಿತಿಯನ್ನ ನಿರ್ಮಾಪಕರು ಹಂಚಿಕೊಂಡಿದ್ದರು. ಕನ್ನಡದ ಅನೇಕ ನಟಿಯರ ಬಳಿ, ಐಟಂ ಸಾಂಗ್ ನ ಪ್ರಸ್ತಾವನೆ ತಗೊಂಡು ಹೋದರೂ ಯಾರೊಬ್ಬರೂ ಕ್ಯಾರೆ ಎನ್ನಲಿಲ್ಲ. 'ಹೀರೋ ಹೆಸರು ಕೇಳಿದ ತಕ್ಷಣವೇ ಚಿತ್ರದಲ್ಲಿ ಕುಣಿಯಲು ಒಪ್ಪಲಿಲ್ಲ. ಇದು ನಮಗೆ ಸರಿ ಕಾಣಲಿಲ್ಲ. ಸ್ಯಾಂಡಲ್‌ವುಡ್ ನಟಿಯರ ಮೇಲಿನ ಹಠಕ್ಕಾಗಿ ಪೂನಂರನ್ನು ಕರೆತಂದೆವು. ಪರಭಾಷಾ ನಟಿಯರನ್ನು ಯಾಕೆ ಕರೆತರುತ್ತೀರಾ ಎಂದು ನನ್ನ ಕೆಲವರು ಪ್ರಶ್ನಿಸಿದ್ದರು. ಇಲ್ಲಿನವರು ನಟಿಸದೇ ಇದ್ದಾಗ ಅನಿವಾರ್ಯವಾಗಿ ನಾವು ಬೇರೆಯವರನ್ನು ಕರೆತರಬೇಕಾಗುತ್ತದೆ. ಪೂನಂರನ್ನು ಅನಿವಾರ್ಯವಾಗಿಯೇ ಕರೆತಂದೆವು' ಎಂದಿದ್ದರು ಲವ್ ಇಸ್ ಪಾಯ್ಸನ್ ಚಿತ್ರದ ನಿರ್ಮಾಪಕ ಕೇಶವ ಮೂರ್ತಿ.

ಲವ್ ಇಸ್ ಪಾಯಿಸನ್ ಬಿಡುಗಡೆ ಮುನ್ನ ದುರಂತ ಅಂತ್ಯ ಕಂಡ ರಾಜೇಶ್

ಹತ್ತು ವರ್ಷದ ಹಿಂದೆ ಲವ್ ಇಸ್ ಪಾಯಿಸನ್ ಬಿಡುಗಡೆಯ ಆಚೀಚೆ ಚಿತ್ರದ ನಾಯಕ ರಾಜೇಶ್ ಮಹಡಿ ಮೇಲಿಂದ ಬಿದ್ದು ದುರಂತ ಅಂತ್ಯವನ್ನ ಕಂಡಿದ್ದರು.ಇನ್ನೂ ಚಿತ್ರೀಕರಣ ಬಾಕಿ ಇದೆ ಹಾಗಾಗಿ ಚಿತ್ರ ರಿಲೀಸ್ ಅಗುವುದು ಡೌಟು ಎಂದು ಗಾಂಧಿನಗರ ಅಭಿಪ್ರಾಯಪಟ್ಟಿತ್ತು. ಆದರೆ ಆ ನಂತರ ಚಿತ್ರ ಜೂನ್ 06 2014ರಂದು ಬಿಡುಗಡೆಯಾಗಿತ್ತು. ಈಗ ಲವ್ ಇಸ್ ಪಾಯಿಸನ್ ಚಿತ್ರ ಬಿಡುಗಡೆಯಾಗಿ ಹತ್ತು ವರ್ಷದ ನಂತರ ರಾಜೇಶ್ ಅವರಂತೆಯೇ ಪೂನಂ ಪಾಂಡೆ ದುರಂತ ಅಂತ್ಯವನ್ನ ಕಂಡಿದ್ದಾರೆ. ತೀರಾ ಚೆಂದದ ಬದುಕು ಸಾಗಿಸಬೇಕಿದ್ದ ಪೂನಂ ಪಾಂಡೆ, ಗರ್ಭಕಂಠದ ಕ್ಯಾನ್ಸರ್ ಗೆ ಬಲಿಯಾಗಿದ್ದು ದುರಂತ.

More from Filmibeat

English summary
In the year 2014 late actress poonam pandey was seen in kannada film love is poison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X