»   » ಪೂನಂ ಪಾಂಡೆ ಹಾಟ್ ಮಸಾಜ್ ಐಟಂ ಸಾಂಗ್!

ಪೂನಂ ಪಾಂಡೆ ಹಾಟ್ ಮಸಾಜ್ ಐಟಂ ಸಾಂಗ್!

By: ರವಿಕಿಶೋರ್
Subscribe to Filmibeat Kannada

ಹಾಟ್ ಬೆಡಗಿ ಪೂನಂ ಪಾಂಡೆ ಕನ್ನಡದ 'ಲವ್ ಈಸ್ ಪಾಯಿಸನ್' ಚಿತ್ರದಲ್ಲಿ ಅಭಿನಯಿಸಿದ ಬಳಿಕ ಪಕ್ಕದ ಟಾಲಿವುಡ್ ಗೂ ಅಡಿಯಿಟ್ಟು ಅಲ್ಲೂ ಹುಯಿಲೆಬ್ಬಿಸಿದ್ದಾರೆ. ಇದೀಗ ಅವರು 'ಮಾಲಿನಿ ಅಂಡ್ ಕೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಒಂದು ಹಾಟ್ ಸಾಂಗ್ ಟಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ.

ಈ ಹಾಡಿನ ವಿಶೇಷ ಏನೆಂದರೆ ಇದರಲ್ಲಿ ವೆರೈಟಿ ಮಸಾಜ್ ಗಳ ಬಗ್ಗೆ ಪೂನಂ ಪಾಂಡೆ ಗಾನಬಜಾನಾ ಇದೆ. ಈ ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ರಾಠಿ, "ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಸಾಗುವ ರೊಮ್ಯಾಂಟಿಕ್ ಚಿತ್ರ ಇದು" ಎಂದಿದ್ದಾರೆ. [ಮಾಲಿನಿ ಅವತಾರದಲ್ಲಿ ನಶೆಯೇರಿಸುತ್ತಿರುವ ಪೂನಂ]

Poonam Pandey hot massage item song

ಒಳ್ಳೆಯ ಹಾಡುಗಳ ಜೊತೆಗೆ ನಾಲ್ಕು ಆಕ್ಷನ್ ಸನ್ನಿವೇಶಗಳು ಇವೆ. ಒಬ್ಬ ಸ್ಟಾರ್ ಹೀರೋ ಚಿತ್ರದಲ್ಲಿರುವ ಎಲ್ಲಾ ರೀತಿಯ ಸರಕು ಈ ಚಿತ್ರದಲ್ಲಿರುತ್ತದೆ ಎನ್ನುತ್ತಾರೆ ನಿರ್ಮಾಪಕರು. ಈ ಚಿತ್ರದಲ್ಲಿ ಪೂನಂ ಪಾಂಡೆ ಅವರನ್ನು ಭಿನ್ನ ಕೋನದಲ್ಲಿ ತೋರಿಸಲಾಗಿದೆಯಂತೆ. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]

ಈ ಚಿತ್ರದ ಬಗ್ಗೆ ಪೂನಂ ಮಾತನಾಡುತ್ತಾ, "ನಶಾ ಚಿತ್ರದ ಬಳಿಕ ಒಂದು ವರ್ಷ ಗ್ಯಾಪ್ ತೆಗೆದುಕೊಂಡು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಸಾಕಷ್ಟು ಸ್ಕ್ರಿಪ್ಟ್ ಗಳು ಬಂದರೂ 'ಮಾಲಿನಿ ಅಂಡ್ ಕೋ' ನಷ್ಟು ಯಾವುದೂ ಇಂಪ್ರೆಸ್ ಮಾಡಲಿಲ್ಲ. ನನಗೆ ತೆಲುಗು ಬಾರದಿದ್ದರೂ ಅರ್ಥವಾಗುವಂತೆ ಹೇಳಿ ನಿರ್ದೇಶಕರು ತೆರೆಗೆ ತರುತ್ತಿದ್ದಾರೆ" ಎಂದಿದ್ದಾರೆ.

English summary
Bollywood 'Nasha' beauty Poonam Pandey's Latest Telugu Movie Malini & Co's Hello Hello Mallu Doctor Full Video Song released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada