ಶಾರ್ಟ್ ಹೇರ್ ಸ್ಟೈಲ್ ನ ಈ ನಟಿಯರನ್ನು ನೋಡಿದ್ರೆ ಜೀವ ಝಲ್ ಅಂತದೇ

ಹೆಣ್ಣು ಮಕ್ಕಳಿಗೆ ಅವರ ಕೂದಲಿನ ಮೇಲೆ ಬಹಳ ಪ್ರೀತಿ ಇರುತ್ತದೆ. ಇನ್ನು ಸಿನಿಮಾ ನಟಿಯರಂತೂ ತಮ್ಮ ಕೇಶ ರಾಶಿಗೆ ತುಂಬ ಆರೈಕೆ ಮಾಡುತ್ತಾರೆ. ಸಿನಿಮಾಗಳ ಪಾತ್ರಕ್ಕೆ ಅಥವಾ ತಮ್ಮ ಇಷ್ಟಕ್ಕೆ ತಕ್ಕ ಹಾಗೆ ಆಗಾಗ ಹೇರ್ ಸ್ಟೈಲ್ ಬದಲಿಸಿಕೊಳ್ಳುತ್ತಾರೆ.

ಕೆಲವು ನಟಿಯರಿಗೆ ಉದ್ದ ಕೂದಲು ಬಿಡುವುದು ಇಷ್ಟ. ಇನ್ನು ಕೆಲವು ನಟಿಯರು ತಮ್ಮ ಕೂದಲಿಗೆ ಆಗಾಗ ಕತ್ತರಿ ಹಾಕುತ್ತಾರೆ. ಅದರಲ್ಲಿಯೂ ಅನೇಕ ನಟಿಯರಿಗೆ ಶಾರ್ಟ್ ಹೇರ್ ಸ್ಟೈಲ್ ಬಹಳ ಇಷ್ಟ. ಅದು ಅವರಿಗೆ ಕೆಲವು ನಟಿಯರಿಗೆ ತುಂಬ ಚೆನ್ನಾಗಿ ಕಾಣುತ್ತಿದೆ.

ಕನ್ನಡದ ನಟಿ ಹರಿಪ್ರಿಯಾ, ಇತರ ಭಾಷೆಯ ನಟಿಯರಾದ ಸಮಂತಾ, ಪಾರ್ವತಿ, ಅನುಷ್ಕಾ ಶರ್ಮಾ, ಅಕ್ಷರ ಹಾಸನ್, ಕಂಗಾನ ರಣವತ್, ಯಾಮಿ ಗೌತಮ್, ಸಾಯಿ ಧನ್ಸಿಕಾ, ಓವಿಯಾ ಹೀಗೆ ಈ 10 ಶಾರ್ಟ್ ಹೇರ್ ಸ್ಟೈಲ್ ಸುಂದರಿಯರನ್ನು ನೋಡಿದರೆ ಅಭಿಮಾನಿಗಳ ಜೀವ ಜಲ್ ಅಂತಿದೆ. ಮುಂದೆ ಓದಿ....

ಹರಿಪ್ರಿಯಾಗೆ ಹೊಸ ರೂಪ

ಹರಿಪ್ರಿಯಾಗೆ ಹೊಸ ರೂಪ

ನಟಿ ಹರಿಪ್ರಿಯಾ ವಿಭಿನ್ನ ಪಾತ್ರಗಳನ್ನು ಸದಾ ಹುಡುಕುವ ನಟಿ. ತಮ್ಮ 25ನೇ ಸಿನಿಮಾವಾದ 'D/O ಪಾರ್ವತಮ್ಮ' ನಲ್ಲಿ ಹರಿಪ್ರಿಯಾ ಸಿಐಡಿ ಆಫೀಸರ್ ಪಾತ್ರ ಮಾಡಿದ್ದರು. ಈ ಸಿನಿಮಾಗಾಗಿ ಅವರು ತಮ್ಮ ಹೇರ್ ಸ್ಟೈಲ್ ಬದಲು ಮಾಡಿದ್ದರು. ಶಾರ್ಟ್ ಹೇರ್ ನಲ್ಲಿ ತೆರೆ ಮೇಲೆ ಕಾಣಿಸಿಕೊಂಡರು. ಅವರಿಗೆ ಈ ಕೇಶ ವಿನ್ಯಾಸ ಹೊಸ ರೂಪ ನೀಡಿತ್ತು.

