For Quick Alerts
  ALLOW NOTIFICATIONS  
  For Daily Alerts

  ರಾಜ್‌ಕುಮಾರ್ ಬಗ್ಗೆ ಅವಹೇಳನ: ಪತ್ರಿಕಾ ಸಂಪಾದಕನ ವಿರುದ್ಧ ನಮ್ಮ ಕರವೇ ದೂರು

  |

  ಡಾ.ರಾಜ್‌ಕುಮಾರ್ ಅವರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆಂದು ರಾಜ್ಯದ ದಿನಪತ್ರಿಕೆಯೊಂದರ ಸಂಪಾದಕರ ಮೇಲೆ ನಮ್ಮ ಕರವೇ ಸಂಘಟನೆ ದೂರು ದಾಖಲಿಸಿದೆ.

  ಪ್ಯಾಂಟ್ ಶರ್ಟ್ ರೀತಿಯಲ್ಲಿ ಮಾಸ್ಕ್ ಕೂಡ ಧರಿಸಿ ಎಂದ ಅಭಿಷೇಕ್ ಅಂಬರೀಷ್ | Abishek Ambarish

  ನಮ್ಮ ಕರ್ನಾಟಕ ರಕ್ಷಣಾ ವೇದಿಕೆಗೆ ಸಂಬಂಧಿಸಿದ ಲಯನ್ ಜಯರಾಜ್ ನಾಯ್ಡು ಎಂಬುವರು ಸದಾಶಿವ ನಗರದಲ್ಲಿ ದಿನಪತ್ರಿಕೆ ಸಂಪಾದಕ ಬಶೀರ್ ಅವರ ಮೇಲೆ ದೂರು ದಾಖಲಿಸಿದ್ದು, ಪೊಲೀಸರು ಎನ್‌ಸಿಆರ್‌ (Non-Cognizable Report) ದಾಖಲಿಸಿಕೊಂಡಿದ್ದಾರೆ.

  ನಿರ್ದೇಶಕ ಭಗವಾನ್ ಅವರ ಸಂದರ್ಶನದ ವಿಡಿಯೋ ತುಣುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಕೆಲವು ಚರ್ಚೆಗಳು ಎದ್ದು, ಅದು ಪೊಲೀಸ್‌ ದೂರಿನ ವರೆಗೂ ತಲುಪಿದೆ.

  ಘಟನೆಯ ಹಿನ್ನೆಯೆ ಏನು?

  ಘಟನೆಯ ಹಿನ್ನೆಯೆ ಏನು?

  'ಸಾಹಿತಿ ಭೈರಪ್ಪ ಅವರು, 'ರಾಜ್‌ಕುಮಾರ್ ಒಬ್ಬ ನಟನೇನ್ರಿ' ಎಂದಿದ್ದರು' ಎಂದು ಭಗವಾನ್ ಹೇಳಿದ್ದರು. ಆ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚಿತವಾಗಿ, ರಾಜ್‌ ಕುಮಾರ್ ಅಭಿಮಾನಿಗಳು ಭೈರಪ್ಪ ವಿರುದ್ಧ ಪೋಸ್ಟ್‌ಗಳನ್ನು ಹಾಕಿದ್ದರು.

  ರಾಜ್ ಕುಮಾರ್ ಒಬ್ಬ ಆಕ್ಟರ್‌ ಏನ್ರೀ? ಎಂದಿದ್ದರು ಎಸ್.ಎಲ್. ಭೈರಪ್ಪ: ವಿವಾದ ಸೃಷ್ಟಿಸಿದ ವಿಡಿಯೋರಾಜ್ ಕುಮಾರ್ ಒಬ್ಬ ಆಕ್ಟರ್‌ ಏನ್ರೀ? ಎಂದಿದ್ದರು ಎಸ್.ಎಲ್. ಭೈರಪ್ಪ: ವಿವಾದ ಸೃಷ್ಟಿಸಿದ ವಿಡಿಯೋ

