»   » 'ರಾಜಕುಮಾರ'ನಂತೆ ಪೋಸ್ ಕೊಡಿ, ಬಂಪರ್ ಬಹುಮಾನ ಗೆಲ್ಲಿ

'ರಾಜಕುಮಾರ'ನಂತೆ ಪೋಸ್ ಕೊಡಿ, ಬಂಪರ್ ಬಹುಮಾನ ಗೆಲ್ಲಿ

Posted By:
Subscribe to Filmibeat Kannada

'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅಭಿಮಾನಿಗಳಿಗಾಗಿ ಒಂದು ಸ್ವರ್ಧೆ ನಡೆಸುತ್ತಿದ್ದಾರೆ. ಅದೇನಪ್ಪಾ ಅಂದ್ರೆ, 'ಪೋಸ್ ಲೈಕ್ ರಾಜಕುಮಾರ'.

ಅಂದ್ರೆ, 'ರಾಜಕುಮಾರ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಒಂದು ಪೋಸ್ ಕೊಟ್ಟಿದ್ದಾರೆ. ಈ ಪೋಸ್ಟರ್ ನಲ್ಲಿ ಪುನೀತ್ ಅವರು ಕೊಟ್ಟರಿವ ಪೋಸ್ ನಂತೆ, ಯಾರು ಉತ್ತಮವಾಗಿ ಪೋಸ್ ಕೊಡ್ತಾರೋ ಅಂತವರಿಗೆ ಸೂಕ್ತ ಬಹುಮಾನ ನೀಡಲಿದ್ದಾರಂತೆ.[ತೆರೆ ಹಿಂದಿನ 'ರಾಜಕುಮಾರ'ನಲ್ಲಿ ಕಾಣುತ್ತಾರೆ 'ಡಾ.ರಾಜ್ ಕುಮಾರ್'!]

ಅಂದ್ಹಾಗೆ, 'ರಾಜಕುಮಾರ' ಚಿತ್ರದ ಈ ಪೋಸ್ ಗೆ ಒಂದು ಇತಿಹಾಸನೇ ಇದೆ. ಅಷ್ಟಕ್ಕೂ, ಆ ಪೋಸ್ ಯಾವುದು ಅಂತ ಮುಂದೆ ನೋಡಿ...

'ರಾಜಕುಮಾರ' ಚಿತ್ರದ ಆ ಪೋಸ್ ಇದೆ!

'ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕೊಟ್ಟಿರುವ ಪೋಸ್ ಇದೆ. ಬಾಗಿಲಿಗೆ ಒರಗಿಕೊಂಡು ನಿಂತಿರುವ ಈ ಪೋಸ್ ಈಗ ಸೋಶಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.[ಪರಭಾಷೆಯಲ್ಲಿ 'ರಾಜಕುಮಾರ'ನ ಹವಾ ಹೇಗಿದೆ ನೋಡಿ ಸ್ವಾಮಿ!]

'ಕಸ್ತೂರಿ ನಿವಾಸ'ದಲ್ಲಿ ಡಾ.ರಾಜ್ ನೀಡಿದ್ದ ಪೋಸ್!

ಅಂದ್ಹಾಗೆ, 'ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಿಂತಿರುವ ಪೋಸ್ ಮತ್ತು 'ಕಸ್ತೂರಿ ನಿವಾಸ'ದಲ್ಲಿ ಡಾ.ರಾಜ್ ಕುಮಾರ್ ನಿಂತಿರುವ ಪೋಸ್ ಒಂದೇ. ಅಂದು ರಾಜ್ ಕುಮಾರ್ ಕೊಟ್ಟಿದ್ದ ಪೋಸ್ ನಲ್ಲಿ ಇಂದು ಪುನೀತ್ ರಾಜ್ ಕುಮಾರ್ ಮಿಂಚಿದ್ದಾರೆ.['ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ರೋಮಾಂಚನಗೊಂಡ ಜಗ್ಗೇಶ್!]

ಅಭಿಮಾನಿಗಳ ನೆಚ್ಚಿನ ಪೋಸ್!