ಬದಲಾಗುತ್ತದೆ ಇರುತ್ತದೆ ಸಮಂತಾ ಹೇರ್ ಸ್ಟೈಲ್

ಬದಲಾಗುತ್ತದೆ ಇರುತ್ತದೆ ಸಮಂತಾ ಹೇರ್ ಸ್ಟೈಲ್

ಸೌತ್ ಸುಂದರಿ ಸಮಂತಾ ತಮ್ಮ ಕೂದಲಿನ ಮೇಲೆ ಪ್ರಯೋಗ ಮಾಡುತ್ತಲೇ ಇರುತ್ತಾರೆ. 'ಯೂ ಟರ್ನ್' ಸಿನಿಮಾಗಾಗಿ ಸಮಂತಾ ಶಾರ್ಟ್ ಹೇರ್ ಸ್ಟೈಲ್ ನಲ್ಲಿ ಮಿಂಚಿದರು. ಸದ್ಯ, ನಟಿಸುತ್ತಿರುವ 'ಓ ಬೇಬಿ' ಸಿನಿಮಾದಲ್ಲಿಯೂ ಅವರ ಕೇಶ ವಿನ್ಯಾಸ ಹಾಗೆಯೇ ಮುಂದುವರೆದಿದೆ. ಇದರಿಂದ ಸಮಂತಾ ಸೌಂದರ್ಯ ಮತ್ತಷ್ಟು ಜಾಸ್ತಿಯಾಗಿದೆ.

ಸಖತ್ ಸ್ಟೈಲಿಷ್ ಆದ ಓವಿಯಾ

ಸಖತ್ ಸ್ಟೈಲಿಷ್ ಆದ ಓವಿಯಾ

'ಕಿರಾತಕ' ಸಿನಿಮಾದಲ್ಲಿ ನಟಿಸಿದ್ದ ಓವಿಯಾ ಈಗ ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿದ್ದಾರೆ. ಅವರು ಕೂಡ ಶಾರ್ಟ್ ಹೇರ್ ಸ್ಟೈಲ್ ಗೆ ಮಾರು ಹೋಗಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಅವರ ಸಿನಿಮಾಗಳಲ್ಲಿ ಅದೇ ಸ್ಟೈಲ್ ಮುಂದುವರೆದಿದೆ. ಈ ಕೇಶ ವಿನ್ಯಾಸದಲ್ಲಿ ಓವಿಯಾ ಡಿಫರೆಂಟ್ ಆಗಿ ಕಾಣುತ್ತಾರೆ.

ಪಾರ್ವತಿಯ ಪಾತ್ರಕ್ಕೆ ತಕ್ಕ ಕೇಶ ವಿನ್ಯಾಸ

ಪಾರ್ವತಿಯ ಪಾತ್ರಕ್ಕೆ ತಕ್ಕ ಕೇಶ ವಿನ್ಯಾಸ

ನಟಿ ಪಾರ್ವತಿ ಪ್ರತಿ ಸಿನಿಮಾದಲ್ಲಿಯೂ ಒಂದು ಹೊಸತನದ ಪಾತ್ರವನ್ನು ಕಾಣಿಸಿಕೊಳ್ಳುತ್ತಾರೆ. ಪಾರ್ವತಿ ಕೆರಿಯರ್ ನ ಬೆಸ್ಟ್ ಸಿನಿಮಾಗಳ ಪೈಕಿ ಒಂದಾದ 'ಬೆಂಗಳೂರು ಡೇಸ್' ಚಿತ್ರದಲ್ಲಿ ಅವರ ಲುಕ್ ವಿಶೇಷವಾಗಿತ್ತು. ಒಂದು ಚಾಲೆಂಜಿಂಗ್ ಪಾತ್ರವನ್ನು ನಿರ್ವಹಿಸಿದ್ದ ಅವರು ಶಾರ್ಟ್ ಹೇರ್ ನಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರಕ್ಕೆ ಆ ಹೇರ್ ಸ್ಟೈಲ್ ತುಂಬ ಚೆನ್ನಾಗಿ ಹೋಲಿಕೆ ಆಯ್ತು.

'ಕೋಟಿಗೊಬ್ಬ 3' ನಟಿ ಶ್ರದ್ಧಾ ದಾಸ್

'ಕೋಟಿಗೊಬ್ಬ 3' ನಟಿ ಶ್ರದ್ಧಾ ದಾಸ್

ದಕ್ಷಿಣ ಭಾರತದ ಮತ್ತೊಬ್ಬ ನಟಿ ಶ್ರದ್ಧಾ ದಾಸ್ ಈಗ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರದ ಒಂದು ಪಾತ್ರದಲ್ಲಿ ಶ್ರದ್ಧಾ ದಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಮೇಕಿಂಗ್ ಫೋಟೋಗಳು ಹೊರ ಬಂದಿದ್ದು, ಶ್ರದ್ಧಾ ದಾಸ್ ಚಿತ್ರದಲ್ಲಿ ಶಾರ್ಟ್ ಹೇರ್ ಸ್ಟೈಲ್ ನಲ್ಲಿ ಮಿಂಚಿಲಿದ್ದಾರೆ.

'ಕಬಾಲಿ'ಯಲ್ಲಿ ಸಾಯಿ ಧನ್ಸಿಕಾ ಖದರ್

'ಕಬಾಲಿ'ಯಲ್ಲಿ ಸಾಯಿ ಧನ್ಸಿಕಾ ಖದರ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕಬಾಲಿ' ಸಿನಿಮಾ ನೋಡಿದವರು ಸಾಯಿ ಧನ್ಸಿಕಾ ಪಾತ್ರವನ್ನು ಮರೆಯಲು ಸಾಧ್ಯ ಇಲ್ಲ. ಈ ಸಿನಿಮಾದಲ್ಲಿ ನಟಿ ಸಾಯಿ ಧನ್ಸಿಕಾ ಮೊದಲ ಬಾರಿಗೆ ಸಂಪೂರ್ಣ ಬದಲಾದ ಗೆಟಪ್ ನಲ್ಲಿ ದರ್ಶನ ನೀಡಿದ್ದರು. ಅವರ ಪಾತ್ರದ ಹೈಲೈಟ್ ಅವರ ಶಾರ್ಟ್ ಹೇರ್ ಸ್ಟೈಲ್ ಆಗಿತ್ತು.

'ಪಿಕೆ' ಪ್ರೇಯಸಿ ಅನುಷ್ಕಾ ಶರ್ಮ

'ಪಿಕೆ' ಪ್ರೇಯಸಿ ಅನುಷ್ಕಾ ಶರ್ಮ

ಭಾರತದ ಬಾಕ್ಸ್ ಆಫೀಸ್ ನ ದೊಡ್ಡ ಚಿತ್ರಗಳಲ್ಲಿ ಒಂದಾದ 'ಪಿಕೆ'ಗೆ ನಾಯಕಿಯಾಗಿದ್ದು ಅನುಷ್ಕಾ ಶರ್ಮ. ಈ ಸಿನಿಮಾದಲ್ಲಿ ಅವರು ತುಂಬ ಕ್ಯೂಟ್ ಆಗಿ ಕಾಣುತ್ತಿದ್ದರು. ಅವರ ಪಾತ್ರದ ಲುಕ್ ಗಾಗಿ ತುಂಬ ಪ್ಲಾನ್ ಮಾಡಿ ಶಾರ್ಟ್ ಹೇರ್ ಸ್ಟೈಲ್ ಮಾಡಿಸಲಾಗಿತ್ತು. ಪಿಕೆಯ ಪ್ರಿಯತಮೆ ಸ್ವೀಟ್ ಆಗಿದ್ದರು.

'ಶಮಿತಾಬ್' ನಲ್ಲಿ ಅಕ್ಷರಾ ಹಾಸನ್

'ಶಮಿತಾಬ್' ನಲ್ಲಿ ಅಕ್ಷರಾ ಹಾಸನ್

ಕಮಲ್ ಹಾಸನ್ ಎರಡನೇ ಪುತ್ರಿ ಅಕ್ಷರ ಹಾಸನ್ ಚಿತ್ರರಂಗಕ್ಕೆ ಬಂದಿದ್ದು, 'ಶಮಿತಾಬ್' ಸಿನಿಮಾದ ಮೂಲಕ. ಈ ಹಿಂದಿ ಸಿನಿಮಾದಲ್ಲಿ ಅಮಿತಾಭ್ ಹಾಗೂ ಧನುಷ್ ಜೊತೆಗೆ ಅಕ್ಷರ ಕಾಣಿಸಿಕೊಂಡಿದ್ದರು. ಅವರ ಶಾರ್ಟ್ ಹೇರ್ ಸ್ಟೈಲ್ ಲುಕ್ ಅಭಿಮಾನಿಗಳಿಗೆ ಬಹಳ ಇಷ್ಟ ಆಗಿತ್ತು.

ಬದಲಾದ ಲುಕ್ ನಲ್ಲಿ ಕಂಗನಾ

ಬದಲಾದ ಲುಕ್ ನಲ್ಲಿ ಕಂಗನಾ

ನಟಿ ಕಂಗನಾ ನಟನೆಯ ಬೆಸ್ಟ್ ಸಿನಿಮಾಗಳಲ್ಲಿ ಒಂದು 'ತನು ವೆಡ್ಸ್ ಮನು'. ಈ ಸಿನಿಮಾ ಮತ್ತೊಂದು ಅವತರಣಿಕೆ 'ತನು ವೆಡ್ಸ್ ಮನು ರಿಟನ್ಸ್'. ಈ ಚಿತ್ರದಲ್ಲಿ ಕಂಗನಾ ಲುಕ್ ಹಿಂದಿನ ಸಿನಿಮಾಗಳಿಗಿಂತ ಬೇರೆ ರೀತಿ ಇತ್ತು. ಹೇರ್ ಕಟ್ ಮಾಡಿಸಿಕೊಂಡ ಕಂಗನಾ ಶಾರ್ಟ್ ಹೇರ್ ಹೊಂದಿದ್ದರು.

ಯಾಮಿ ಗೌತಮ್ ಗೆ ಶಾರ್ಟ್ ಹೇರ್ ಅಂದರೆ ಇಷ್ಟ

ಯಾಮಿ ಗೌತಮ್ ಗೆ ಶಾರ್ಟ್ ಹೇರ್ ಅಂದರೆ ಇಷ್ಟ

ನಟಿ ಯಾಮಿ ಗೌತಮ್ ಗೆ ಶಾರ್ಟ್ ಹೇರ್ ಅಂದರೆ ಬಹಳ ಇಷ್ಟ. ಅದೇ ಕಾರಣಕ್ಕೆ ಅವರು ಹೆಚ್ಚಾಗಿ ಅದೇ ಸ್ಟೈಲ್ ನಲ್ಲಿಯೇ ಇರುತ್ತಾರೆ. ಬೇಸಿಗೆಯಲ್ಲಿ ಈ ಹೇರ್ ಸ್ಟೈಲ್ ಕೂಲ್ ಆಗಿ ಇರುತ್ತದೆ, ಸಣ್ಣ ಕೂದಲು ಇದ್ದರೆ ಕಿರಿ ಕಿರಿ ಇರುವುದಿಲ್ಲ ಎಂದು ಯಾಮಿ ಗೌತಮ್ ಹೇಳುತ್ತಾರೆ.

More from Filmibeat

English summary
Popular indian actress who like short hairstyle. Samantha, Haripirya and many have heroines short hairstyle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X