twitter
    For Quick Alerts
    ALLOW NOTIFICATIONS  
    For Daily Alerts

    ಖ್ಯಾತ ಹಾಸ್ಯ ಲೇಖಕ, ಅಂಕಣಕಾರ ತಾರಕ್ ಮೆಹ್ತಾ ಇನ್ನಿಲ್ಲ

    By Suneel
    |

    ಭಾರತದ ಅಂಕಣಕಾರ, ಹಾಸ್ಯ ಲೇಖಕ ಖ್ಯಾತ ನಾಟಕಕಾರರು ಆದ ತಾರಕ್ ಮೆಹ್ತಾ (87) ಇಂದು (ಮಾರ್ಚ್ 1)ನಿಧನರಾಗಿದ್ದಾರೆ. ಇವರು ಗುಜರಾತಿ ಭಾಷೆಯ 'ದುನಿಯಾ ನೇ ಅಂಧ ಚಶ್ಮಾ' ಎಂಬ ಅಂಕಣಬರಹದಿಂದ ಪ್ರಖ್ಯಾತರಾಗಿದ್ದರು.

    ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ತಾರಕ್ ಮೆಹ್ತಾ ಇಹಲೋಕ ತ್ಯಜಿಸಿರುವುದಕ್ಕೆ, ಸಾಹಿತ್ಯ, ರಾಜಕೀತಯ ಮತ್ತು ಮಾಧ್ಯಮ ಕ್ಷೇತ್ರದ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಇವರ ಮೊದಲ ಹಾಸ್ಯ ಅಂಕಣ ಬರಹ 1971 ರಲ್ಲಿ ಚಿತ್ರಲೇಖ ಮ್ಯಾಗಜೀನ್ ನಲ್ಲಿ ಪ್ರಕಟವಾಗಿತ್ತು.

    Popular Columnist, Humorist Taarak Mehta no more

    2008 ರಲ್ಲಿ ಸಾಬ್ ಟಿವಿ ತಾರಕ್ ಮೆಹ್ತಾ ಅವರ ಅಂಕಣ ಆಧಾರಿತ ಶೋ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಆರಂಭಿಸಿದ್ದರು. ಈ ಶೋ'ನಿಂದಾಗಿ ಚಾನೆಲ್ ಪ್ರಖ್ಯಾತಗೊಂಡಿತ್ತು. ತಾರಕ್ ಮೆಹ್ತಾ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆಗೆ 2011 ರಲ್ಲಿ ಗುಜರಾತ್ ಸಾಹಿತ್ಯ ಆಕಾಡೆಮಿ ನೀಡುವ 'ಸಾಹಿತ್ಯ ಗೌರವ ಪುರಸ್ಕಾರ' ಪ್ರಶಸ್ತಿ, 2015 ರಲ್ಲಿ 'ಪದ್ಮಶ್ರೀ' ಪ್ರಶಸ್ತಿ, ಮತ್ತು 2017 ರಲ್ಲಿ 'ರಮಣ್ ಲಾಲ್ ನಿಲಕಂಠ ಹಾಸ್ಯ ಪಾರಿತೋಷಕ' ಪ್ರಶಸ್ತಿ ಲಭಿಸಿವೆ.

    ತಾರಕ್ ಮೆಹ್ತಾ ನಿಧನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದುಃಖ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ 16 ವರ್ಷಗಳಿಂದ ಅಹ್ಮದಾಬಾದ್ ನಲ್ಲಿ ನೆಲೆಸಿದ್ದ ತಾರಕ್ ಅವರು ಇಂದು(ಮಾರ್ಚ್ 1) ತಮ್ಮ ಓರ್ವ ಪುತ್ರಿಯನ್ನು ಅಗಲಿದ್ದಾರೆ.

    English summary
    An Indian columnist, humorist, writer and playwright, Taarak Mehta, who was also known for the popular column 'Duniya Ne Undha Chashma' in Gujarati language, passed away at the age of 87
    Wednesday, March 1, 2017, 18:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X