»   » ನೋಡಿ ಸ್ವಾಮಿ ಸ್ಯಾಂಡಲ್ ವುಡ್ ಅಪೂರ್ವ ಜೋಡಿ

ನೋಡಿ ಸ್ವಾಮಿ ಸ್ಯಾಂಡಲ್ ವುಡ್ ಅಪೂರ್ವ ಜೋಡಿ

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸಹೋದರರ ಜೋಡಿಗಳನ್ನ ನೋಡೋದೇ ಒಂದು ಖುಷಿ. ಒಬ್ಬರಿಗಿಂತ ಮತ್ತೊಬ್ಬರು ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ತಾರಾ ಜೋಡಿಗಳು ಇಲ್ಲಿದ್ದಾರೆ. ಒಬ್ಬೊಬ್ಬ ನಟರು ಒಂದೊಂದು ರೀತಿಯಲ್ಲಿ ಇಷ್ಟವಾಗ್ತಾರೆ.

ಅಂತಹಾ ಜೋಡಿಗಳಲ್ಲಿ ನಮ್ ಫೇವರಿಟ್ ಜೋಡಿ ಯಾವುದು ಅಂತ ನಾವೇ ನೋಡೋ ಸಮಯ ಇದು. ಎಷ್ಟೋ ಸಾರಿ ಓಹೋ ಒಂದೇ ತಾಯಿಯ ಮಕ್ಕಳು ಆದ್ರೂ ಎಷ್ಟೊಂದು ಡಿಫರೆಂಟ್ ಅಲ್ವಾ ಅಂತಾನೂ ಅನ್ನಿಸೋದೂ ಉಂಟು.

ಒಂದು ಕುಟುಂಬದಲ್ಲಿ ಅಣ್ಣ ತಮ್ಮ ಇಬ್ಬರಿದ್ರೆ, ಇಬ್ಬರೂ ಒಂದೇ ಪ್ರೊಫೆಷನ್ ಗೆ ಬರೋದೇ ತೀರಾ ಅಪರೂಪ. ಆದರೆ ಸ್ಯಾಂಡಲ್ ವುಡ್ ನಲ್ಲಿ ಒಂದೇ ಕುಟುಂಬದ ಎರಡು-ಮೂರು ಕುಡಿಗಳು ಚಿತ್ರರಂಗದಲ್ಲಿ ಮೋಡಿ ಮಾಡ್ತಿವೆ. ಆ ಜೋಡಿ ಮೇಲೊಮ್ಮೆ ಕಣ್ಣಾಡಿಸೋಣ ಬನ್ನಿ.

ಶಿವಣ್ಣ-ಪುನೀತ್-ರಾಘಣ್ಣ

ಡಾ.ರಾಜ್ ಪುತ್ರತ್ರಯರಾದ ಈ ಮೂವರು ಸ್ಟಾರ್ ಗಳು. ಒಬ್ಬರಿಗಿಂತ ಒಬ್ಬರು ಸಿಂಪಲ್. ನಯವಿನಯದ ಮೂರ್ತರೂಪಗಳು. ಶಿವಣ್ಣ, ಪುನೀತ್ ಒಳ್ಳೆಯ ಡಾನ್ಸರ್ ಗಳಾದ್ರೆ, ರಾಘಣ್ಣ ಸೂಪರ್ ಸಿಂಗರ್.

ಮುರಳಿ-ವಿಜಯ್ ರಾಘವೇಂದ್ರ

'ಉಗ್ರಂ' ಮುರಳಿ ಮತ್ತು ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಸ್ಯಾಂಡಲ್ ವುಡ್ ನ ಹ್ಯಾಂಡಸಮ್ ಬ್ರದರ್ಸ್. ಚಿನ್ನೇಗೌಡರ ಮಕ್ಕಳಾದ ಈ ಇಬ್ಬರೂ ಸೈಲೆಂಟ್ ಸ್ಟಾರ್ ಗಳು. ಸದ್ಯ ಮುರಳಿ ಅಭಿನಯದ 'ರಥಾವರ' ರೆಡಿಯಾಗ್ತಿದ್ರೆ ವಿಜಯ್ ರಾಘವೇಂದ್ರರ ನಿಮಗಾಗಿ, ಕಿಸ್ಮತ್, ರಣತಂತ್ರ ರಿಲೀಸ್ ಗೆ ತಯಾರಾಗ್ತಿವೆ.

ದರ್ಶನ್-ದಿನಕರ್

ಖ್ಯಾತ ಖಳನಟ ಶ್ರೀನಿವಾಸ್ ತೂಗುದೀಪ ಪುತ್ರದ್ವಯರು, ಚಾಲೆಂಜಿಂಗ್ ಸ್ಟಾರ್ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಆಗಿದ್ರೆ, ದಿನಕರ್ ಸ್ಟಾರ್ ನಿರ್ದೇಶಕ ಮತ್ತು ಡಿಸ್ಟ್ರಿಬ್ಯೂಟರ್ ಕೂಡ. ಈ ಇಬ್ಬರೂ ಆರಡಿಗಿಂತಲೂ ಹೆಚ್ಚು ಎತ್ತರವಿದ್ದು ಅಣ್ಣ ತಮ್ಮಂದಿರಿಗಿಂತ ಒಳ್ಳೆಯ ಗೆಳೆಯರು.

