ಗೌರಿ-ಗಣೇಶ ಹಬ್ಬಕ್ಕೆ ಸೆಟ್ಟೇರಲಿದೆ ದುನಿಯಾ ಸೂರಿ ಹೊಸ ಸಿನಿಮಾ
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಯಶಸ್ವಿಯಾಗಿ 25 ವಾರಗಳು ಪೂರೈಸಿದೆ. ಚಿತ್ರ ಶತದಿನೋತ್ಸವ ಆಚರಣೆ ಮಾಡುತ್ತಿದ್ದ ಸಮಯದಲ್ಲೇ ದುನಿಯಾ ಸೂರಿ ಮತ್ತು ತಂಡ ಹೊಸ ಸಿನಿಮಾವನ್ನು ಮಾಡುವುದಾಗಿ ತಿಳಿಸಿತ್ತು.
ಸಾಮಾನ್ಯ ಶೀರ್ಷಿಕೆಗಳಿಗಿಂತಲೂ ವಿಭಿನ್ನ ಎನ್ನಿಸುವ ಟೈಟಲ್ ಅನ್ನು ಸಿನಿಮಾತಂಡ ಸೆಲೆಕ್ಟ್ ಮಾಡಿಕೊಂಡು ಅದನ್ನು ಶಿವರಾಜ್ ಕುಮಾರ್ ಅವರಿಂದಲೇ ಜನರಿಗೆ ತಲುಪುವಂತೆ ಮಾಡಿತ್ತು. 'ಟಗರು' ಸಿನಿಮಾದಲ್ಲಿ ಡಾಲಿ ಪಾತ್ರವನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳಿಗೆ ಧನಂಜಯ ಅವರನ್ನು ಬೇರೆ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನಕ್ಕೆ ದುನಿಯಾ ಸೂರಿ ಮುಂದಾಗಿದ್ದಾರೆ.

ಈಗಾಗಲೇ ಸಿನಿಮಾಗೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎನ್ನುವ ಟೈಟಲ್ ಫಿಕ್ಸ್ ಆಗಿದ್ದು ಚಿತ್ರದ ಮಹೂರ್ತವನ್ನು ಗೌರಿ ಗಣೇಶ ಹಬ್ಬಕ್ಕೆ ಮಾಡಲಿದ್ಯಂತೆ ಸಿನಿಮಾ ಟೀಂ. 'ಟಗರು' ಚಿತ್ರವನ್ನು ನಿರ್ಮಾಣ ಮಾಡಿದ್ದ ಕೆ ಪಿ ಶ್ರೀಕಾಂತ್ ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕುತ್ತಿದ್ದಾರೆ.

ಸದ್ಯ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು ಇದೇ ವಾರದಲ್ಲಿ ಚಿತ್ರತಂಡದಲ್ಲಿ ಯಾರೆಲ್ಲಾ ಭಾಗಿ ಆಗಲಿದ್ದಾರೆ ಎನ್ನುವುದನ್ನು ನಿರ್ದೇಶಕರು ತಿಳಿಸಲಿದ್ದಾರೆ. ಇನ್ನು ಎಲ್ಲರಿಗೂ ತಿಳಿದಿರುವಂತೆ ಧನಂಜಯ ಜೊತೆಯಲ್ಲಿ ನಿವೇದಿತಾ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.


Click it and Unblock the Notifications











