Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಟಗರು' ನಂತರ ಡೈರೆಕ್ಷನ್ ಗೆ ಎಂಟ್ರಿ ಕೊಟ್ಟ ದುನಿಯಾ ಸೂರಿ
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಟಗರು' ಸಿನಿಮಾ ಈ ವರ್ಷದ ಬಹುದೊಡ್ಡ ಹಿಟ್ ಸಿನಿಮಾ. ದುನಿಯಾ ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರು. 25 ವಾರ ಚಿತ್ರಮಂದಿರದಲ್ಲಿ ರಾರಾಜಿಸಿದ್ದ 'ಟಗರು' ಇತ್ತೀಚಿಗಷ್ಟೆ ಕಿರುತೆರೆಯಲ್ಲೂ ಪ್ರದರ್ಶನ ಕಂಡಿತ್ತು.
'ಟಗರು' ಸಿನಿಮಾ ಹಿಟ್ ಆದ್ಮೇಲೆ ಆ ಚಿತ್ರದಲ್ಲಿ ಅಭಿನಯಿಸಿದ್ದ ಶಿವಣ್ಣ, ಧನಂಜಯ್, ವಸಿಷ್ಠ, ಮಾನ್ವಿತಾ, ಕಾನ್ಸ್ ಟೇಬಲ್ ಸರೋಜಾ ಹೀಗೆ ಬಹುತೇಕ ಎಲ್ಲಾ ಪಾತ್ರಧಾರಿಗಳು ಬೇರೆ ಬೇರೆ ಸಿನಿಮಾದಲ್ಲಿ ತೊಡಗಿಕೊಂಡರು. ಆದ್ರೆ, ಸೂರಿ ಮಾತ್ರ ಸೈಲೆಂಟ್ ಹೊಸ ಪ್ರಾಜೆಕ್ಟ್ ಗೆ ರೆಡಿಯಾಗ್ತಿದ್ದರು.
ಧನಂಜಯ್ 'ಪಾಪ್ ಕಾರ್ನ್' ಚಿತ್ರಕ್ಕೆ ಹೀರೋಯಿನ್ ಇವರೇ.!
'ಟಗರು' ಚಿತ್ರದ ಯಶಸ್ಸಿನ ನಂತರ ಈಗ ನಿರ್ದೇಶಕ ದುನಿಯಾ ಸೂರಿ ಹೊಸ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಡೈರೆಕ್ಷನ್ ಕ್ಯಾಪ್ ತೊಟ್ಟು ಮತ್ತೆ ಫೀಲ್ಡ್ ಗೆ ಬಂದಿದ್ದಾರೆ. ಹೌದು, ದುನಿಯಾ ಸೂರಿ ನಿರ್ದೇಶನ ಮಾಡ್ತಿರುವ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮೊದಲ ದಿನದ ಚಿತ್ರೀಕರಣ ಆರಂಭವಾಗಿದೆ.
ಧನಂಜಯ್ ಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ಸ್ಟಾರ್ ನಿರ್ದೇಶಕನ ಮಗ.!
ಅಂದ್ಹಾಗೆ, 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಡಾಲಿ ಖ್ಯಾತಿಯ ಧನಂಜಯ್ ನಾಯಕನಾಗಿದ್ದು, ನಿವೇದಿತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಶ್ರೀನಿವಾಸ ಎಂಬ ಪಾತ್ರದಲ್ಲಿ ಧನಂಜಯ್ ಹಾಗೂ ದೇವಿಕಾ ಪಾತ್ರದಲ್ಲಿ ನಿವೇದಿತಾ ಬಣ್ಣ ಹಚ್ಚಲಿದ್ದಾರೆ.ಇವರ ಜೊತೆ ಸಪ್ತಮಿ ಹಾಗೂ ಅಮೃತಾ ಎಂಬ ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು
ಇನ್ನುಳಿದಂತೆ 'ಟಗರು' ಚಿತ್ರ ನಿರ್ಮಾಣ ಮಾಡಿದ್ದ ಕೆಪಿ ಶ್ರೀಕಾಂತ್ ಅವರೇ ಈ ಚಿತ್ರವನ್ನ ನಿರ್ಮಾಣ ಮಾಡಲಿದ್ದು, ಮಂಜು ಮಾಸ್ತಿ ಸಂಭಾಷಣೆ ಬರೆಯಲಿದ್ದಾರೆ. ಇನ್ನುಳಿದಂತೆ 'ಟಗರು' ಚಿತ್ರದ ತಂತ್ರಜ್ಞರೇ ಇಲ್ಲಿಯೂ ಕೆಲಸ ಮಾಡಲಿದ್ದಾರೆ.