ಚಿರು-ಧ್ರುವ ಸರ್ಜಾ

ಸ್ಯಾಂಡಲ್ ವುಡ್ ನ ಹಾಟ್ ಅಂಡ್ ಹ್ಯಾಪನಿಂಗ್ ಯಂಗ್ ಸ್ಟಾರ್ಸ್ ಧ್ರುವ ಸರ್ಜಾ, ಚಿರು ಸರ್ಜಾ. ನಿಧಾನಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಪಟ್ಟಕ್ಕೆ ಲಗ್ಗೆ ಇಡ್ತಿರೋ ಈ ಯಂಗ್ ಹೀರೋಸ್. ಇವತ್ತಿನ ಹುಡ್ಗಿಯರ ಫೇವರೀಟ್ ಯಂಗ್ ಹೀರೋಸ್.

ಶರಣ್-ಶ್ರುತಿ

ಶರಣ್ ಮತ್ತು ಶ್ರುತಿ ಇವರಿಬ್ಬರಲ್ಲಿ ಶ್ರುತಿ ಅಕ್ಕ ಶರಣ್ ತಮ್ಮ ಅನ್ಕೊಂಡವರೇ ಹೆಚ್ಚು. ಆದ್ರೆ ಶ್ರುತಿ ಅವರಿಗೆ ಶರಣ್ ಅಣ್ಣ. ಶ್ರುತಿ 90ರ ದಶಕದಿಂದ್ಲೇ ದೊಡ್ಡ ಹೀರೋಯಿನ್ ಆಗಿ ಬೆಳೆದ್ರೆ ಶರಣ್ 2012ರ ನಂತ್ರ ಸ್ಟಾರ್ ನಟನ ಪಟ್ಟಕ್ಕೆ ಲಗ್ಗೆ ಇಡ್ತಿದ್ದಾರೆ.

ಸಾಧು-ಲಯ

ಸಾಧು ಕೋಕಿಲ ಕನ್ನಡದ ಕಾಮಿಡಿ ಕಿಂಗ್, ಸಾಧು ಕನ್ನಡದಲ್ಲಿ ಗೆದ್ದು ಮೋಡಿ ಮಾಡಿದ ಹಲವು ವರ್ಷಗಳ ನಂತ್ರ ಎಂಟ್ರಿಕೊಟ್ಟ ಲಯ ಕೋಕಿಲ ಈಗ ಕನ್ನಡ ಚಿತ್ರಪ್ರೇಮಿಗಳನ್ನ ನಗಿಸ್ತಿದ್ದಾರೆ. ಆದ್ರೆ ಈ ಇಬ್ಬರೂ ಸಂಗೀತ ನಿರ್ದೇಶನ ಮಾಡೋದ್ರಲ್ಲಿ ಪರಿಣಿತರು ಅನ್ನೋದು ಹಲವರಿಗೆ ಗೊತ್ತಿಲ್ಲ.

ರಚಿತಾ-ನಿತ್ಯಾ

ಬುಲ್ ಬುಲ್ ಬೆಡಗಿ ರಚಿತಾರಾಮ್ ಸ್ಯಾಂಡಲ್ ವುಡ್ ಸಿನಿಪ್ರೇಮಿಗಳ ಮನದರಸಿಯಾಗಿ ಮಿಂಚಿದ ನಂತ್ರ ರಚಿತಾ ಅಕ್ಕ ನಿತ್ಯಾರಾಮ್ ಗೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡೋ ಅವಕಾಶ ಸಿಕ್ಕಿದೆ.

ಜಗ್ಗೇಶ್ ಕೋಮಲ್

ಕನ್ನಡದ ನವರಸನಾಯಕ ಜಗ್ಗೇಶ್ ಒಂದೊಂದೇ ಸಿನಿಮಾ ಮೂಲಕ ಯಶಸ್ಸಿನ ಉನ್ನತಿಗೇರಿದ ನಟ. ಅವರ ಹಾದಿಯಲ್ಲೇ ಕೋಮಲ್ ಕಾಮಿಡಿಯರ ಮೆಚ್ಚಿನ ನಟರಾಗಿ ಮಿಂಚಿದ್ರು. ಸದ್ಯ ಒಂದು ದೊಡ್ಡ ಗೆಲುವಿಗಾಗಿ ಕೋಮಲ್ ಎದುರು ನೋಡ್ತಿದ್ದಾರೆ.

English summary
Sandalwood have a few lovely siblings, who have turned as the role model for the present generation, by supporting each other in their growth. Be it from the Kannada's cultural icon Dr Rajkumar's family to present Sarja's family, Kannada film industry is filled with the such a lovely celebrity siblings, who share the strongest sibling bond.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada