'ಪಾಪ್ ಕಾರ್ನ್ ಮಂಕಿ ಟೈಗರ್' ಬಿಡುಗಡೆ ದಿನಾಂಕ ಘೋಷಣೆ
ದುನಿಯಾ ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಬಿಡುಗಡೆಯ ದಿನಾಂಕ ಪಕ್ಕಾ ಆಗಿದೆ. ಇದೇ ತಿಂಗಳು ಸಿನಿಮಾ ರಿಲೀಸ್ ಆಗುತ್ತಿದೆ.
ಫೆಬ್ರವರಿ 21 ರಂದು ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ನಟ ಧನಂಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶಿವರಾತ್ರಿ ಹಬ್ಬದ ವಿಶೇಷವಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ.
ಮತ್ತೊಂದು ಕಡೆ ಸೂರಿ ನಿರ್ದೇಶನದ 'ಟಗರು' ಸಿನಿಮಾ ಕೂಡ ಫೆಬ್ರವರಿಯಲ್ಲಿಯೇ ರಿಲೀಸ್ ಆಗಿತ್ತು. ಫೆಬ್ರವರಿ 23 ರಂದು ಟಗರು ತೆರೆಗೆ ಬಂದಿದ್ದು, ಫೆಬ್ರವರಿ 21 ರಂದು ಪಾಪ್ ಕಾರ್ನ್ ಮಂಕಿ ಟೈಗರ್ ಬರುತ್ತದೆ.

ಸಿನಿಮಾದ ಮೊದಲ ಹಾಡು ಈಗಾಗಲೇ ಹಿಟ್ ಆಗಿದೆ. ಮಾದೇವ ಹಾಡಿಗೆ ತಕ್ಕ ಹಾಗೆ ಶಿವರಾತ್ರಿಗೆ ಸಿನಿಮಾ ಬರುತ್ತಿದೆ. ''ಜಾಗರಣೆ ಮಾಡೋಣ.. ರೆಡಿಯಾಗಿ.. ಶಿವ ಶಿವ ಎಂದರೆ ಭಯವಿಲ್ಲ.. ಶಿವ ನಾಮಕೆ ಸಾಟಿ ಬೇರಿಲ್ಲ..'' ಎಂದು ಧನಂಜಯ್ ಟ್ವೀಟ್ ಮಾಡಿದ್ದಾರೆ.
'ಪಾಪ್ ಕಾರ್ನ್ ಮಂಕಿ ಟೈಗರ್'ನಲ್ಲಿ ಮೂವರು ನಾಯಕಿಯರು ಇದ್ದಾರೆ. ನಿವೇದಿತಾ, ಅಮೃತ ಐಯ್ಯಂಗಾರ್, ಸಪ್ತಮಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸುಧೀರ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











