''ಮದ್ವೆಯಾದ ಮೇಲೆ ಕನ್ನಡದಲ್ಲಿ ನನಗೆ ಅವಕಾಶ ಸಿಕ್ತಿಲ್ಲ'' - ಐಂದ್ರಿತಾ ರೇ...!

ಮದುವೆಯಾದರೆ ನಾಯಕಿಯರಿಗೆ ಅವಕಾಶ ಸಿಗಲ್ಲ ಅನ್ನುವ ಮಾತು ಇದೆ. ಇದಕ್ಕೆ ಪೂರಕವಾಗಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮದುವೆಯಾದ ಮೇಲೆ ಅನೇಕ ನಾಯಕಿಯರು ಸ್ವ ಇಚ್ಚೆಯಿಂದ ತೆರೆ ಮರೆಗೆ ಸರಿದಿದ್ದಾರೆ. ಇನ್ನೂ ಹಲವರನ್ನು ಜನರೇ ಮರೆತು ಹೋಗಿದ್ದಾರೆ. ಇನ್ನೂ ಕೆಲವರನ್ನು ಚಿತ್ರರಂಗದವರು ಮರೆತಿದ್ದಾರೆ. ಇದಕ್ಕೆ ಐಂದ್ರಿತಾ ರೇ ಅತ್ಯುತ್ತಮ ಉದಾಹರಣೆ.

ಹೌದು, ಐಂದ್ರಿತಾ ರೇ.. ಚಿಗರೆ ಕಂಗಳ ಚೆಲುವೆ. ಒಂದ್ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಇವರ ಮೆರವಣಿಗೆ ಹೊರಟಿತ್ತು. ಮನಸಾರೆ ಇವರನ್ನು ಒಂದು ವರ್ಗ ಇಷ್ಟವೂ ಪಟ್ಟಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಸಾಲು ಸಾಲು ಸಿನಿಮಾಗಳಲ್ಲಿ ಐಂದ್ರಿತಾ ಆಕ್ಟ್ ಮಾಡಿದರು. ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡರು.

Post-marriage I am not receiving offers in the Kannada film industry says Aindrita Ray

ಇಂಥಾ ಆಂಡಿ ಈಗ ಎಲ್ಲಿಯೂ ಕಾಣ್ತಿಲ್ಲ. 2022ರಲ್ಲಿ ಬಿಡುಗಡೆಯಾದ ತಿಮ್ಮಯ್ಯ & ತಿಮ್ಮಯ್ಯ ಚಿತ್ರವೇ ಕೊನೆ. ಐಂದ್ರಿತಾ ಮರಳಿ ಕನ್ನಡದ ಬೆಳ್ಳಿ ಪರದೆಯ ಮೇಲೆ ಕಾಣಿಸಲಿಲ್ಲ. ಹೀಗಾಗಿ ಐಂದ್ರಿತಾ ಎಲ್ಲಿ ಹೋದರು ಅನ್ನುವ ಪ್ರಶ್ನೆ ಅನೇಕರಲ್ಲಿತ್ತು. ಈ ಪ್ರಶ್ನೆಗೆ ಈಗ ಖುದ್ದು ಐಂದ್ರಿತಾ ಉತ್ತರ ಕೊಟ್ಟಿದ್ದಾರೆ. ಅವಕಾಶ ಸಿಕ್ತಿಲ್ಲವೆಂದಿದ್ದಾರೆ.

