twitter
    For Quick Alerts
    ALLOW NOTIFICATIONS  
    For Daily Alerts

    'ಪಾಪ್ ಕಾರ್ನ್ ಮಂಕಿ ಟೈಗರ್' 3 ದಿನದ ಕಲೆಕ್ಷನ್ ಎಷ್ಟು?

    |

    ಸಿನಿಮಾ ಚೆನ್ನಾಗಿದೆ... ಸಿನಿಮಾ ಚೆನ್ನಾಗಿಲ್ಲ...

    'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾಗೆ ಈ ಎರಡೂ ಮಾತುಗಳು ಕೇಳಿ ಬರುತ್ತಿದೆ. ಕೆಲವರಿಗೆ ಸಿನಿಮಾ ತುಂಬ ಇಷ್ಟ ಆಗಿದೆ. ಎರಡ್ಮೂರು ಬಾರಿ ನೋಡಿ, ಸಿನಿಮಾವನ್ನು ಹೊಗಳುತ್ತಿದ್ದಾರೆ. ಇನ್ನು ಕೆಲವರು ಏನಿದು ಸಿನಿಮಾ ಎಂದುಕೊಳ್ಳುತ್ತಾ, ಒಂದು ಬಾರಿ ನೋಡಿದ್ದೇ ತಪ್ಪಾಯ್ತು ಎನ್ನುವಂತೆ ಹೇಳುತ್ತಿದ್ದಾರೆ.

    ಸಿನಿಮಾ ಹಾಗಿದೆ.. ಹೀಗಿದೆ.. ಎನ್ನುವ ಚರ್ಚೆಯ ನಡುವೆಯೇ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿದ್ದಾರೆ. ಹೌಸ್ ಫುಲ್ ಪ್ರದರ್ಶನಗಳು ಹೆಚ್ವಾಗುತ್ತಿದೆ. ಜಿಲ್ಲಾ ಕೇಂದ್ರಗಳ ಚಿತ್ರಮಂದಿರಕ್ಕೆ ಚಿತ್ರತಂಡ ಭೇಟಿ ನೀಡುತ್ತಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರ ಚರ್ಚೆ ಜೋರಾಗಿ ನಡೆಯುತ್ತಿದೆ. ಪರಿಣಾಮ ಸಿನಿಮಾ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ.

    ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.! ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.!

    ಮೊದಲ ದಿನದ ಕೆಲಕ್ಷನ್ ಈಗಾಗಲೇ ಹೊರಬಂದಿದ್ದು, ಮೂರು ದಿನಕ್ಕೆ ಸಿನಿಮಾ ದುಡಿದ ಹಣ ಎಷ್ಟು ಎನ್ನುವ ಕುತೂಹಲ ಇರುತ್ತದೆ. ವೀಕೆಂಡ್ ನಲ್ಲಿ ಸಿನಿಮಾದ ಗಳಿಕೆ ಏರಿಕೆ ಆಗಿದೆ.

    ಮೂರು ದಿನದಲ್ಲಿ 7.19 ಕೋಟಿ

    ಮೂರು ದಿನದಲ್ಲಿ 7.19 ಕೋಟಿ

    'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಮೂರು ದಿನದಲ್ಲಿ 7.19 ಕೋಟಿ ಗಳಿಕೆ ಮಾಡಿದೆ ಎನ್ನುವ ಸುದ್ದಿ ಇದೆ. ಆದರೆ, ಕೆಲಕ್ಷನ್ ಬಗ್ಗೆ ಸೂರಿ ಇನ್ನೂ ಹೇಳಿಕೊಂಡಿಲ್ಲ. ಶುಕ್ರವಾರ ಶಿವರಾತ್ರಿ ಹಬ್ಬದ ರಜೆ, ಶನಿವಾರ ಹಾಗೂ ಭಾನುವಾರ ವೀಕೆಂಡ್ ಇತ್ತು. ಇದು ಸಿನಿಮಾಗೆ ಬಹಳ ಅನುಕೂಲವಾಗಿದೆ. ಚಿತ್ರಮಂದಿರಗಳು ತುಂಬಿದ್ದು, ಕಲೆಕ್ಷನ್ ಹೆಚ್ಚಾಗಿದೆ.

