ಡ್ರಿಂಕ್ ಅಂಡ್ ಡ್ರೈವ್ ನಲ್ಲಿ ಅರೆಸ್ಟ್ ಆದ ಬಾಲಿವುಡ್ ನಟ
ಒಂದು ಕಡೆ ಕನ್ನಡ ನಟ ದರ್ಶನ್ ಅವರಿಗೆ ಅಪಘಾತವಾಗಿದೆ. ಇನ್ನೊಂದು ಕಡೆ ಬಾಲಿವುಡ್ ನಟ ದಲಿಪ್ ತಾಹಿಲ್ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಭಾನುವಾರ ರಾತ್ರಿ ಕುಡಿದು ಕಾರು ಚಾಲಾಯಿಸುತ್ತಿದ್ದ ದಲಿಪ್ ತಾಹಿಲ್ ಮುಂಬೈ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಕುಡಿತ ಮತ್ತಿನಲ್ಲಿ ಕಾರಿನಲ್ಲಿ ಬರುತ್ತಿದ್ದ ದಲಿಪ್ ತಾಹಿಲ್ ಹಿಂದೆಯಿಂದ ಆಟೋಗೆ ಗುದ್ದಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಆಟೋದ ಒಳಗೆ ಕುಳಿತ್ತಿದ್ದ ಇಬ್ಬರು ಪ್ರಯಾಣಿಕರಿಗೆ ಗಾಯ ಆಗಿದೆ. ಈ ಬಗ್ಗೆ ಆ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಘಾತವಾದ ಸಮಯದಲ್ಲಿ ಗಣೇಶ ಮೆರವಣಿಗೆ ಕೂಡ ನಡೆಯುತ್ತಿದ್ದು, ಗಲಾಟೆಯ ನಡುವೆ ಈ ಕಾರಣ ಈ ರೀತಿಯ ಅವಘಡ ನಡೆದಿದೆ ಎಂದು ದಲಿಪ್ ತಾಹಿಲ್ ಹೇಳಿದ್ದಾರೆ.

65 ವರ್ಷದ ನಟ ದಲಿಪ್ ತಾಹಿಲ್ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. 1974ರಲ್ಲಿ ಅಂಕುರ್ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದ ದಲಿಪ್ ತಾಹಿಲ್ ಬಳಿಕ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
English summary
Popular Bollywood actor Dalip Tahil arrested in mumbai for drunk driving on yesterday (september 25th).


Click it and Unblock the Notifications