ಹೌದು, ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಂದ್ರಿತಾ, ಕನ್ನಡದಲ್ಲಿ ಒಳ್ಳೇಯ ಅವಕಾಶಕ್ಕೆ ಕಾಯುತ್ತಿದ್ದೇನೆ, ಆದರೆ ಮದುವೆಯಾದ ನಂತರ ನನ್ನ ಕನ್ನಡ ಇಂಡಸ್ಟ್ರೀ ರಿಜೆಕ್ಟ್ ಮಾಡಿದೆ ಎಂದಿದ್ದಾರೆ. ದಿಗಂತ್ ಗೆ ನಾನು ಆಕ್ಟಿಂಗ್ ಮಾಡುವುದು ಇಷ್ಟ, ಆದರೆ ಮದುವೆಯಾದ ಮೇಲೆ ಆಫರ್ ಸಿಕ್ತಿಲ್ಲ. ಯಾರನ್ನ ಬ್ಲೇಮ್ ಮಾಡುವುದು. ನಿರ್ಮಾಪಕರಿಗಾ, ಆಡಿಯನ್ಸ್‌ಗಾ, ಇಂಡಸ್ಟ್ರೀಗಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಮದುವೆ ಮುಂಚೆ ತುಂಬಾ ಅವಕಾಶಗಳು ಬರುತ್ತಿದ್ದವು, ಆದರೆ ಈಗ ಯಾವುದು ಸಿಕ್ತಿಲ್ಲ ಎಂದಿರುವ ಐಂದ್ರಿತಾ ಹಾಗಂಥ ನಾನು ಚಿತ್ರರಂಗದಿಂದ ದೂರವಾಗಿಲ್ಲ. ಒಳ್ಳೇಯ ಕಥೆಗೆ ಕಾಯ್ತಿದ್ದೇನೆ ಎಂದಿದ್ದಾರೆ. ಕಥೆ ಸಿಕ್ಕರೆ ಖಂಡಿತ ಮಾಡುತ್ತೇನೆ ಎಂದಿದ್ಧಾರೆ.

Post-marriage I am not receiving offers in the Kannada film industry says Aindrita Ray

ಇನ್ನೂ.. ತಮ್ಮ ಕನಸಿನ ಪಾತ್ರದ ಕುರಿತು ಕೂಡ ಮಾತನಾಡಿರುವ ಐಂದ್ರಿತಾ ನನಗೆ ಮಹಿಳಾ ಪ್ರಧಾನ ಸಿನಿಮಾ ಇಷ್ಟ ಆದರೆ ಇಲ್ಲಿ ಅದಕ್ಕೆ ಮಾರುಕಟ್ಟೆ ಇಲ್ಲ ಹೀಗಾಗಿ ಲವ್, ರೊಮ್ಯಾನ್ಸ್, ಆಕ್ಷನ್ ಹೀಗೆ ಎಲ್ಲ ಅಂಶ ಇರುವ ಚಿತ್ರಗಳೇ ಇಷ್ಟ ಅಂದಿದ್ದಾರೆ. ಕಮರ್ಷಿಯಲ್ ಚಿತ್ರಗಳನ್ನೇ ಹಿಂದೆ ಮಾಡಿಕೊಂಡು ಬಂದಿದ್ದೇನೆ, ಮುಂದೆಯೂ ಕಮರ್ಷಿಯಲ್ ಚಿತ್ರಗಳನ್ನೇ ಮಾಡುವ ಆಸೆ ಇದೆ ಎಂದಿದ್ದಾರೆ.

ಅಂದ್ಹಾಗೇ ಐಂದ್ರಿತಾ ಈ ಎರಡು ಮೂರು ವರ್ಷದಲ್ಲಿ ಕನ್ನಡ ಚಿತ್ರಗಳನ್ನ ಮಾಡಿಲ್ಲ. ಆದರೆ ಐಂದ್ರಿತಾ ಬೆಂಗಾಲಿಯಲ್ಲೊಂದು ಸಿನಿಮಾ ಮಾಡಿದ್ದಾರೆ. ಹಿಂದಿಯಲ್ಲಿ ಎರಡು ಮೂರು ವೆಬ್ ಸೀರಿಸ್‌ಗಳಿಗೆ ಮುಖಕ್ಕೆ ಬಣ್ಣ ಹಚ್ಚಿ ಬಂದಿದ್ದಾರೆ. ಹೀಗಾಗಿ ಅಲ್ಲಿ ಅವಕಾಶ ಸಿಕ್ತಿವೆ. ಆದರೆ ನನಗೆ ಇಲ್ಲಿ ಅವಕಾಶ ಬೇಕು, ಕನ್ನಡ ಚಿತ್ರರಂಗದಲ್ಲಿಯೇ ನಾನು ಇರಬೇಕು, ಈ ಕಾರಣಕ್ಕೆ ಅವಕಾಶವನ್ನು ಎದುರು ನೋಡುತ್ತಿದ್ದೇನೆ.. ಕಾಯುತ್ತಿದ್ದೇನೆ ಎಂದು ತಮ್ಮ ಮಾತು ಮುಗಿಸಿದ್ದಾರೆ ಐಂದ್ರಿತಾ ರೇ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X