'ರಾಜಕುಮಾರ' ಚಿತ್ರದಲ್ಲಿನ ಅಪ್ಪು ಅವರ ಪೋಸ್ ನಂತೆ, ಈಗ ಅವರ ಅಭಿಮಾನಿಗಳು ಕೂಡ ಅದೇ ಸ್ಟೈಲ್ ನಲ್ಲಿ ಪೋಸ್ ಕೊಡ್ತಿದ್ದಾರೆ.['ರಾಜಕುಮಾರ' ಚಿತ್ರದ ಕಡೆಯಿಂದ ಬಂದ ಸಿಹಿ ಸುದ್ದಿ ಇದು..]

ಎಲ್ಲೆಲ್ಲೂ 'ಪೋಸ್ ಲೈಕ್ ರಾಜಕುಮಾರ' ಕ್ರೇಜ್!

ಸಂತೋಷ್ ಆನಂದ್ ರಾಮ್ ಅವರು ಘೋಷಿಸಿರುವಂತೆ 'ಪೋಸ್ ಲೈಕ್ ರಾಜಕುಮಾರ' ಸ್ವರ್ಧೆಗೆ ಸಖತ್ ರೆಸ್ ಪಾನ್ಸ್ ಸಿಕ್ಕಿದ್ದು, ಅಭಿಮಾನಿಗಳು 'ರಾಜಕುಮಾರ' ಪೋಸ್ ನಲ್ಲಿರುವ ಪೋಸ್ ಗಳನ್ನ ಪೋಸ್ಟ್ ಮಾಡುತ್ತಿದ್ದಾರೆ.[ವಿಡಿಯೋ: 'ರಾಜಕುಮಾರ'ನ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ]

ಮೊದಲು ಪೋಸ್ ಕೊಟ್ಟಿದ್ದು ಶಿವರಾಜ್ ಕುಮಾರ್!

'ಪೋಸ್ ಲೈಕ್ ರಾಜಕುಮಾರ' ಸ್ವರ್ಧೆಯನ್ನ ನಡೆಸಬೇಕು ಎಂಬ ಕಲ್ಪನೆ ಬಂದ ಮೇಲೆ, ಈ ಪೋಸ್ ಮೊದಲು ಕೊಟ್ಟಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'! ]

ಅತ್ಯುತ್ತಮ ಪೋಸ್ ಗೆ ಬಹುಮಾನ!

'ಪೋಸ್ ಲೈಕ್ ರಾಜಕುಮಾರ' ಸ್ವರ್ಧೆಯಲ್ಲಿ ಯಾವ ಪೋಸ್ ಅತ್ಯುತ್ತಮವಾಗಿರುತ್ತೋ ಆ ಪೋಸ್ ಗೆ ಚಿತ್ರತಂಡದದಿಂದ ಬಂಪರ್ ಬಹುಮಾನವೊಂದು ಸಿಗಲಿದೆ.

ಬಹುಮಾನ ಏನು ಗೊತ್ತಾ?

'ರಾಜಕುಮಾರ' ಚಿತ್ರದಲ್ಲಿ ಬಳಸಲಾಗಿರುವ ಬೊಂಬೆಯನ್ನ 'ಪೋಸ್ ಲೈಕ್ ರಾಜಕುಮಾರ' ಸ್ವರ್ಧೆಯಲ್ಲಿ ಗೆದ್ದವರಿಗೆ ಬಹುಮಾನವಾಗಿ ನೀಡುವುದಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.

ಪೋಸ್ ಕೊಟ್ಟು ಬೊಂಬೆ ಗೆಲ್ಲಿ!

'ರಾಜಕುಮಾರ'ನಂತೆ ಪೋಸ್ ಕೊಟ್ಟು, ಚಿತ್ರದಲ್ಲಿ ಬಳಸಲಾಗಿರುವ ಬೊಂಬೆಯನ್ನ ಉಡುಗೊರೆಯಾಗಿ ಗೆಲ್ಲಬಹುದು. ನೀವು ಕೂಡ ಪೋಸ್ ಕೊಟ್ಟು, ಬೊಂಬೆ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ.

English summary
Raajakumara Movie Director Santhosh Anandram Conduct A Contest on Raajakumara Pose. Called 'PoselikeRaajakumara'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada