For Quick Alerts
  ALLOW NOTIFICATIONS  
  For Daily Alerts

  KGF-2 ಟೀಸರ್ ರಿಲೀಸ್ ಆದ ಬೆನ್ನಲ್ಲೇ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆದ 'RRR' ಸಿನಿಮಾ: ಕಾರಣವೇನು?

  By ಫಿಲ್ಮ್ ಡೆಸ್ಕ್
  |

  ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಕೊನೆಗೂ ರಿಲೀಸ್ ಆಗಿದೆ. ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳು ಕೆಜಿಎಫ್-2 ಟೀಸರ್ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಕೆಜಿಎಫ್-2 ಟೀಸರ್ ನೋಡಿ ಸಂಭ್ರಮಿಸುತ್ತಿದ್ದಾರೆ. ಕನ್ನಡ ಸಿನಿಮಾವೊಂದಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಇಡೀ ಸ್ಯಾಂಡಲ್ ವುಡ್ ದಂಗಾಗಿದೆ.

  KGF 2 ಟೀಸರ್ ರಿಲೀಸ್ ಆದ ಕೂಡಲೆ ಟ್ರೆಂಡ್ ಆಯ್ತು RRR ಸಿನಿಮಾ | Filmibeat Kannada

  ಇದೀಗ ಎಲ್ಲಾ ಕಡೆ ಕೆಜಿಎಫ್-2 ಟೀಸರ್ ದೆ ಹವಾ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್, ಕೆಜಿಎಫ್-2 ಟೀಸರ್ ರಿಲೀಸ್ ಆದ ಬೆನ್ನಲ್ಲೇ ತೆಲುಗಿನ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಅಭಿಮಾನಿಗಳು ಆರ್ ಆರ್ ಆರ್ ಸಿನಿಮಾದ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

  ಕೆಜಿಎಫ್ ಟೀಸರ್ ಸೂಪರ್: ಆದ್ರೂ ಆ ವಿಚಾರಕ್ಕೆ ಬೇಸರಗೊಂಡ ಅಭಿಮಾನಿಗಳು!

  ಅಂದಹಾಗೆ ದಿಢೀರ್ ನೆ ಟ್ರೆಂಡ್ ಸೃಷ್ಟಿಯಾಗಲು ಕಾರಣ ಇಂದು ಆರ್ ಆರ್ ಆರ್ ಸಿನಿಮಾದ ರಿಲೀಸ್ ಡೇಟ್. ಅಂದುಕೊಂಡಂತೆ ಆಗಿದ್ದರೆ ಇವತ್ತು, ಜನವರಿ 8ರಂದು ಆರ್ ಆರ್ ಆರ್ ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಮೊದಲು ಸಿನಿಮಾತಂಡ 2021 ಜನವರಿ 8ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

  ಇದೀಗ ಅಭಿಮಾನಿಗಳು ಆರ್ ಆರ್ ಆರ್ ಸಿನಿಮಾದ ಬಗ್ಗೆ ಅಪ್ ಡೇಟ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದಿದ್ದಾರೆ. ಆರ್ ಆರ್ ಆರ್ ಸಿನಿಮಾಗಾಗಿ ವರ್ಷದಿಂದ ಕಾಯುತ್ತಿರುವ ಅಭಿಮಾನಿಗಳಿಗ ನಿರ್ದೇಶಕ ರಾಜಮೌಳಿ ಬೆನ್ನಬಿದ್ದಿದ್ದಾರೆ. ಅಲ್ಲದೆ ಆರ್ ಆರ್ ಆರ್ ಸಿನಿಮಾದಿಂದ ಸದ್ಯ ರಿಲೀಸ್ ಆಗಿರುವ ಟೀಸರ್ ಮತ್ತು ಕೆಜಿಎಫ್-2 ಟೀಸರ್ ಗೂ ಹೋಲಿಕೆ ಮಾಡಿ, ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

  ಸದ್ಯ ದಕ್ಷಿಣ ಭಾರತದ ಈ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಈ ಎರಡು ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತೆ ಎನ್ನುವುದು ಕುತೂಹಲ ಮೂಡಿಸಿದೆ. ದಕ್ಷಿಣ ಭಾರತದ ಈ ಎರಡು ಸಿನಿಮಾಗಳ ರಿಲೀಸ್ ಗಾಗಿ ಇಡೀ ಭಾರತೀಯ ಸಿನಿಮಾರಂಗ ಕಾತರದಿಂದ ಕಾಯುತ್ತಿದೆ.

  English summary
  Post Yash statter KGF Chapter 2 teaser release, RRR movie trends on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X