ಅಣ್ಣಾವ್ರ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ನಟಿಸುವ ಅವಕಾಶ

ಕನ್ನಡ ಚಿತ್ರರಂಗದ ಯಶಸ್ವಿ ನಿರ್ಮಾಣ ಸಂಸ್ಥೆಯಲ್ಲಿ ಪೂರ್ಣಿಮಾ ಎಂಟರ್‌ಪ್ರೈಸಸ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಡಾ ಪಾರ್ವತಮ್ಮ ರಾಜ್ ಕುಮಾರ್ ಮುನ್ನಡೆಸುತ್ತಿದ್ದ ಬಹುದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆ. ಈ ಸಂಸ್ಥೆಯಡಿ ಬರಲಿರುವ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆ.

ಪೂರ್ಣಿಮಾ ಎಂಟರ್‌ಪ್ರೈಸಸ್ ಸಂಸ್ಥೆಯಲ್ಲಿ ತಯಾರಾಗಲಿರುವ ಹೊಸ ಸಿನಿಮಾದಲ್ಲಿ ನಾಯಕಿ ನಟಿ ಪಾತ್ರಕ್ಕಾಗಿ ಆಡಿಷನ್ ಮಾಡಲಾಗುತ್ತಿದೆ. ಈ ಆಡಿಷನ್‌ನಲ್ಲಿ ಭಾಗವಹಿಸಿ ದೊಡ್ಮನೆ ನಿರ್ಮಾಣದ ಚಿತ್ರದಲ್ಲಿ ಹೀರೋಯಿನ್ ಆಗುವ ಅದೃಷ್ಟ ನಿಮ್ಮದಾಗಬಹುದು.

ಆಡಿಷನ್‌ನಲ್ಲಿ ಭಾಗವಹಿಸಲು ನೀವು ಮಾಡಬೇಕಾಗಿರುವುದು ಇಷ್ಟೇ.

- ವಯಸ್ಸು 18-25 ವರ್ಷ

- ಏಪ್ರಿಲ್ 15 ರೊಳಗೆ ನೊಂದಾಯಿಸಿಕೊಳ್ಳಿ

- ಕನ್ನಡ ಭಾಷೆ ಕಡ್ಡಾಯ ಹಾಗೂ ಕಲಿಯುವ ಆಸಕ್ತಿ ಇರಬೇಕು

ಆಡಿಷನ್ ಅರ್ಜಿಯಲ್ಲಿ ಪ್ರಮುಖವಾಗಿ ಮೂರು ವಿಷಯಗಳನ್ನು ಕೇಳಲಾಗಿದೆ.

Poornima Enterprises Called Audition for Female lead

* ನೀವು ನಟನೆ ತರಬೇತಿ ಪಡೆದಿದ್ದೀರಾ?

* ಮಾರ್ಷಲ್ ಆರ್ಟ್ಸ್ ತರಬೇತಿ ಇದೆಯಾ?

* ಕುದುರೆ ಸವಾರಿ ಮಾಡಲು ಬರುತ್ತದೆಯೇ?

ಈ ವಿಷಯಗಳನ್ನು ಗಮನಿಸಿರೆ ನಾಯಕಿಯ ಪಾತ್ರ ಹೇಗಿರಬಹುದು ಎಂಬ ಸಣ್ಣ ಕುತೂಹಲ ಕಣ್ಣ ಮುಂದೆ ಬರುತ್ತದೆ.

ಅಂದ್ಹಾಗೆ, ಇದು ಯಾವ ಚಿತ್ರ ಮತ್ತು ನಾಯಕ ಯಾರು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಟ ಯುವರಾಜ್ ಕುಮಾರ್ ಈ ಆಡಿಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪೂರ್ಣಿಮಾ ಎಂಟರ್‌ಪ್ರೈಸಸ್ ಸಂಸ್ಥೆ ನಿರ್ಮಾಣದ ಮುಂದಿನ ಸಿನಿಮಾ ಎಂದು ತಿಳಿಸಿದ್ದಾರೆ.

'ಯುವ ರಣಧೀರ ಕಂಠೀರವ' ಚಿತ್ರದಲ್ಲಿ ಯುವರಾಜ್ ಕುಮಾರ್ ನಟಿಸುತ್ತಿದ್ದಾರೆ. ಯುವ ಅವರ ಮೊದಲ ಸಿನಿಮಾಗೆ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರವಿ ಬಸ್ರೂರ್ ಸಂಗೀತವಿದ್ದು, ಸಂಕೇಶ್ ಛಾಯಾಗ್ರಹಣ, ಚೇತನ್ ಡಿಸೋಜಾ ಸಾಹಸ ನಿರ್ದೇಶನವಿದೆ.

More from Filmibeat

English summary
Poornima Enterprises Called Audition for Female lead role in his upcoming film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X