  ಮಹಿಳೆಯೊಬ್ಬರು ವೈಯಕ್ತಿಕ ಅಭಿಪ್ರಾಯ ಪೋಸ್ಟ್ ಮಾಡಿದ್ದರು

  ಮಹಿಳೆಯೊಬ್ಬರು ವೈಯಕ್ತಿಕ ಅಭಿಪ್ರಾಯ ಪೋಸ್ಟ್ ಮಾಡಿದ್ದರು

  ಪ್ರಗತಿಪರ ಗುಂಪಿನಲ್ಲಿ ಗುರುತಿಸಿಕೊಳ್ಳುವ ಮಹಿಳೆಯೂ ಒಬ್ಬರು, 'ರಾಜ್‌ ಕುಮಾರ್ ನಟನೆ ನನಗೆ ಇಷ್ಟವಾಗುವುದಿಲ್ಲ' ಎಂದು ವೈಯಕ್ತಿಕ ಅಭಿಪ್ರಾಯ ದಾಖಲಿಸಿದ್ದರು. ಆ ಪೋಸ್ಟ್‌ ಗೆ ವಿರುದ್ಧವಾಗಿ ಕೆಲವರು ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡಿದ್ದರು.

  ಅಣ್ಣಾವ್ರ ಮೊದಲ ಭೇಟಿ ಹೇಗಿತ್ತು?: ಜಗ್ಗೇಶ್ ಹಂಚಿಕೊಂಡ ಸವಿ ನೆನಪುಅಣ್ಣಾವ್ರ ಮೊದಲ ಭೇಟಿ ಹೇಗಿತ್ತು?: ಜಗ್ಗೇಶ್ ಹಂಚಿಕೊಂಡ ಸವಿ ನೆನಪು

  ವಿರೋಧಿಸಿ ಪೋಸ್ಟ್ ಹಾಕಿದ್ದ ಬಶೀರ್

  ವಿರೋಧಿಸಿ ಪೋಸ್ಟ್ ಹಾಕಿದ್ದ ಬಶೀರ್

  ವಿದಕ್ಕೆ ವಿರೋಧಿಸುತ್ತಾ, ದಿನಪತ್ರಿಕೆ ಸಂಪಾದಕ ಬಶೀರ್ ಅವರು 'ರಾಜ್‌ಕುಮಾರ್ ನಟನೆ ಇಷ್ಟವಾಗಲಲ್ಲ ಎನ್ನುವುದು ಈ ಮಟ್ಟಿನ ಹೇಯ ನಿಂದನೆಗೆ ಕಾರಣವಾಗುತ್ತದೆ ಎಂದರೆ, ನಾನೂ ಹೇಳುತ್ತೇನೆ: ನನಗೂ ರಾಜ್‌ಕುಮಾರ್ ನಟನೆ ಇಷ್ಟವಾಗಲ್ಲ. ಎಂದು ಬರೆದುಕೊಂಡಿದ್ದರು.

  ಕನ್ನಡ ಚಿತ್ರರಂಗಕ್ಕೆ ಇಂದು ಬಹಳ ವಿಶೇಷ ದಿನ: ಯಾಕೆ ಗೊತ್ತೇ?ಕನ್ನಡ ಚಿತ್ರರಂಗಕ್ಕೆ ಇಂದು ಬಹಳ ವಿಶೇಷ ದಿನ: ಯಾಕೆ ಗೊತ್ತೇ?

  ಹೊಸ ಪೋಸ್ಟ್ ಹಾಕಿರುವ ಸಂಪಾದಕ ಬಶೀರ್

  ಹೊಸ ಪೋಸ್ಟ್ ಹಾಕಿರುವ ಸಂಪಾದಕ ಬಶೀರ್

  ಇದರ ವಿರುದ್ದವೇ ಈಗ ನಮ್ಮ ಕರವೇ ಸಂಘಟನೆ ದೂರು ನೀಡಿದೆ. ಬಳಿಕ ಬಶೀರ್ ಅವರು 'ಒಬ್ಬ, ಒಂದು ಹೆಣ್ಣನ್ನು ಕೀಳು ಭಾಷೆಯಲ್ಲಿ ನಿಂದಿಸಿದರೆ ಅದನ್ನು ಖಂಡಿಸುವುದು ಆಕ್ಷೇಪಿಸುವುದು ನಾನು ಡಾ.ರಾಜ್‌ಕುಮಾರ್ ಚಿತ್ರಗಳಿಂದಲೇ ಕಲಿತ ಜೀವನ ಮೌಲ್ಯ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  English summary
  Namma Karave lodged complaint against Kannada Daily editor Basheer for posting against Rajkumar and hurting Rajkumar fan's feeling.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X