»   » ಯೂನಿಫಾರ್ಮ್ ಬದಲಿಸಿದ ಸೆಕ್ಸ್ ಬಾಂಬ್ ಪೂನಂ

ಯೂನಿಫಾರ್ಮ್ ಬದಲಿಸಿದ ಸೆಕ್ಸ್ ಬಾಂಬ್ ಪೂನಂ

Posted By:
Subscribe to Filmibeat Kannada

ಪೂನಂ ಪಾಂಡೆ ಈಗ ಬದಲಾಗಿದ್ದಾರೆ..! ಇಲ್ಲಿವರೆಗೂ ನೀವೆಲ್ಲಾ ನೋಡಿದ್ದ ಪೂನಂ ಪಾಂಡೆ ಈಗಿಲ್ಲ..! ಇನ್ಮೇಲೆ ಪೂನಂ ಪಾಂಡೆ ತುಂಡು ಬಟ್ಟೆ ಹಾಕಲ್ಲ..! ಅಪ್ಪಿ-ತಪ್ಪಿ ಕೂಡ ಬಿಕಿನಿ ತೊಡುವುದಿಲ್ಲ...! ಬಾತ್ ರೂಮ್ ನಲ್ಲಿ ಟೂ ಪೀಸ್ ಹಾಕಿ ಪೋಸ್ ಕೊಟ್ಟಿರೋ ಫೋಟೋವನ್ನ ಟ್ವಿಟರ್ ನಲ್ಲಿ ಹಾಕಲ್ಲ...!

''ಬೆತ್ತಲೆ ಆಗ್ತೀನಿ'' ಅಂದಿದ್ದ ಪೂನಂ ಈಗ ಮೈ ತುಂಬಾ ಸೀರೆಯುಟ್ಟಿದ್ದಾರೆ..! ಕಣ್ಣಿಗೆ ಕುಕ್ಕುವ ಕಿತ್ತಳೆ ಬಣ್ಣದ ತೆಳು ಸೀರೆಯುಟ್ಟು ಗರತಿ ಗಂಗವ್ವನಾಗಿದ್ದಾರೆ..! ಜಡೆ ಕಟ್ಟಿ, ಮುಡಿ ತುಂಬಾ ಮಲ್ಲಿಗೆ ಹೂ ಮುಡಿದಿದ್ದಾರೆ..!

''ಛೇ...ಚೆನ್ನಾಗಿದ್ದ ಪೂನಂಗೆ ಸಡ್ಡನ್ನಾಗಿ ಏನಾಯ್ತಪ್ಪಾ'' ಅಂತ ಪಡ್ಡೆ ಹೈಕ್ಳು ಹಾರ್ಟ್ ಬ್ರೇಕ್ ಮಾಡ್ಕೋಬೇಡಿ, ಪೂನಂ ಹೊಸ ಅವತಾರವನ್ನ ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ, ನಿಮಗೆ ಹಾರ್ಟ್ ಬೀಟ್ ರೇಸ್ ಆಗುತ್ತೆ.

ಸೀರೆಯುಟ್ಟ 'ಸೆಕ್ಸ್ ಬಾಂಬ್'

'ಬೆತ್ತಲೆ ಬೆಡಗಿ' ಪೂನಂ ಪಾಂಡೆ ಹೀಗೂ ಕಾಣ್ತಾರಾ ಅಂತ ಯಾರು ಊಹಿಸಿದ್ರೂ, ಬಿಟ್ಟಿದ್ರೋ, ಆದ್ರೆ ಎಲ್ಲರ ಊಹೆಗೂ ಮೀರಿ ಪೂನಂ ತಮ್ಮ ಯ್ಯೂನಿಫಾರ್ಮ್ ಚೇಂಜ್ ಮಾಡಿಕೊಂಡಿದ್ದಾರೆ.

ಸೀರೆ ಮೇಲೆ ಪೂನಂ ಕಣ್ಣು..!

ಎಷ್ಟು ಅಂತ ಒಂದೇ ಲುಕ್ ನಲ್ಲಿ ಪೂನಂನ ನೀವು ನೋಡೋಕೆ ಸಾಧ್ಯ. ಅದಕ್ಕಂತಲೇ ಹೊಸ ಅವತಾರದಲ್ಲಿ ಪೂನಂ ಪ್ರತ್ಯಕ್ಷವಾಗಿದ್ದಾರೆ.

ಹೈದರಾಬಾದ್ ನಲ್ಲಿ ಪೂನಂ ಹೈಡ್ರಾಮಾ

ಟ್ವಿಟರ್ ನಲ್ಲಿ ಸಿಗ್ತಿದ್ದ ಬಿಟ್ಟಿ ಪಬ್ಲಿಸಿಟಿಗಾಗಿ ಪೂನಂ ಸೀರೆಯುಟ್ಟಿಲ್ಲ. ಹೈದರಾಬಾದ್ ನಲ್ಲಿ ಮಾಧ್ಯಮಗಳಗೆ ಪೂನಂ ಕೊಟ್ಟಿರೋ ಪೋಸ್ ಗಳಿವು.

ಟಾಲಿವುಡ್ ಗೆ ಕಾಲಿಟ್ಟ 'ಬಿಚ್ಚಮ್ಮ'..!

'ನಶಾ' ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಪೂನಂ, ನಂತ್ರ 'ಲವ್ ಈಸ್ ಪಾಯ್ಸನ್' ನ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕುತ್ತಾ ಗಾಂಧಿನಗರಕ್ಕೆ ಬಂದ್ರು. ಈಗ ಸೀರೆಯುಟ್ಟು ಟಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ ಅಷ್ಟೆ.

'ಮಾಲಿನಿ & ಕೋ' ಚಿತ್ರಕ್ಕೆ ನಾಯಕಿ

ಪೂನಂ ಡ್ರೆಸ್ ಕೋಡ್ ಬದಲಿಸಿದ್ದಾರೆ ಅಂದ್ರೆ, ಅದಕ್ಕೆ ಬಲವಾದ ಕಾರಣ ಇರ್ಬೇಕಲ್ವಾ. ಒಂದು ಹಾಡಿಗಾಗಿ ಲುಕ್ ಬದಲಿಸದ ಪೂನಂ ಈಗ ಹೀರೋಯಿನ್ ಆಗಿರೋದಕ್ಕೆ ಈ ಗೆಟಪ್ಪು ಹಾಕಿದ್ದಾರೆ..! ಈಗಷ್ಟೇ ಸೆಟ್ಟೇರಿರುವ 'ಮಾಲಿನಿ & ಕೋ' ಚಿತ್ರಕ್ಕೆ ಪೂನಂ ನಾಯಕಿಯಾಗಿದ್ದಾರೆ.

ಕಥೆಗೆ ಪೂನಂ ಕ್ಲೀನ್ ಬೋಲ್ಡ್

ಅಕ್ಕಿನೇನಿ ನಾಗಾರ್ಜುನಗೆ 'ರಗಡ'ದಂತಹ ಹಿಟ್ ಸಿನಿಮಾ ನೀಡಿದ್ದ ವೀರು ಪೊಟ್ಲಾ, ಪೂನಂ ಪಾಂಡೆಯನ್ನ ಟಾಲಿವುಡ್ ಗೆ ಕರೆತಂದಿದ್ದಾರೆ. ಟೆರರಿಸಂ ಬ್ಯಾಕ್ ಡ್ರಾಪ್ ನಲ್ಲಿ ನಡೆಯೋ ಆಕ್ಷನ್ ಲವ್ ಸ್ಟೋರಿಯಿರೋ 'ಮಾಲಿನಿ & ಕೋ' ಕಥೆ ಕೇಳಿ ಕ್ಲೀನ್ ಬೋಲ್ಡ್ ಆದ ಪೂನಂ ಸೀರೆಯುಡೋಕೆ ರೆಡಿ ಅಂದ್ರಂತೆ..!

ಐಟಂ ಬಾಂಬ್ ಗೆ ಹೀರೋ ಯಾರು..?

ಯಮಲೀಲಾ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಮಿಲನ್ ರಾಠಿ, 'ಮಾಲಿನಿ & ಕೋ' ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರಂತೆ. ಈ ಚಿತ್ರಕ್ಕೋಸ್ಕರ ಸ್ಪೆಷಲ್ ಆಗಿ ಡ್ಯಾನ್ಸ್, ಫೈಟ್ಸ್ ಟ್ರೇನಿಂಗ್ ಪಡೆದುಕೊಳ್ತಿದ್ದಾರಂತೆ ಮಿಲನ್ ರಾಠಿ.

ಬಿಗ್ ಬ್ಯಾನರ್ ಚಿತ್ರದಲ್ಲಿ ಪೂನಂ

'ಯಮಲೀಲ', 'ವಿನೋದಂ' ನಂತಹ ಸಕ್ಸಸ್ ಫುಲ್ ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಮನೀಷ್ ಫಿಲ್ಮ್ಸ್ ಬ್ಯಾನರ್ 12 ವರ್ಷಗಳ ಲಾಂಗ್ ಗ್ಯಾಪ್ ಬಳಿಕ 'ಮಾಲಿನಿ & ಕೋ' ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಮೂಲಗಳ ಪ್ರಕಾರ ಈ ಚಿತ್ರಕ್ಕೂ ಭರ್ಜರಿ ಸಂಭಾವನೆ ಪಡೆದಿದ್ದಾರಂತೆ ಪೂನಂ..!

ಭಿನ್ನವಿಭಿನ್ನವಾಗಿ ಕಾಣಿಸ್ತಾರೆ ಪೂನಂ

ಸೀರೆಯುಟ್ಟು ಎಲ್ಲರ ಮುಂದೆ ಹಾಜರಾದ ಪೂನಂ, ಇಡೀ ಚಿತ್ರದಲ್ಲಿ ಗೌರಮ್ಮನಾಗಿ ಮಾತ್ರ ಅಲ್ಲ. ಎಂದಿನ ಗ್ಲಾಮರಸ್ ಇಮೇಜ್ ನಲ್ಲೂ ಪೂನಂ ಮಿಂಚ್ತಾರೆ. ಅಲ್ಲಿಗೆ ಪಡ್ಡೆ ಹಕ್ಳಿಗೆ 'ಮಾಲಿನಿ & ಕೋ' ಹೇಳಿಮಾಡಿಸಿದ ಸಿನಿಮಾ ಅಂತರ್ಥ.

ಮತ್ತೆ ನಶೆಯೇರಿಸೋಕೆ ರೆಡಿ

ಟಾಲಿವುಡ್ ಸಿನಿಮಾದ ಜೊತೆಗೆ ಪೂನಂ ನಶಾ ಚಿತ್ರದ ಸೀಕ್ವೆಲ್ ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಆದರೆ ನಿಮ್ಮೆಲ್ಲರಿಗೂ ನಶೆಯೇರಿಸೋಕೆ ಸ್ವಲ್ಪ ತಡವಾಗುತ್ತೆ ಅಷ್ಟೆ.

English summary
Poonam Pandey is surprisingly seen in traditional saree for the launch of her tollywood debute movie Malini & Co. Veeru Potla is directing this movie. Poonam had previously worked in hindi movie titled Nasha and she has recently signed for the sequel of Nasha. She had made her Sandalwood debute through 'Love is poison'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada