ಧನಂಜಯ್ ಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ಸ್ಟಾರ್ ನಿರ್ದೇಶಕನ ಮಗ.!
Recommended Video

'ಟಗರು' ಚಿತ್ರದ ನಂತರ ಸ್ಪೆಷಲ್ ಸ್ಟಾರ್ ಧನಂಜಯ್, ದುನಿಯಾ ಸೂರಿ ನಿರ್ದೇಶನದ ಇನ್ನೊಂದು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಟೈಟಲ್ ನ್ನ ಇತ್ತೀಚಿಗಷ್ಟೆ ರಿವಿಲ್ ಮಾಡಿದ್ದು, 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರಿಡಲಾಗಿದೆ.
ಈ ಟೈಟಲ್ ನ ಒಳ ಅರ್ಥ ಮತ್ತು ಹೊರ ಅರ್ಥ ಸ್ಪಷ್ಟವಾಗಿ ಗೊತ್ತಿಲ್ಲದೇ ಇದ್ದರೂ ಇದೊಂದು ರೀತಿಯಲ್ಲಿ ತುಂಬಾ ವಿಶೇಷವಾಗಿದೆ. ಇದೇ ಟೈಟಲ್ ಯಾಕಿಟ್ಟರು ಮತ್ತು ಈ ಶೀರ್ಷಿಕೆ ಯಾರು ಕೊಟ್ಟಿದ್ದು ಎಂಬ ಕುತೂಹಲ ಕಾಡುವುದು ಸಹಜ.
'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಈ ಹೆಸರು ಸೂಚಿಸಿದ್ದು, ನಿರ್ದೇಶಕ ಸೂರಿ ಅವರ ಮಗ ಎನ್ನುವುದು ವಿಶೇಷ. ಸೂರಿ ಅವರು ತಮ್ಮ 6 ವರ್ಷದ ಮಗ ಪೃಥ್ವಿಗೆ ಹೇಳಿದ್ದ ಸಣ್ಣ-ಪುಟ್ಟ ಕತೆಗಳನ್ನೆಲ್ಲ ಸೇರಿ, ಅವರ ಮಗ ಒಂದು ಕಥೆ ಮಾಡಿದ್ರಂತೆ. ಅದಕ್ಕೆ ಹೆಸರೇನು ಎಂದು ಕೇಳಿದಾಗ, 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದಿದ್ದರಂತೆ. ಸರಿಯಾದ ಕಥೆ ಸಿಕ್ಕಾಗ ಈ ಟೈಟಲ್ ಇಟ್ಟಿಕೊಳ್ಳಲು ಚಿಂತಿಸಿದ್ದ ಸೂರಿ ಈಗ ಧನಂಜಯ್ ಚಿತ್ರಕ್ಕೆ ಬಳಸಿಕೊಂಡಿದ್ದಾರೆ.

ಇನ್ನುಳಿದಂತೆ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ 'ಶುದ್ಧಿ' ಖ್ಯಾತಿಯ ನಿವೇದಿತಾ ಅಭಿನಯಿಸುತ್ತಿದ್ದಾರೆ. ದೇವಿಕಾ ಎಂದು ಪಾತ್ರವದಲ್ಲಿ ನಿವೇದಿತಾ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
'ಟಗರು' ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ಅದೇ ತಂತ್ರಜ್ಞರು ಈ ಚಿತ್ರದಲ್ಲೂ ಮುಂದುವರೆಯಲಿದ್ದಾರಂತೆ. ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಲಿದ್ದು, 'ಟಗರು' ಚಿತ್ರ ಖ್ಯಾತಿಯ ಮಾಸ್ತಿ ಸಂಭಾಷಣೆಯ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಶೇಖರ್ ಎಸ್ ಕ್ಯಾಮೆರಾ ಮ್ಯಾನ್ ಆಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.


Click it and Unblock the Notifications