    ಮೊದಲ ದಿನ 2.53 ಕೋಟಿ

    ಮೊದಲ ದಿನ 2.53 ಕೋಟಿ

    ಸಿನಿಮಾ ಬಿಡುಗಡೆಯಾದ ಮೊದಲ ದಿನ 2.53 ಕೋಟಿ ಗಳಿಕೆ ಮಾಡಿತ್ತು. ಬೆಂಗಳೂರಿನಲ್ಲಿ ಬೆಳಗ್ಗೆ 7 ಪ್ರದರ್ಶನಗಳು ಶುರು ಆಗಿದ್ದವು. ಸಿನಿಮಾದ ಮೇಲೆ ನಿರೀಕ್ಷೆ ಇಟ್ಟಿಕೊಂಡವರು ಮೊದಲ ದಿನವೇ ಸಿನಿಮಾ ನೋಡಿದರು. ಎರಡನೇ ದಿನ ಅದು ಡಬಲ್ ಆಗಿತ್ತು. ಭಾನುವಾರದ ಅಂತ್ಯಕ್ಕೆ ಸಿನಿಮಾದ ಗಳಿಕೆ 7 ಕೋಟಿಯ ಗಡಿ ದಾಟಿತು.

    Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ'Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ'

    ನೆಗೆಟಿವ್ ಟಾಕ್ ನಿಂದ ಕೊಂಚ ಪರಿಣಾಮ

    ನೆಗೆಟಿವ್ ಟಾಕ್ ನಿಂದ ಕೊಂಚ ಪರಿಣಾಮ

    ಸಿನಿಮಾದ ಮೂರು ದಿನದ ಕಲೆಕ್ಷನ್ ದೊಡ್ಡ ಸ್ಟಾರ್ ಚಿತ್ರಕ್ಕೆ ಹೋಲಿಕೆ ಮಾಡಿದರೆ ಕಡಿಮೆಯೇ. ಆದರೆ, ಹೆಚ್ಚು ಪ್ರಚಾರ ಇಲ್ಲದೆ, ಹೆಚ್ಚು ಗಿಮಿಕ್ ಇಲ್ಲದೆ ಬಂದ ಸಿನಿಮಾ ಡಿಸೆಂಟ್ ಓಪನಿಂಗ್ ಪಡೆದುಕೊಂಡಿತ್ತು. ಸಿನಿಮಾಗೆ ನೆಗೆಟಿವ್ ಅಭಿಪ್ರಾಯ ಕೂಡ ಇದ್ದು, ಚಿತ್ರಮಂದಿರಕ್ಕೆ ಹೋಗಲು ಬಯಸಿದವರ ಸಂಖ್ಯೆಯನ್ನು ಅದು ಕಡಿಮೆ ಮಾಡಿದೆ.

    ಸಿನಿಮಾ ಹೇಗಿದೆ?

    ಸಿನಿಮಾ ಹೇಗಿದೆ?

    'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಮಂಕಿ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ನಿರೂಪಣೆ. ರೌಡಿಸಂ, ಮಚ್ಚು, ಬಿಯರ್, ಸಿಗರೇಟ್, ರಕ್ತದ ಜೊತೆಗೆ ಪ್ರೀತಿ, ಮಮತೆ, ಕಣ್ಣೀರು, ಸಂಕಟ, ಸಂಭ್ರಮ ಎಲ್ಲ ಭಾವನೆಗಳು ಇರುವ ಸಿನಿಮಾವಿದು. ಧನಂಜಯ್, ನಿವೇದಿತಾ ನಟನೆ, ಚರಣ್ ರಾಜ್ ಸಂಗೀತ, ಶೇಖರ್ ಕ್ಯಾಮರಾ ವರ್ಕ್ ಸಿನಿಮಾದ ಹೈಲೈಟ್ ಆಗಿದೆ.

    English summary
    Actor Dhananjay's 'Popcorn Monkey Tiger' 3rd day box office collection.
    Tuesday, February 25, 2020, 9:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X